Fire Incident : ತಡರಾತ್ರಿ ಹಸು ಶೆಡ್ಗೆ ಆಕಸ್ಮಿಕ ಬೆಂಕಿ – ಬೆಂಕಿಯ ಕೆನ್ನಾಲಿಗೆಗೆ 6 ಹಸುಗಳ ದಾರುಣ ಸಾವು.

ಬೆಂಗಳೂರು ನಗರದ ಡಿಜೆ ಹಳ್ಳಿ ಬಳಿಯ ಶಾಂಪುರ ರಸ್ತೆಯಲ್ಲಿ ತಡರಾತ್ರಿ Fire Incident ಸಂಭವಿಸಿದ್ದು, ಹಸು ಶೆಡ್ ಬೆಂಕಿಗಾಹುತಿಯಾಗಿ ಸುಮಾರು 6 ಹಸುಗಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಬೆಂಕಿಯ ತೀವ್ರತೆಗೆ ಹಸು ಶೆಡ್ ಸುಟ್ಟು ಭಸ್ಮ
ಇನ್ನು ತಡರಾತ್ರಿ 1.45 ರ ಸುಮಾರಿಗೆ ಅಂಗಡಿಗೆ ಬೆಂಕಿ ಹೊತ್ತಿಕೊಂಡಿದ್ದು. ಬೆಂಕಿಯ ತೀವ್ರತೆ ಹೆಚ್ಚಾಗಿ ಪಕ್ಕದಲ್ಲಿದ್ದ ಹಸು ಶೆಡ್ಗೂ ಬೆಂಕಿ ಹರಡಿದೆ. ಪರಿಣಾಮ ಬೆಂಕಿಯ ಕೆನ್ನಾಲಿಗೆಗೆ ಶೆಡ್ನಲ್ಲಿದ್ದ ಸುಮಾರು 20 ಹಸುಗಳ ಪೈಕಿ, 6 ಹಸುಗಳು ಬೆಂಕಿಯ ತೀವ್ರತೆಗೆ ಸುಟ್ಟು ಕರಕಲಾಗಿದ್ರೆ, ಮೂರು ಹಸುಗಳಿಗೆ ಸುಟ್ಟ ಗಾಯಗಳಾಗಿವೆ. ಕೂಡಲೇ ಸ್ಥಳೀಯರು 14 ಹಸುಗಳನ್ನ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ, ಬೆಂಕಿಯನ್ನು ನಿಯಂತ್ರಿಸಿದ್ದಾರೆ.

READ THIS : ತುಮಕೂರಲ್ಲಿ ಬೈಕ್ ಹಾಗೂ ಕಾರಿನ ನಡುವೆ Accident – ಸವಾರ ಬಚಾವ್
Fire Incident – ಪ್ರಕರಣ ದಾಖಲು
ಇನ್ನು ಬೆಂಕಿ ಅವಘಡದಲ್ಲಿ ಒಂದು ಟಾಟಾ ಏಸ್ ವಾಹನ ಹಾಗೂ ನಾಲ್ಕು ಬೈಕ್ಗಳು ಸುಟ್ಟು ಕರಕಲಾಗಿದ್ದು, ಮೃತಪಟ್ಟ ಹಸುಗಳುಶ್ರೀನಿವಾಸ್ ಎಂಬುವರಿಗೆ ಸೇರಿದ್ದು, ಅವರು ಕಳೆದ 20 ವರ್ಷಗಳಿಂದ ಹಸು ಸಾಕಾಣಿಕೆ ಮಾಡುತ್ತಿದ್ದು, ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಸದ್ಯ ಈ ಸಂಬಂಧ ಡಿಜೆ ಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

MUST WATCH : ಶಿರಾದಲ್ಲಿ ಕುಡಿಯುವ ನೀರಿಗೆ ಸಂಕಷ್ಟ- ಖಾಲಿ ಬಿಂದಿಗೆ ಹಿಡಿದು ಜನರಿಂದ ಪ್ರೊಟೆಸ್ಟ್..!




