Suicide : ಆಂಟಿ ಜೊತೆ 28ರ ಯುವಕ ಸಂಬಂಧ? – ಬ್ಲಾಕ್ ಮೇಲ್ಗೆ ಸಿಲುಕಿ ಜಿಮ್ ಟ್ರೈನರ್ ಸಾವು.

ವಿವಾಹಿತೆಯೋರ್ವಳ ಮೋಹಕ್ಕೆ ಬಿದ್ದು, ಬ್ಲ್ಯಾಕ್ಮೇಲ್ಗೆ ಸಿಲುಕಿದ್ದ ಜಿಮ್ ಟ್ರೈನರ್ ನೇಣು ಬಿಗಿದುಕೊಂಡುSuicide ಮಾಡಿಕೊಂಡಿರುವ ದಾರುಣ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲದ ವಾಜರಹಳ್ಳಿಯಲ್ಲಿ ನಡೆದಿದೆ.
ವಿವಾಹಿತ ಮಹಿಳೆಯ ಜೊತೆ ರಿಲೀಶನ್ಶಿಪ್
ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ದಿಲೀಪ್ (28) ಎಂದು ಗುರುತಿಲಾಗಿದೆ. ನೆಲಮಂಗಲದ ವಾಜರಹಳ್ಳಿಯಲ್ಲಿ ಜಿಮ್ ಟ್ರೈನರ್ ಆಗಿ ದಿಲೀಪ್ ಕೆಲ ಮಾಡುತ್ತಿದ್ದ. ಇನ್ನು ಜಿಮ್ನಲ್ಲಿ ದಿಲೀಪ್ಗೆ, 42 ವರ್ಷದ ವಿವಾಹಿತ ಮಹಿಳೆಯ ಪರಿಚಯವಾಗಿತ್ತು. ಆಕೆಗೆ ಮದುವೆಯಾಗಿದ್ರೂ ದಿಲೀಪ್ ಜೊತೆ ರಿಲೇಶನ್ಶಿಪ್ನಲ್ಲಿದ್ದಳು ಎಂಬ ಆರೋಪಗಳು ಕೇಳಿ ಬಂದಿವೆ. ಬಳಿಕೆ ಆ ವಿವಾಹಿತ ಮಹಿಳೆ ದಿಲೀಪ್ಗೆ ಬ್ಲ್ಯಾಕ್ಮೇಲ್ ಮಾಡಲಾರಂಭಿಸಿದ್ದಾಳೆ. ಈ ಒತ್ತಡದಿಂದ ಮನನೊಂದು ದಿಲೀಪ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪವಿದೆ. ಸಾವಿಗೆ ಮುನ್ನ ದಿಲೀಪ್, ಸುನಿತಾ ಎಂಬ ಮಹಿಳೆಗೆ ಕರೆ ಮಾಡಿ ವಿಷಯ ತಿಳಿಸಿ ಪ್ರಾಣ ಕಳೆದುಕೊಂಡಿದ್ದಾನೆ.
READ THIS : ಮೃತಪಟ್ಟ ಬಳಿಕ ಅಂಗಾಂಗ ದಾನ – ಸಾವಿನಲ್ಲೂ ಸಾರ್ಥಕತೆ ಮೆರೆದ ಯುವತಿ!

“ನಿನ್ನ ಸಹೋದರ ರೂಮಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ”
ಇನ್ನು ಘಟನೆಯ ನಂತರ ಸಂಬಂಧದಲ್ಲಿದ್ದಳು ಎನ್ನಲಾದ 42 ರ ವಿವಾಹಿತ ಮಹಿಳೆ ಇನ್ಸ್ಟಾಗ್ರಾಂ ಮೂಲಕ ದಿಲೀಪ್ ಸಹೋದರನಿಗೆ ಮೆಸೇಜ್ ಕಳುಹಿಸಿ, “ನಿನ್ನ ಸಹೋದರ ರೂಮಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ” ಎಂದು ತಿಳಿಸಿದ್ದಾಳೆ.ತಕ್ಷಣ ದಿಲೀಪ್ ಸಹೋದರ ಬಾಗಿಲು ಮುರಿದು ನೋಡಿದಾಗಿ ಈ ಘಟನೆ ಬೆಳಕಿಗೆ ಬಂದಿದೆ.

Suicide – ಪೊಲೀಸರಿಂದ ಪರಿಶೀಲನೆ
ಸದ್ಯ ಮೃತದೇಹವನ್ನು ನೆಲಮಂಗಲ ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ನೆಲಮಂಗಲ ಟೌನ್ ಪೊಲೀಸರು ಹಾಗೂ ಸೋಕೋ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನು ಈ ಸಂಬಂಧ ಹೆಚ್ಚಿನ ತನಿಖೆ ಮುಂದುವರಿದಿದೆ.
MUST WATCH : ಜಿಲ್ಲಾಸ್ಪತ್ರೆಯಲ್ಲಿ ಸಂಬಂಧಿಕರ ಗೋಳು – ಇಲ್ಲಿ ಊಟ ಮಾಡಲು ಜಾಗ ಇಲ್ಲ ಸ್ವಾಮಿ





