ಯಾರನ್ನು ಪ್ರೀತಿಸಬೇಡಿ – ಬೆಂಗಳೂರಲ್ಲಿ ಪ್ರೀತಿ ನಿರಾಕರಿಸಿದಿದ್ದಕ್ಕೆ ಡೆತ್ ನೋಟ್ ಬರೆದಿಟ್ಟು ಯುವಕ Suicide!

ನಿನ್ನೆ ಬಾಗಲಕೋಟೆ ಜಿಲ್ಲೆಯಲ್ಲಿ ಕೇವಲ ಮನಸ್ತಾಪಕ್ಕೆ ಇಬ್ಬರು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಅಂತಹದ್ದೇ ಒಂದು ಘಟನೆ ಬೆಂಗಳೂರಲ್ಲಿ ನಡೆದಿದೆ.
ದುರಂತ ಅಂತ್ಯ ಕಂಡ ಯುವಕ
ಪ್ರೀತಿ ನಿರಾಕರಿಸಿದ್ದಕ್ಕೆ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಲಹಂಕ ನ್ಯೂಟೌನ್ನಲ್ಲಿ ನಡೆದಿದೆ. Suicide ಮಾಡಿಕೊಂಡ ಯುವಕನನ್ನು ಅಭಿಷೇಕ್ (23) ಎಂದು ಗುರುತಿಸಲಾಗಿದೆ. ಇತ್ತೀಚೆಗಷ್ಟೇ ಅಭಿಷೇಕ್ ಖಾಸಗಿ ಕಾಲೇಜಿನಲ್ಲಿ ಬಿಕಾಂ ಮುಗಿಸಿದ್ದ.
ಪ್ರೀತಿ ನಿರಾಕರಿಸಿದಿದ್ದಕ್ಕೆ ಸಾವು
ಅಭಿಷೇಕ್ ತನ್ನ ಕಾಲೇಜಿನ ಯುವತಿಯ ಜೊತೆ ಪ್ರೀತಿ ಮಾಡುತ್ತಿದ್ದ. ಕಳೆದ ಆರೇಳು ವರ್ಷದಿಂದ ಇಬ್ಬರು ಪ್ರೀತಿ ಮಾಡುತ್ತಿದ್ದರು. ಇಬ್ಬರ ಪ್ರೀತಿ ವಿಷಯ ಹುಡುಗಿ ಮನೆಯವರಿಗೆ ಗೊತ್ತಾಗಿತ್ತು. ಯುವತಿಯ ಪೋಷಕರು ಅಭಿಷೇಕ್ ಜೊತೆ ಮದುವೆಗೆ ನಿರಾಕರಿಸಿದ್ದಾರೆ. ಹೀಗಾಗಿ ಯುವತಿ ಅಭಿಷೇಕ್ನನ್ನು ಅವೈಡ್ ಮಾಡಲು ಶುರು ಮಾಡಿದ್ದಾಳೆ. ಇದರಿಂದ ಮನನೊಂದ ಅಭಿಷೇಕ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
READ THIS : ಕರ್ನಾಟಕ ದ್ವಿತೀಯ PUC ಫಲಿತಾಂಶ ದಾಖಲೆ ಮಟ್ಟದಲ್ಲಿ ಏರಿಕೆ

ಡೆತ್ ನೋಟ್ ಬರೆದಿಟ್ಟು ಯುವಕ Suicide!
ಸಾವಿಗೂ ಮುನ್ನ ಅಭಿಷೇಕ್ಡೆತ್ನೋಟ್ ಬರೆದಿಟ್ಟು ನನ್ನ ಜೊತೆ ಇದ್ದವಳು, ಅವಳಿಗೀಗ ಏನಾಯಿತೆಂದು ನನಗೆ ತಿಳಿಯುತ್ತಿಲ್ಲ. ನನ್ನ ಜೀವನ ಪ್ರೀತಿಯಿಂದಲೇ ತುಂಬಿ ತುಳುಕುತ್ತಿತ್ತು. ಈಗ ಆ ಪ್ರೀತಿಯೇ ಅಂತ್ಯವಾಗಿದೆ. ಆದ್ದರಿಂದ ನಾನು ನನ್ನ ಜೀವನವನ್ನು ಕೊನೆಗೊಳಿಸುತ್ತಿದ್ದೇನೆ. ಎಲ್ಲರಿಗೂ ಹೇಳುತ್ತಿದ್ದೇನೆ ದಯವಿಟ್ಟು ಯಾರನ್ನೂ ಪ್ರೀತಿಸಬೇಡಿ.
ಈಗಿನ ಕಾಲದಲ್ಲಿ ಎಲ್ಲರೂ ವಂಚಕರೇ. ನನ್ನ ಎಲ್ಲಾ ಸ್ನೇಹಿತರಿಗೆ ಗುಡ್ ಬೈ. ಆ ಪ್ರೀತಿಯ ಕಾರಣದಿಂದ ನಿಮಗೆಲ್ಲರಿಗೂ ಸಮಯ ನೀಡಲು ಸಾಧ್ಯವಾಗಲಿಲ್ಲ. ಎಲ್ಲರೂ ನನ್ನನ್ನು ಪ್ರೀತಿಸುವುದರ ಜೊತೆಗೆ ನನ್ನೊಂದಿಗೆ ಸಂತೋಷವಾಗಿದ್ದರು. ಆದರೆ ನಾನು ನಿಮಗ್ಯಾರಿಗೂ ಸಮಯ ನೀಡಲು ಸಾಧ್ಯವಾಗಲಿಲ್ಲ. ನನ್ನನ್ನು ಕ್ಷಮಿಸಿ ಎಂದು ಬರೆದುಕೊಂಡಿದ್ದಾನೆ.
Suicide – ದೂರು ದಾಖಲು
ಸದ್ಯ ಘಟನೆ ಸಂಬಂಧ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
MUST WATCH : 2028ಕ್ಕೆ ಕ್ಷೇತ್ರ ಮರು ವಿಗಂಡಣೆ ಆಗುತ್ತೆ – ಶಾಸಕ SURESH GOWDA SHOCKING ಹೇಳಿಕೆ..!





