ಉದ್ಯೋಗ ಹುಡುಕುತ್ತಿರುವವರಿಗೆ ಸುವರ್ಣಾವಕಾಶ – 9 ಸಾವಿರಕ್ಕೂ ಹೆಚ್ಚು Constable ಹುದ್ದೆಗಳಿಗೆ ಅರ್ಜಿ ಆಹ್ವಾನ!

ಕೇಂದ್ರ ರಿಸರ್ವ್ ಪೊಲೀಸ್ ಪಡೆ (CRPF) 2026ನೇ ಸಾಲಿಗೆ ತಾಂತ್ರಿಕ ಮತ್ತು ಟ್ರೇಡ್ಸ್ಮನ್ ವಿಭಾಗದ Constable ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ. ಒಟ್ಟು 9,175 ಹುದ್ದೆಗಳಿಗಾಗಿ ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು, ಯುವ ಉದ್ಯೋಗಾಕಾಂಕ್ಷಿಗಳಿಗೆ ಇದು ದೊಡ್ಡ ಅವಕಾಶವಾಗಿದೆ.
21,700 ರಿಂದ ₹69,100ರವರೆಗೆ ವೇತನ
ಈ ನೇಮಕಾತಿಯಲ್ಲಿ 9,096 ಪುರುಷರು ಮತ್ತು 79 ಮಹಿಳೆಯರಿಗೆ ಅವಕಾಶ ಕಲ್ಪಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಪೇ ಲೆವೆಲ್-3 ಅಡಿಯಲ್ಲಿ ತಿಂಗಳಿಗೆ ₹21,700 ರಿಂದ ₹69,100ರವರೆಗೆ ವೇತನ ಹಾಗೂ ಕೇಂದ್ರ ಸರ್ಕಾರದ ನಿಯಮಾನುಸಾರ ಇತರೆ ಭತ್ಯೆಗಳು ದೊರೆಯಲಿವೆ.
ವಿವಿಧ ಟ್ರೇಡ್ಸ್ ಹುದ್ದೆಗಳಿಗೆ ನೇಮಕಾತಿ
ಕರ್ನಾಟಕದ ಅಭ್ಯರ್ಥಿಗಳಿಗೂ ಈ ಬಾರಿ ಉತ್ತಮ ಅವಕಾಶ ಲಭ್ಯವಾಗಿದ್ದು, ಪುರುಷರ ವಿಭಾಗದಲ್ಲಿ ಮಾತ್ರ 466 ಹುದ್ದೆಗಳು ಮೀಸಲಾಗಿವೆ. ಡ್ರೈವರ್, ಕುಕ್, ವಾಟರ್ ಕ್ಯಾರಿಯರ್, ಸಫಾಯಿ ಕರ್ಮಚಾರಿ ಸೇರಿದಂತೆ ವಿವಿಧ ಟ್ರೇಡ್ಸ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
READ THIS : ಮಧುಗಿರಿ ಕೋರ್ಟ್ ನ್ಯಾಯಾಧೀಶೆ ಹೃದಯಾಘಾತದಿಂದ ಸಾವು

ಹುದ್ದೆಗಳ ವಿಭಾಗವಾರು ವಿವರಗಳ ಪ್ರಕಾರ, ಡ್ರೈವರ್ ಹುದ್ದೆಗಳಿಗೆ ಅತಿ ಹೆಚ್ಚು 3,176 ಸ್ಥಾನಗಳು ಇದ್ದು, ಬಗ್ಲರ್ (1,263), ಸಫಾಯಿ ಕರ್ಮಚಾರಿ (547), ವಾಟರ್ ಕ್ಯಾರಿಯರ್ (502) ಸೇರಿದಂತೆ ಬಾರ್ಬರ್, ಟೈಲರ್, ಕಾರ್ಪೆಂಟರ್ ಮುಂತಾದ ಹುದ್ದೆಗಳಿಗೂ ನೇಮಕಾತಿ ನಡೆಯಲಿದೆ.
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಯಾವಾಗ ಆರಂಭ?
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಏಪ್ರಿಲ್ 20ರಿಂದ ಆರಂಭವಾಗಲಿದ್ದು, ಮೇ 19 ಕೊನೆಯ ದಿನಾಂಕವಾಗಿದೆ. ಆಸಕ್ತ ಅಭ್ಯರ್ಥಿಗಳು CRPF ಅಧಿಕೃತ ವೆಬ್ಸೈಟ್ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ 011-26160255 ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.
MUST WATCH : ಗಡಿ ತಾಲೂಕಿನಲ್ಲಿ ಮಣ್ಣು ದಂಧೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಆಕ್ರೋಶ




