Tumakuru : ವಿಜಯ ಕಾಲೇಜು ವಿದ್ಯಾರ್ಥಿಗಳ ಸಾಧನೆ – ನಾಲ್ವರು ವಿದ್ಯಾರ್ಥಿಗಳು ರ್ಯಾಂಕ್ ಪಡೆದು ಕೀರ್ತಿ

ದ್ವಿತೀಯ PUC ಫಲಿತಾಂಶದಲ್ಲಿ ತುಮಕೂರಿನ ವಿಜಯ ಪಿಯು ಕಾಲೇಜಿನ ವಿದ್ಯಾರ್ಥಿಗಳು ವಿಜಯ ಪತಾಕೆ ಹಾರಿಸಿದ್ದಾರೆ. ವಿಜಯ ಪಿಯು ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ರಾಜ್ಯಕ್ಕೆ ರ್ಯಾಂಕ್ ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಕಾಲೇಜಿನ 105 ಮಂದಿ ವಿದ್ಯಾರ್ಥಿಗಳು ಡಿಸ್ಟಿಂಗ್ಷನ್
ತುಮಕೂರು ನಗರದ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಗಳಲ್ಲಿ ವಿಜಯ ಪಿಯು ಕಾಲೇಜು ಒಂದಾಗಿದ್ದು, ಸುಮಾರು 196 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ನಾಲ್ವರು ಟಾಪರ್ಸ್ ಅಗಿದ್ರೆ, ವಿಜ್ಞಾನ ವಿಭಾಗದಲ್ಲಿ 105 ಮಂದಿ ವಿದ್ಯಾರ್ಥಿಗಳು ಡಿಸ್ಟಿಂಗ್ಷನ್ ಬಂದಿದ್ದಾರೆ.
ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ರೋಹಿತ್ 99% ತೆಗೆದಿದ್ರೆ, ಪ್ರಜ್ವಲ್ ಹಾಗೂ ಹೇಮಂತ್ ಇಬ್ಬರು 98.5% ತೆಗೆದಿದ್ರೆ ವರಲಕ್ಷ್ಮಿ 97.5 % ತೆಗೆಯುವ ಮೂಲಕ ರಾಜ್ಯಕ್ಕೆ ಟಾಪರ್ಸ್ ಆಗಿ, ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಇನ್ನು ವಿಶೇಷ ಅಂದ್ರೆ ಭೌತಶಾಸ್ತ್ರ ವಿಭಾಗದಲ್ಲಿ ನಾಲ್ವರು 100ಕ್ಕೆ 100 ಮಾರ್ಕ್ಸ್ ತೆಗೆದ್ರೆ, ಕನ್ನಡ ಭಾಷೆಯಲ್ಲಿ ಮೂವರು ಮಂದಿ ವಿದ್ಯಾರ್ಥಿಗಳು ನೂರಕ್ಕೆ ನೂರು ಮಾರ್ಕ್ಸ್ ತೆಗೆದಿದ್ರೆ, 9 ಮಂದಿ ವಿದ್ಯಾರ್ಥಿಗಳು ಗಣಿತಶಾಸ್ತ್ರದಲ್ಲಿ ನೂರಕ್ಕೆ ನೂರು ಮಾರ್ಕ್ಸ್ ತೆಗೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.

READ THIS : 10 ಕೋಟಿ ವಂಚನೆ – ಸಿಂಗರ್ ಮಂಗ್ಲಿ ವಿರುದ್ಧ FIR!
ವಿಜಯ ಕಾಲೇಜಿನ ವಿದ್ಯಾರ್ಥಿಗಳು ದೊಡ್ಡಮಟ್ಟದಲ್ಲಿ ಸಾಧನೆ
ವಿಜಯ ಕಾಲೇಜಿನ ವಿದ್ಯಾರ್ಥಿಗಳು ದೊಡ್ಡಮಟ್ಟದಲ್ಲಿ ಸಾಧನೆ ಮಾಡಿದ್ದು, ವಿದ್ಯಾರ್ಥಿಗಳಿಗೆ ಕಾಲೇಜು ಆಡಳಿತ ಮಂಡಳಿ ಸಿಹಿ ಹಂಚಿ ಸಂಭ್ರಮಿಸಿದ್ರು.
ಈ ವೇಳೆ ಮಾತನಾಡಿದ ಟಾಪರ್ಸ್ ವಿದ್ಯಾರ್ಥಿಗಳು ಕಠಿಣ ಪರಿಶ್ರಮ, ಉಪನ್ಯಾಸಕರ ಮಾರ್ಗದರ್ಶನ ಹಾಗೂ ಪಾಲಕರ ಸಹಕಾರವೇ ಈ ಯಶಸ್ಸಿನ ಮೂಲ ಎಂದು ಸಂತಸ ವ್ಯಕ್ತಪಡಿಸಿದರು.

13 ವರ್ಷಗಳಿಂದ ಸಾಧನೆ ಮಾಡ್ತಿರೋ ವಿಜಯ ಕಾಲೇಜು
ಇನ್ನು ಕಳೆದ 13 ವರ್ಷಗಳಿಂದಲೂ ವಿಜಯ ಕಾಲೇಜಿನ ವಿದ್ಯಾರ್ಥಿಗಳು ಸಾಧನೆ ಮಾಡಿಕೊಂಡು ಬರ್ತಾ ಇದ್ದು, ಈ ಬಾರಿಯೂ ಅತ್ಯುನ್ನತ ಸಾಧನೆ ಮಾಡಿ, ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ನಮ್ಮ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಹಾಗೂ ಬೋರ್ಡ್ ಎಕ್ಸಾಂ ನಲ್ಲಿ ಒಳ್ಳೆಯ ಫಲಿತಾಂಶವನ್ನು ತಂದಿದ್ದಾರೆ ಎಂದು ಕಾಲೇಜಿನ ಆಡಳಿತ ಮಂಡಳಿ ಸಂತಸ ವ್ಯಕ್ತಪಡಿಸಿದರು.

Tumakuru – ವಿಜಯ ಪತಾಕೆ ಹಾರಿಸಿದ ವಿಜಯ ಪಿಯು ಕಾಲೇಜು
ವಿಜಯ ಪಿಯು ಕಾಲೇಜು ವಿದ್ಯಾರ್ಥಿಗಳು ಪಿಯು ಫಲಿತಾಂಶದಲ್ಲಿ ವಿಜಯ ಪತಾಕೆ ಹಾರಿಸಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಫಲಿತಾಂಶಗಳ ನಿರೀಕ್ಷೆ ಮೂಡಿಸಿದೆ.
MUST WATCH : ಟಾಪರ್ಸ್ ಆದ VIJAYA COLLEGE ಸ್ಟೂಡೆಂಟ್ಸ್ – ವಿಜಯ ಪತಾಕೆ ಹಾರಿಸಿ ಸಂಭ್ರಮಾಚರಣೆ




