ದಾರುಣ ಘಟನೆ – ಹೊಳೆಗೆ ಹಾರಿ ಪ್ರಾಣ ಬಿಟ್ಟ Nurse.

ಹೊಳೆಗೆ ಹಾರಿ ನರ್ಸ್ ಒಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನಲ್ಲಿ ನಡೆದಿದೆ. ಮೃತ ಮಹಿಳೆಯನ್ನು 30 ವರ್ಷದ ರಾನ್ಯಾ ಬೇಸಿಲ್ ಎಂದು ಗುರುತಿಸಲಾಗಿದ್ದು, ಅವರ ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.
ನಾರಾಯಣ ಹೃದಯಾಲಯದ ನರ್ಸ್ ದಾರುಣ ಸಾವು
ಪತಿ ಹಾಗೂ ಇಬ್ಬರು ಮಕ್ಕಳನ್ನು ಹೊಂದಿರುವ ರಾನ್ಯಾ ಬೇಸಿಲ್ ಅವರು ಎನ್.ಆರ್.ಪುರ ತಾಲೂಕಿನ ಮುತ್ತಿನಕೊಪ್ಪ ನಿವಾಸಿಯಾಗಿದ್ದು, ಹೊಳೆಗೆ ಹಾರಿ ಸಾವಿಗೆ ಶರಣಾಗಿದ್ದಾರೆ. ರಾನ್ಯಾ ಬೇಸಿಲ್ ಶಿವಮೊಗ್ಗ ನಗರದ ನಾರಾಯಣ ಹೃದಯಾಲಯದಲ್ಲಿ Nurse ಆಗಿ ಕೆಲಸ ಮಾಡುತ್ತಿದ್ದರು.

READ THIS : ಬಾಸ್ ಸಿನಿಮಾಗೆ ಬಿಗ್ ಶಾಕ್ – ರಿಲೀಸ್ಗೆ ಕೋರ್ಟ್ ತಡೆಯಾಜ್ಞೆ
ಹೊಳೆಗೆ ಹಾರಿ ಸಾವಿಗೆ ಶರಣು
ರಾನ್ಯಾ ನೆನ್ನೆ ಸಂಜೆ ಆಸ್ಪತ್ರೆಯಿಂದ ಕೆಲಸ ಮುಗಿಸಿ ಮನೆಗೆ ಬಂದಿದ್ದರು. ಆದರೆ ಮನೆಗೆ ಬಂದ ಕೆಲ ಸಮಯದ ನಂತರ ಮತ್ತೆ ಹೊರಗೆ ಹೋಗಿದ್ದು, ಮುಡುಬ ಸಮೀಪದ ಸೇತುವೆ ಮೇಲಿಂದ ಹೊಳೆಗೆ ಹಾರಿ ಪ್ರಾಣ ಬಿಟ್ಟಿದ್ದಾರೆ.
ಪ್ರಕರಣ ದಾಖಲು
ಇನ್ನು ಈ ಘಟನೆಗೆ ಸಂಬಂಧಿಸಿದಂತೆ ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

MUST WATCH : ಸ್ವಾಮೀಜಿ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ..? – ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋದ ಸಂತ್ರಸ್ತೆ..!




