Arsikere ಯುವತಿಯೋರ್ವಳು ಸಾವಿನಲ್ಲೂ ಸಾರ್ಥಕತೆ ಮರೆದಿದ್ದಾಳೆ.

ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಮೃತಪಟ್ಟ 18 ವರ್ಷದ ಯುವತಿಯೋರ್ವಳು ತನ್ನ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮರೆದಿದ್ದಾಳೆ.
ಸಾವಿನಲ್ಲೂ ಸಾರ್ಥಕತೆ ಮರೆದ ಯುವತಿ
ಅರಸೀಕೆರೆಯ ಕಾರೇಹಳ್ಳಿ ಗ್ರಾಮದ ನಿವಾಸಿಯಾಗಿದ್ದ ಮೋನಿಕಾ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು. ಏಪ್ರಿಲ್ 5ರಂದು ಸಂಜೆ ಸುಮಾರು 6:30ರ ವೇಳೆಗೆ ಆರ್ಎಂಸಿ ಮಾರುಕಟ್ಟೆ ಸಮೀಪ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ‘ಬ್ರೈನ್ ಡೆತ್’ (ಮಿದುಳು ಸಾವು) ಗೀಡಾಗಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.
READ THIS : Gold Rate|ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ – ಇಂದಿನ ರೇಟ್ ಚೆಕ್ ಮಾಡಿ
ಪೋಷಕರ ಧೈರ್ಯಮಯ ನಿರ್ಧಾರ
ತಮ್ಮ ಮಗಳು ಇನ್ನಿಲ್ಲ ಎಂಬ ಕಹಿಸತ್ಯವನ್ನು ಅರಗಿಸಿಕೊಳ್ಳಲಾಗದ ನೋವಿನಲ್ಲೂ ಮೋನಿಕಾ ಅವರ ಪೋಷಕರು ಒಂದು ಉದಾತ್ತ ನಿರ್ಧಾರ ಕೈಗೊಂಡಿದ್ದು, ಮಗಳ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಇತರರ ಬಾಳಿಗೆ ಬೆಳಕಾಗಿದ್ದಾರೆ.
ಮಣಿಪಾಲ್ ಆಸ್ಪತ್ರೆಯಲ್ಲಿ ಅಂಗಾಂಗ ದಾನ ಪ್ರಕ್ರಿಯೆ
ಯುವತಿಯ ಅಂಗಾಂಗಗಳನ್ನು ನಾಳೆ ಯಶವಂತಪುರದ ಮಣಿಪಾಲ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆಯಲಾಗುವುದು. ಈ ಅಂಗಾಂಗಗಳನ್ನು ಅಗತ್ಯವಿರುವ ರೋಗಿಗಳಿಗೆ ಜೋಡಿಸುವ ಮೂಲಕ ಐದಕ್ಕೂ ಹೆಚ್ಚು ಜನರಿಗೆ ಮರುಜನ್ಮ ನೀಡಲು ಸಿದ್ಧತೆ ನಡೆಸಲಾಗಿದೆ.
ಕುಟುಂಬಸ್ಥರು ಹೇಳಿದ್ದೇನು? – Arsikere
“ನಮ್ಮ ಮಗಳು ದೈಹಿಕವಾಗಿ ನಮ್ಮೊಂದಿಗಿಲ್ಲದಿದ್ದರೂ, ಅವಳ ಅಂಗಾಂಗಗಳ ಮೂಲಕ ಇನ್ನೊಬ್ಬರಲ್ಲಾದರೂ ಬದುಕುತ್ತಾಳೆ ಎಂಬುದು ನಮಗೆ ಸಮಾಧಾನ,” ಎಂದು ಕುಟುಂಬಸ್ಥರು ಹೇಳಿದ್ದಾರೆ.
MUST WATCH : LOVE ಹೆಸರಲ್ಲಿ ಯುವಕನಿಗೆ ಮೋಸ..! – ಯುವತಿಗೆ VEDIO CALL ಮಾಡಿ ಯುವಕ ಸೂಸೈಡ್




