Haveri : ಆಸ್ತಿ ಕಲಹಕ್ಕೆ ಸಂಬಂಧಿಕರ ನಡುವೆ ಗಲಾಟೆ – ಯುವತಿಗರ ಚಾಕು ಇರಿತ.

ಇತ್ತೀಚಿನ ದಿನಗಳಲ್ಲಿ ಸಂಬಂಧಿಕರ ನಡುವೆ ಆಸ್ತಿ ಸಂಬಂಧ ಪ್ರಕರಣಗಳು ಹಿಂಸಾತ್ಮಕಕ್ಕೆ ತಿರುಗುತ್ತಿವೆ. ಇದೀಗ ಆಸ್ತಿ ಕಲಹ ಸಂಬಂಧ ಸಂಬಂಧಿಕರ ನಡುವೆ ಗಲಾಟೆ ಶುರವಾಗಿದ್ದು, ಗಲಾಟೆ ತಾರಕ್ಕೇರಿದ್ದು ವಿದ್ಯಾರ್ಥಿಯೋರ್ವ ಯವತಿಗೆ ಚಾಕು ಇರಿದಿದ್ದಾರೆ. ಈ ಘಟನೆ Haveri ಜಿಲ್ಲೆ ಕರ್ಜಗಿ ಗ್ರಾಮದಲ್ಲಿ ಈ ಭಯಾನಕ ಘಟನೆ ನಡೆದಿದ್ದು, ಗ್ರಾಮಸ್ಥರು ಬೆಚ್ಚಿಬಿದ್ದಿದ್ದರು.
ಗಲಾಟೆ ತಡೆಯಲು ಬಂದ ಯುವತಿಗೆ ಚಾಕು ಇರಿತ
ಮನೆಗೆ ತಗಡು ಹಾಕುವ ವಿಚಾರ ಸಂಬಂಧ ಸಂಬಂಧಿಕರ ನಡುವೆ ಗಲಾಟೆ ಶುರುವಾಗಿದೆ. ಗಲಾಟೆ ತಡೆಯಲು ಬಂದ ಯುವತಿಗೆ ವಿದ್ಯಾರ್ಥಿಯೋರ್ವ ಚಾಕು ಇರಿದೇ ಬಿಟ್ಟಿದ್ದಾನೆ. ನಿರ್ಮಲ ಅಣ್ಣಿ ಎಂಬ ಯುವತಿಗೆ ಗಂಗಾಧರ್ ಇಂಗಳಗುಂದಿ ಎಂಬ ಯುವ ವಿದ್ಯಾರ್ಥಿ ಚಾಕು ಇರಿದಿದ್ದಾನೆ. ಗಲಾಟೆಯನ್ನು ತಡೆಯಲು ಮುಂದಾಗಿದ್ದ ಯುವತಿ ನಿರ್ಮಲಾ ಬೆನ್ನಿಗೆ ಗಂಗಾಧರ್ ಚಾಕು ಇರಿದಿದ್ದಾನೆ. ಚಾಕು ಇರಿತದಿಂದಾಗಿ ರಕ್ತದ ಮಡುವಿನಲ್ಲಿ ನಿರ್ಮಲಾ ಬಿದ್ದು ಒದ್ದಾಡಿದ್ದಳು. ಕೂಡಲೇ ಆಕೆಯನ್ನು ಗ್ರಾಮಸ್ಥರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಗಾಯಾಳು ಯುವತಿ ತನಗೆ ನ್ಯಾಯ ಬೇಕೆಂದು ಆಗ್ರಹಿಸಿದಳು.
READ THIS : ಮುಂದಿನ ಟಾರ್ಗೆಟ್ ನಾನೇ – ಸಚಿವ ಜಮೀರ್ ಅಹ್ಮದ್ ಖಾನ್ ಅಸಮಾಧಾನ..!!

ಯುವತಿಯ ತಾಯಿಯಿಂದ ದೂರು
ಇನ್ನು ಈ ಸಂಬಂಧ ಯುವತಿಯ ತಾಯಿ ದೂರು ನೀಡಿದ್ದು, ವಿದ್ಯಾರ್ಥಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಆಸ್ಪತ್ರೆಗೆ ಇನ್ಸ್ಪೆಕ್ಟರ್ ರವಿಕುಮಾರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ, ಯುವತಿಯ ಕಡೆಯಿಂದ ಪೊಲೀಸರು ಮಾಹಿತಿ ಪಡೆದುಕೊಂಡು ಆರೋಪಿ ಗಂಗಾಧರ್ ವಿರುದ್ಧ ಕ್ರಮಕ್ಕೆ ಮುಂದಾಗುತ್ತಿದ್ದಾರೆ.
MUST WATCH : ಬಿಹಾರದಲ್ಲಿ ನಾಳೆಯಿಂದ ಕೇಸರಿ ದರ್ಬಾರ್- ಹೊಸ ಸಿಎಂ ಯಾರು ಗೊತ್ತಾ…?




