ಮುಡಾ ಕೇಸ್ನಲ್ಲಿ CM ಸಿದ್ದರಾಮಯ್ಯಗೆ ಮತ್ತೆ ಸಂಕಷ್ಟ – ಬಿ ರಿಪೋರ್ಟ್ ಪ್ರಶ್ನಿಸಿ ED ಇಂದಲೂ ಮೇಲ್ಮನವಿ ಸಲ್ಲಿಕೆ!

ಮುಡಾ ಹಗರಣ ಪ್ರಕರಣದಲ್ಲಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬಕ್ಕೆ ಕಠಿಣ ಸಂಕಷ್ಟ ಎದುರಾಗಿದೆ. ಪ್ರಕರಣ ಸಂಬಂಧ ಕರ್ನಾಟಕ ಹೈಕೋರ್ಟ್ಗೆ ಹೊಸ ಅರ್ಜಿ ಸಲ್ಲಿಸಲ್ಪಟ್ಟಿದ್ದು, ಈ ಹಿಂದೆ ಸಲ್ಲಿಸಲಾಗಿದ್ದ ‘ಬಿ ರಿಪೋರ್ಟ್’ ಅನ್ನು ಪ್ರಶ್ನಿಸಲ್ಪಟ್ಟಿದೆ. ಅರ್ಜಿಯಲ್ಲಿ ಸಿಎಂ ಹಾಗೂ ಅವರ ಕುಟುಂಬದ ಸದಸ್ಯರ ಮೇಲಿನ ಆರೋಪಗಳಿಗೆ ಸಾಕ್ಷ್ಯಾಧಾರಗಳಿವೆ ಎಂದು ತಿಳಿಸಲಾಗಿದೆ.
ಸಲ್ಲಿಸಿದ ಲೋಕಾಯುಕ್ತ ಅಧಿಕಾರಿಗಳ ವಿರುದ್ಧವೂ ಕ್ರಮಕ್ಕೆ ಒತ್ತಾಯ
ಮೂಲ ದೂರುದಾರರಾದ ಸ್ನೇಹಮಯಿ ಕೃಷ್ಣ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಸಿಎಂ ಕುಟುಂಬಕ್ಕೆ ಇದುವರೆಗೆ ತಾತ್ಕಾಲಿಕ ರಿಲೀಫ್ ಮಾತ್ರ ಸಿಕ್ಕಿದೆ ಎಂದು ಹೇಳಿದ್ದಾರೆ. ಪ್ರಕರಣದಲ್ಲಿ ಅಂತಿಮವಾಗಿ ಜೈಲು ಶಿಕ್ಷೆಯ ಸಾಧ್ಯತೆಯೂ ಇರುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ. ತಮ್ಮ ಬಳಿಯೂ ಆರೋಪಗಳಿಗೆ ಸಂಬಂಧಿಸಿದ ಸಾಕ್ಷ್ಯಾಧಾರಗಳಿವೆ ಎಂದು ಹೇಳಿದ ಅವರು, ‘ಬಿ ರಿಪೋರ್ಟ್’ ಸಲ್ಲಿಸಿದ ಲೋಕಾಯುಕ್ತ ಅಧಿಕಾರಿಗಳ ವಿರುದ್ಧವೂ ಕ್ರಮಕ್ಕೆ ಒತ್ತಾಯಿಸಿದ್ದಾರೆ.
READ THIS : ದಾರುಣ ಅಂತ್ಯ ಕಂಡ ನಾರಾಯಣ ಹೃದಯಾಲಯದ ನರ್ಸ್

MUST WATCH : ಬಾಗಲಕೋಟೆಯಲ್ಲಿ ರಂಗೇರಿದ ಉಪಚುನಾವಣೆ -BJP, CONGRESS ನಡುವೆ ತೀವ್ರ ವಾಗ್ವಾದ
ಮರು ತನಿಖೆ ನಡೆಸುವಂತೆ ಮನವಿ – CM
ಈ ನಡುವೆ, ಕೇಂದ್ರದ ಇನ್ವೆಸ್ಟಿಗೇಟಿಂಗ್ ಎಜೆನ್ಸಿ (ED) ಪ್ರತ್ಯೇಕ ಅರ್ಜಿಯನ್ನು ಹೈಕೋರ್ಟ್ಗೆ ಸಲ್ಲಿಸಿದ್ದು, CM ವಿರುದ್ಧದ ಮುಡಾ ಹಗರಣ ತನಿಖೆಯಲ್ಲಿ ಸಾಕಷ್ಟು ಮಾಹಿತಿ ದೊರೆತಿರುವುದರಿಂದ ಮರು ತನಿಖೆ ನಡೆಸುವಂತೆ ಮನವಿ ಮಾಡಲಾಗಿದೆ.
ಕಳೆದ ಹಂತದ ನ್ಯಾಯಾಲಯ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಈ ಅರ್ಜಿಯಲ್ಲಿ, ನಾಲ್ವರು ಪ್ರಮುಖ ಆರೋಪಿಗಳ ಪಾತ್ರ ವಿಚಾರಕ್ಕೆ ಸಾಕ್ಷ್ಯಾಧಾರಗಳಿವೆ ಎಂದು ED ಅಧಿಕಾರಿಗಳು ತಿಳಿಸಿದ್ದಾರೆ.

MUST WATCH : MEDICINE ರೇಟ್ ಏರಿಕೆ ಸಾಧ್ಯತೆ – ರೋಗಿಗಳು ಎಲ್ಲಿಗೆ ಹೋಗಬೇಕು..?




