Madhugiri : ನ್ಯಾಯಾಧೀಶೆ ಎ.ಎನ್. ಕಾಂತಮ್ಮ ಹೃದಯಾಘಾತದಿಂದ ನಿಧನ.

ಹೃದಯಾಘಾತದಿಂದ ನ್ಯಾಯಾಧೀಶೆ ಸಾವನ್ನಪ್ಪಿದ ಘಟನೆ ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ (Madhugiri) ನಡೆದಿದೆ.
ಹೃದಯಾಘಾತದಿಂದ ನಿಧನ
ಮಧುಗಿರಿ ಜೆಎಂಎಫ್ಸಿ ನ್ಯಾಯಾಲಯದಲ್ಲಿ ನ್ಯಾಯಾಧೀಶೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ 43 ವರ್ಷದ ಎ.ಎನ್.ಕಾಂತಮ್ಮ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
READ THIS : SSLCಯಲ್ಲಿ ತೃತೀಯ ಭಾಷೆಗೆ ಗ್ರೇಡ್ ಬೇಡ, ಅಂಕವನ್ನೇ ಕೊಡಿ – ಹೈಕೋರ್ಟ್

ನ್ಯಾಯಾಧೀಶೆ ಕಾಂತಮ್ಮ ಸಾವು
ಮೂಲತಃ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಅಂಚೆದೊಡ್ಡಿ ಗ್ರಾಮದವರಾದ ಕಾಂತಮ್ಮ ಅವರು ಕಳೆದ ಒಂದು ವರ್ಷದಿಂದ ಮಧುಗಿರಿ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರು ಮಧುಗಿರಿ ಪಟ್ಟಣದ ಲೋಕೋಪಯೋಗಿ ಇಲಾಖೆಯ ವಸತಿ ಗೃಹದಲ್ಲಿ ವಾಸವಾಗಿದ್ದರು.
ಹಲವರು ಸಂತಾಪ
ಅವಿವಾಹಿತರಾದ ಇವರು ಇಂದು ಬೆಳಗಿನ ಜಾವ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇವರ ನಿಧನಕ್ಕೆ ಮಧುಗಿರಿ ತಾಲೂಕಿನ ವಕೀಲರು, ನ್ಯಾಯಾಲಯದ ಸಿಬ್ಬಂದಿ ಸೇರಿ ಹಲವರು ಸಂತಾಪ ಸೂಚಿಸಿದ್ದಾರೆ.
MUST WATCH : SSLC ಪರೀಕ್ಷೆಯಲ್ಲಿ GRADE ವಿವಾದ – MARKS ಅನ್ನೇ ಕೊಡಿ ಅಂತಾ ಕೋರ್ಟ್ ಆದೇಶ





