ರಾಜ್ಯದಲ್ಲಿ ಇನ್ನೂ ಒಂದು ವಾರ ತಾಪಮಾನ ಹೆಚ್ಚಳ ಮುಂದುವರಿಕೆ, ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆ ನಿರೀಕ್ಷೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈಗಾಗಲೇ ಮಳೆ ಆಗ್ತಿದ್ದು, ಕೆಲೆವೆಡೆ ತೀವ್ರ ಬಿಸಿಲಿನ ತಾಪಮಾನ ಜನರನ್ನು ಕಂಗೆಡಿಸಿದೆ. ಹವಾಮಾನ ಇಲಾಖೆ ಮಾಹಿತಿ ಪ್ರಕಾರ, ಮುಂದಿನ ಒಂದು ವಾರ ರಾಜ್ಯದಾದ್ಯಂತ ತಾಪಮಾನ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ಹಲವು ಜಿಲ್ಲೆಗಳಲ್ಲಿ 40ರಿಂದ 42 ಡಿಗ್ರಿ ವರೆಗೆ ತಾಪಮಾನ ಏರಿಕೆ
ರಾಜಧಾನಿ ಬೆಂಗಳೂರಿನಲ್ಲಿ ಈಗಾಗಲೇ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಕನಿಷ್ಠ ತಾಪಮಾನ 22 ಡಿಗ್ರಿಯಷ್ಟಿದೆ. ಇನ್ನು ಉತ್ತರ ಕರ್ನಾಟಕ ಭಾಗದ ರಾಯಚೂರು ಹಾಗೂ ಕಲಬುರಗಿಯಲ್ಲಿ ಉಷ್ಣಾಂಶ 40-41 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಮುಂದಿನ ದಿನಗಳಲ್ಲಿ ಹಲವು ಜಿಲ್ಲೆಗಳಲ್ಲಿ 40ರಿಂದ 42 ಡಿಗ್ರಿವರೆಗೆ ತಾಪಮಾನ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
READ THIS : ಮತ್ತೆ ಶುರುವಾಯ್ತು ಜನಿವಾರ ವಿವಾದ – ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಯ ಜನಿವಾರ ತೆಗೆಸಿದ್ರಾ .?

ಗುಡುಗು ಸಹಿತ ಸಾಧಾರಣಮಳೆ
ಕರಾವಳಿ ಜಿಲ್ಲೆಗಳಲ್ಲಿ ಉಷ್ಣದ ಅಲೆ ಮುಂದುವರಿಯುತ್ತಿದ್ದು, ಕೆಲವೆಡೆ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯೂ ಇದೆ. ಬಿಸಿಲಿನ ತೀವ್ರತೆಯಿಂದ ಜನರು ಈಗಾಗಲೇ ಬಳಲುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಜನರಿಗೆ ಮುನ್ನೆಚ್ಚರಿಕೆ ಸೂಚನೆಗಳು:
- ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಅನಗತ್ಯವಾಗಿ ಹೊರಗೆ ಹೋಗುವುದನ್ನು ತಪ್ಪಿಸಿ
- ನಿಯಮಿತವಾಗಿ ನೀರು ಹಾಗೂ ತಂಪು ಪಾನೀಯಗಳನ್ನು ಸೇವಿಸಿ
- ಎಳನೀರು, ಮಜ್ಜಿಗೆ, ಹಣ್ಣಿನ ರಸಗಳನ್ನು ಹೆಚ್ಚು ಸೇವನೆ ಮಾಡಿ
- ತಿಳಿ ಬಣ್ಣದ, ಸಡಿಲವಾದ ಹತ್ತಿ ಬಟ್ಟೆ ಧರಿಸಿ
- ಹೊರಗೆ ಹೋಗುವಾಗ ಛತ್ರಿ ಅಥವಾ ಟೋಪಿ ಬಳಸಿಕೊಳ್ಳಿ
- ಕಾಫಿ, ಟೀ ಹಾಗೂ ಹೆಚ್ಚಿನ ಸಕ್ಕರೆಯ ಪಾನೀಯಗಳ ಸೇವನೆ ಕಡಿಮೆ ಮಾಡಿ
MUST WATCH : ಚಿನ್ನಸ್ವಾಮಿಯಲ್ಲಿಂದು ಹೈವೋಲ್ಟೇಜ್ ಮ್ಯಾಚ್ – ತವರಿನಲ್ಲಿ RCBಗೆ ಇದು ಕೊನೆ ಪಂದ್ಯ





