ನಾಲ್ಕು ಪಂದ್ಯಗಳಲ್ಲಿ ಗೆದ್ದು ಅಜೇಯವಾಗಿರುವ RR, ಇಂದು SRH ವಿರುದ್ಧ ಸೆಣಸಲಿದೆ.

ಈ ಬಾರಿ ಐಪಿಎಲ್ನಲ್ಲಿ ಅಜೇಯವಾಗಿರುವ ರಾಜಸ್ಥಾನ ರಾಯಲ್ಸ್ (SRH vs RR) ಗೆಲುವಿನ ಓಟ ಮುಂದುವರಿಸಲು ಕಾಯುತ್ತಿದ್ದು, ಇಂದ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಸೆಣಸಾಡಲಿದೆ. RR ಆಡಿರುವ ಎಲ್ಲಾ 4 ಪಂದ್ಯಗಳಲ್ಲೂ ಗೆದ್ದಿದ್ದರೆ, ಹೈದರಾಬಾದ್ ಆಡಿರುವ 4ರ ಪೈಕಿ 3ರಲ್ಲಿ ಸೋಲನುಭವಿಸಿದೆ. ಹೀಗಾಗಿ ಹೈದರಾಬಾದ್ಗೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ.
ವೈಭವ್ ಸೂರ್ಯವಂಶಿ ಭರ್ಜರಿ ಪ್ರದರ್ಶನ
ರಾಯಲ್ಸ್ ತಂಡದ ಪರವಾಗಿ ಕೇವಲ 15 ವರ್ಷದ ವೈಭವ್ ಸೂರ್ಯವಂಶಿ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ನಾಲ್ಕು ಪಂದ್ಯಗಳಲ್ಲಿ 200 ರನ್ ಕಲೆಹಾಕಿ ಟೂರ್ನಿಯ ಗರಿಷ್ಠ ರನ್ ಸರದಾರರ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಅವರ ಜೊತೆಗೆ ಯಶಸ್ವಿ ಜೈಸ್ವಾಲ್ (183 ರನ್) ಮತ್ತು ಧ್ರುವ್ ಜುರೆಲ್ (176 ರನ್) ತಂಡದ ಬ್ಯಾಟಿಂಗ್ ಶಕ್ತಿಯಾಗಿ ಹೊರಹೊಮ್ಮಿದ್ದಾರೆ.

ಬಲಿಷ್ಠ ಬ್ಯಾಟಿಂಟ್ ಲೈನ್ ಹೊಂದಿದ್ದರೂ ವಿಫಲ
ಇನ್ನೊಂದೆಡೆ, ಸನ್ರೈಸರ್ಸ್ ಹೈದರಾಬಾದ್ ತಂಡ ಬಲಿಷ್ಠ ಬ್ಯಾಟಿಂಗ್ ಲೈನ್ಅಪ್ ಹೊಂದಿದ್ದರೂ ಮೈದಾನದಲ್ಲಿ ಅದನ್ನು ತೋರಿಸಲು ವಿಫಲವಾಗಿದೆ. ವಿಶೇಷವಾಗಿ ಬೌಲಿಂಗ್ ವಿಭಾಗ ತಂಡದ ದುರ್ಬಲ ಕೊಂಡಿಯಾಗಿದೆ.

READ THIS : 42 ವರ್ಷದ ಆಂಟಿ ಬ್ಲಾಕ್ ಮೇಲ್ಗೆ ಸಿಲುಕಿ ಜಿಮ್ ಟ್ರೈನರ್ Suicide!
ಪಿಚ್ ರಿಪೋರ್ಟ್ ಹೇಗಿದೆ?
ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್ ಸ್ವರ್ಗವಾಗಿದೆ ಮತ್ತು ಅಭಿಮಾನಿಗಳು ಸೋಮವಾರ ಹೆಚ್ಚಿನ ಸ್ಕೋರಿಂಗ್ ಪಂದ್ಯವನ್ನು ನಿರೀಕ್ಷಿಸಬಹುದು.
ಇದೇ ಕ್ರೀಡಾಂಗಣದಲ್ಲಿ ಎಸ್ಆರ್ಹೆಚ್ ಮತ್ತು ಆರ್ಆರ್ ನಡುವೆ ನಡೆದ ಕೊನೆಯ ಐಪಿಎಲ್ ಪಂದ್ಯದಲ್ಲಿ, ಸನ್ರೈಸರ್ಸ್ 6 ವಿಕೆಟ್ಗಳಿಗೆ 286 ರನ್ ಗಳಿಸಿತು ಮತ್ತು ಇದಕ್ಕೆ ಪ್ರತಿಯಾಗಿ, ಆರ್ಆರ್ ತನ್ನ 20 ಓವರ್ಗಳ ಕೋಟಾದಲ್ಲಿ 242 ರನ್ಗಳನ್ನು ಗಳಿಸಿತ್ತು.

ಮುಖಾಮುಖಿ ಅಂಕಿ ಅಂಶಗಳು
- ಆಡಿದ ಪಂದ್ಯಗಳು: 21
- SRH ಗೆಲುವು: 12
- RR ಗೆಲುವು: 9
- ಫಲಿತಾಂಶವಿಲ್ಲ: 0

ಪ್ರಮುಖ ದಾಖಲೆಗಳು
- ಅತ್ಯಧಿಕ ಮೊತ್ತ: 286/6 – SRH (2025, ಹೈದರಾಬಾದ್)
- ಕಡಿಮೆ ಮೊತ್ತ: 102/10 – RR (2014, ಅಹಮದಾಬಾದ್)
- ಅತಿದೊಡ್ಡ ಗೆಲುವು (ರನ್ಗಳಿಂದ): RR – 72 ರನ್ (2023)
- ಅತಿದೊಡ್ಡ ಗೆಲುವು (ವಿಕೆಟ್ಗಳಿಂದ): SRH – 9 ವಿಕೆಟ್ (2018)
MUST WATCH : ಕಿಡಿಗೇಡಿಯಿಂದ ಇದೆಂಥಾ ದುಷ್ಕೃತ್ಯ – ಕಾರು- ಬೈಕ್ಗೆ ಬೆಂಕಿ ಇಟ್ಟ ಪಾಪಿ..!





