ಇ.ಡಿ ದಾಳಿಗೆ ಸಂಬಂಧಿಸಿದಂತೆ ಕಾಂಗ್ರೆಸನ್ನು BJP ಟೀಕಿಸಿದೆ.

ಭ್ರಷ್ಟಾಚಾರವೇ ಕಾಂಗ್ರೆಸ್ನ ಅಸಲಿ ಗ್ಯಾರಂಟಿ ಎಂದು ಇಡಿ ದಾಳಿಗೆ ಸಂಬಂಧಿಸಿದಂತೆ ಬಿಜೆಪಿ ಟೀಕಿಸಿದೆ.
ಕಾಂಗ್ರೆಸ್ ಸರ್ಕಾರದ ಭ್ರಷ್ಟ ಮುಖವಾಡವನ್ನು ಕಳಚಿ ಹಾಕಿದೆ
BJP ತನ್ನ ಎಕ್ಸ್ ಖಾತೆಯಲ್ಲಿ ಬಿಟ್ಕಾಯಿನ್ ಹಗರಣ ಸಂಬಂಧ ED ದಾಳಿ ನಡೆಸಿರುವ ಬಗ್ಗೆ ಕಾಂಗ್ರೆಸ್ಅನ್ನು ಟೀಕಿಸಿದೆ. ಭ್ರಷ್ಟಾಚಾರವೇ ಕಾಂಗ್ರೆಸ್ನ ಅಸಲಿ ಗ್ಯಾರಂಟಿ. ಬಿಟ್ಕಾಯಿನ್ ಹಗರಣದ ಕರಾಳ ಸತ್ಯ ಈಗ ದಿನೇ ದಿನೇ ಬಯಲಾಗುತ್ತಿದೆ. ಅಕ್ರಮ ಹಣ ವರ್ಗಾವಣೆ ಆರೋಪದಡಿ ಕಾಂಗ್ರೆಸ್ ಶಾಸಕ, ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್ ಹಾಗೂ ಅವರ ಪುತ್ರ ನಲಪಾಡ್ ನಿವಾಸಗಳ ಮೇಲೆ ನಡೆದಿರುವ ಇಡಿ ದಾಳಿಯೇ ಕಾಂಗ್ರೆಸ್ ಸರ್ಕಾರದ ಭ್ರಷ್ಟ ಮುಖವಾಡವನ್ನು ಕಳಚಿ ಹಾಕಿದೆ ಎಂದಿದೆ.

READ THIS : ಫೈರಿಂಗ್ ಮಾಡಿ ಮಚ್ಚಿನಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ!
BJP –`ಬಿಟ್ಕಾಯಿನ್’ ದಂಧೆಯ ಬಗ್ಗೆ ನಿಮ್ಮ ಉತ್ತರೇನು?
ಹಗರಣದ ರೂವಾರಿ ಶ್ರೀಕಿ ಜೊತೆಗಿನ ಇವರ ಅಕ್ರಮ ವ್ಯವಹಾರಗಳು ಹಾಗೂ ಕಪ್ಪುಹಣದ ದಂಧೆ ರಾಜ್ಯದ ಜನತೆಗೆ ಮಾಡಿದ ಬಹುದೊಡ್ಡ ದ್ರೋಹವಾಗಿದೆ. ಸದಾ ನೀತಿಪಾಠ ಹೇಳುವ ಸಿಎಂ ಸಿದ್ದರಾಮಯ್ಯ ಅವರೇ, ನಿಮ್ಮ ಶಾಸಕರ ಈ `ಬಿಟ್ಕಾಯಿನ್’ ದಂಧೆಯ ಬಗ್ಗೆ ನಿಮ್ಮ ಉತ್ತರೇನು? ಎಂದು ಕೇಳಿ ಆಗ್ರಹಿಸಿದೆ.

MUST WATCH : ತೆರಿಗೆ ಕಟ್ಟುತ್ತಿದ್ದರೂ ಮಂಡಿಪೇಟೆದಾರರಿಗೆ ಸಿಗ್ತಿಲ್ಲ ಮೂಲಭೂತ ಸವಲತ್ತು..!




