ತುಮಕೂರು – ಕುಣಿಗಲ್ ರಸ್ತೆಯಲ್ಲಿ ಮತ್ತೊಂದು Accident – ಗಾಯಾಳನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ತಹಶೀಲ್ದಾರ್.

ಕಾರು ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ಬೈಕ್ ಸವಾರನಿಗೆ ಗಂಭೀರ ಗಾಯಗಳಾಗಿರುವ ಘಟನೆ ತುಮಕೂರು-ಕುಣಿಗಲ್ ರಸ್ತೆಯ ನಾಗವಲ್ಲಿ ಬಳಿ ನಡೆದಿದೆ. ತುಮಕೂರಿನ ಮಲ್ಲಸಂದ್ರ ಪಾಳ್ಯ ನಿವಾಸಿರಾಮಕೃಷ್ಣ ಗಾಯಗೊಂಡ ಯುವಕನಾಗಿದ್ದಾನೆ.

READ THIS : ಮುಡಾ ಕೇಸ್ನಲ್ಲಿ CM ಸಿದ್ದುಗೆ ಮತ್ತೊಂದು ಸಂಕಷ್ಟ..!
ತುಮಕೂರಿನಲ್ಲಿ Accident – ಮಾನವೀಯತೆ ಮೆರೆದ ತಹಶೀಲ್ದಾರ್
ಇನ್ನು ಭೀಕರ ಅಪಘಾತವಾಗಿ ಬೈಕ್ ಸವಾರ ರಸ್ತೆ ಬದಿ ಬಿದ್ದು ಒದ್ದಾಡುತ್ತಿದ್ದರು. ಕೂಡಲೇ ಆಂಬುಲೆನ್ಸ್ಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಆದರೆ ಅರ್ಧಗಂಟೆ ಆದರೂ ಕೂಡ ಆಂಬುಲೆನ್ಸ್ ಬರಲಿಲ್ಲ. ಆಂಬುಲೆನ್ಸ್ಗಾಗಿ ಸ್ಥಳೀಯರು ಕಾಯ್ತಾ ಇದ್ದು, ಇದೇ ವೇಳೆ ಮಾರ್ಗಮಧ್ಯೆ ಕೆಲಸದ ನಿಮಿತ್ತ ತಹಶೀಲ್ದಾರ್ ರಾಜೇಶ್ವರಿ ಅವರು ತೆರಳುತ್ತಿದ್ದರು. ಅಪಘಾತವಾಗಿ ಗಾಯಾಳು ಸ್ಥಿತಿಯನ್ನು ಕಂಡ ತಹಶೀಲ್ದಾರ್ ರಾಜೇಶ್ವರಿ ಕೂಡಲೇ ವಾಹನವನ್ನು ನಿಲ್ಲಿಸಿ, ತಮ್ಮ ವಾಹನದಲ್ಲೇ ಗಾಯಾಳುವನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಮತ್ತೊಮ್ಮೆ ಮಾನವೀಯತೆ ಮೆರೆದಿದ್ದಾರೆ.

ತಹಶೀಲ್ದಾರ್ ಅವರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ
ಇನ್ನು ಕಳೆದ ಬಾರಿಯೂ ಅಪಘಾತವಾಗಿ ಬಿದ್ದಿದ್ದ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದ ತಹಶೀಲ್ದಾರ್ ರಾಜೇಶ್ವರಿ ಇದೀಗ ಮತ್ತೊಮ್ಮೆ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದಿದ್ದು, ತಹಶೀಲ್ದಾರ್ ಅವರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗ್ತಿದೆ.
MUST WATCH : IRANನ SUPREME LEADERಗೆ ಇದೆಂಥಾ ಸ್ಥಿತಿ ? – ಇತ್ತ ಇರಾನ್ಗೆ ಅಮೆರಿಕ ಕೊನೆಯ DEADLINE..!




