ಬಹುಭಾಷಾ ಗಾಯಕಿ Mangli ಅವರು ಹಾಡುಗಳ ಜೊತೆಗೆ ವಿವಾದಗಳ ಮೂಲಕವು ಸುದ್ದಿಯಾಗುತ್ತಲೇ ಇರುತ್ತಾರೆ.

ಬಹುಭಾಷಾ ಗಾಯಕಿ ಮಂಗ್ಲಿ (ಸತ್ಯವತಿ ರಾಥೋಡ್) ವಿರುದ್ಧ ಸುಮಾರು ₹10 ಕೋಟಿ ವಂಚನೆ ಆರೋಪ ಕೇಳಿಬಂದಿದ್ದು, ಈ ಸಂಬಂಧ ಹೈದರಾಬಾದ್ನಲ್ಲಿ ಪೊಲೀಸ್ ಕೇಸ್ ದಾಖಲಾಗಿದೆ.
ಪ್ರಾಣ ಬೆದರಿಕೆ ಆರೋಪ!
ಒಬ್ಬ ವ್ಯಕ್ತಿ ನೀಡಿದ ದೂರಿನ ಪ್ರಕಾರ, Mangli ಅವರು ತಮ್ಮನ್ನು ಆರ್ಥಿಕವಾಗಿ ವಂಚಿಸಿರುವುದಷ್ಟೇ ಅಲ್ಲದೆ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಈ ದೂರಿನ ಆಧಾರದಲ್ಲಿ ಪೊಲೀಸರು ಮಂಗ್ಲಿ, ಅವರ ಸಹೋದರ ಸೇರಿದಂತೆ ಇನ್ನೂ ಮೂವರ ವಿರುದ್ಧ ಬಿಎನ್ಎಸ್ (BNS) ಸೆಕ್ಷನ್ 351(2) ಮತ್ತು 352 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕೋಟ್ಯಂತರ ರೂಪಾಯಿ ವಂಚನೆ
ಇತ್ತೀಚೆಗೆ ಮಂಗ್ಲಿ ಹೆಸರಿನಲ್ಲಿ ಮೈಕ್ರೋ ಫೈನಾನ್ಸ್ ಆರಂಭಿಸಿ ಕೋಟ್ಯಂತರ ರೂಪಾಯಿ ವಂಚನೆ ಮಾಡುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿತ್ತು. ಆದರೆ ಆ ಆರೋಪಗಳನ್ನು ಮಂಗ್ಲಿ ತಳ್ಳಿಹಾಕಿ ಸ್ಪಷ್ಟನೆ ನೀಡಿದ್ದರು.
READ THIS : ಟಿ20ಯಲ್ಲಿ 4 ಸಾವಿರ ರನ್, 200 ವಿಕೆಟ್ ಪಡೆದು ದಾಖಲೆ ಬರೆದ Jadeja
ಭಕ್ತರ ಭಾವನೆಗಳಿಗೆ ಧಕ್ಕೆ – Mangli
ಇದಕ್ಕೂ ಮೊದಲು ಕೂಡ Mangli ಹಲವು ವಿವಾದಗಳಿಂದ ಸುದ್ದಿಯಾಗಿದ್ದಾರೆ. 2021ರಲ್ಲಿ ಬೋನಾಲು ಹಾಡೊಂದರಲ್ಲಿ ಬಳಸಿದ ಪದಗಳು ಭಕ್ತರ ಭಾವನೆಗಳಿಗೆ ಧಕ್ಕೆ ತಂದಿವೆ ಎಂಬ ಆರೋಪ ಕೇಳಿಬಂದಿತ್ತು. 2025ರ ಜೂನ್ನಲ್ಲಿ ಚೇವೆಳ್ಳಾದ ರೆಸಾರ್ಟ್ನಲ್ಲಿ ನಡೆದ ಅವರ ಹುಟ್ಟುಹಬ್ಬದ ಪಾರ್ಟಿಯ ಮೇಲೆ ಪೊಲೀಸರು ದಾಳಿ ನಡೆಸಿ, ಅನುಮತಿಯಿಲ್ಲದೆ ಮದ್ಯ ಮತ್ತು ಸೌಂಡ್ ಸಿಸ್ಟಮ್ ಬಳಕೆ ಹಾಗೂ ಡ್ರಗ್ಸ್ ಆರೋಪಗಳ ಬಗ್ಗೆ ತನಿಖೆ ನಡೆಸಿದ್ದರು.

ಯಾರು ಈ Mangli
ಅನಂತಪುರ ಜಿಲ್ಲೆಯ ಸತ್ಯವತಿ ರಾಥೋಡ್ ನಂತರ ‘ಮಂಗ್ಲಿ’ ಎಂಬ ಹೆಸರಿನಿಂದ ಗುರುತಿಸಿಕೊಂಡಿದ್ದಾರೆ. ಟಿವಿ ವಾಹಿನಿಗಳಲ್ಲಿ ಜಾನಪದ ಕಲಾವಿದೆಯಾಗಿ ವೃತ್ತಿಜೀವನ ಆರಂಭಿಸಿದ ಅವರು, ಬತುಕಮ್ಮ ಮತ್ತು ಬೋನಾಲು ಹಾಡುಗಳ ಮೂಲಕ ತೆಲಂಗಾಣದ ಮನೆಮಾತಾದರು.
MUST WATCH : TOPPERS ಆದ ತಿಪಟೂರಿನ SVP Vidhyanidhi V-Techno College ಸ್ಟೂಡೆಂಟ್ಸ್





