ಗುಂಡು ಹಾರಿಸಿ, ಬಳಿಕ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿ murder!

ಹಾಡಹಗಲೇ ಗುಂಡು ಹಾರಿಸಿ ನಂತರ ಮಚ್ಚಿನಿಂದ ಕೊಚ್ಚಿ ದುಷ್ಕರ್ಮಿಗಳು ವ್ಯಕ್ತಿಯನ್ನು Murder ಮಾಡಿರುವಂತಹ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ನಡೆದಿದೆ. ಬಲರಾಮ ಚೌಕ್ ಸಮೀಪ ಇರ್ಫಾನ್ (42) ಎಂಬ ವ್ಯಕ್ತಿಯ ಭೀಕರ ಹತ್ಯೆ ನಡೆದಿದೆ.

READ THIS : ಕೆಲವೇ ಗಂಟೆಗಳಲ್ಲಿ ಗುಡುಗು ಸಹಿತ ಭಾರೀ ಮಳೆ – ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಕಲಬುರಗಿಯಲ್ಲಿ ಹಾಡ ಹಗಲೇ ಗುಂಡಿನ ಸದ್ದು
‘ಬಾಯ್ ಬಾಯ್’ ಗ್ರೂಪ್ ಮುಖಂಡರಾಗಿದ್ದ ಇರ್ಫಾನ್ ಮೇಲೆ ಮೊದಲು ಗುಂಡು ಹಾರಿಸಿ, ಬಳಿಕ ಮಚ್ಚು ಸೇರಿದಂತೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಸೇವಾಲಾಲ್ ಮಂದಿರದ ಬಳಿ ಬೈಕ್ ಅಡ್ಡಗಟ್ಟಿ ಈ ದುಷ್ಕೃತ್ಯ ಎಸಗಿದ್ದಾರೆ.

ಹಳೆಯ ವೈಷಮ್ಯ Murder ಗೆ ಕಾರಣಾನಾ..?
ಇನ್ನು ಹಳೆಯವೈಷಮ್ಯವೇ ಈ ಹತ್ಯೆಗೆ ಕಾರಣವಾಗಿರಬಹುದು ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಘಟನೆ ನಡೆದ ತಕ್ಷಣ ವಾಡಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸದ್ಯ ಹತ್ಯೆಯಿಂದಾಗಿ ಪಟ್ಟಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
MUST WATCH : ಏಕಾಏಕಿ ಮನೆಯಲ್ಲಿದ್ದ ಸಿಲಿಂಡರ್ ಸ್ಪೋಟ – 2 ಮನೆಗಳು ಛಿದ್ರ ಛಿದ್ರ, ತಪ್ಪಿದ ಭಾರೀ ದುರಂತ




