ರೇಣುಕಾಸ್ವಾಮಿ ಕೊಲೆ ಕೇಸ್ ಆಧರಿತ ಸಿನಿಮಾ Boss ರಿಲೀಸ್ಗೆ ಕೋರ್ಟ್ ತಡೆಯಾಜ್ಞೆ.

ಸ್ಯಾಂಡಲ್ವುಡ್ ನಟ ತನುಷ್ ಶಿವಣ್ಣ ಅಭಿನಯದ ಬಾಸ್ ಸಿನಿಮಾವು ಆರಂಭದಿಂದಲೇ ಸದ್ದಯ ಮಾಡುತ್ತಲೇ ಇದೆ. ಈ ಸಿನಿಮಾ ನಟ ದರ್ಶನ್ ತೂಗುದೀಪ್ ಆರೋಪಿಯಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ಆಧಾರಿತ ಸಿನಿಮಾ ಎಂದು ಮೊದಲಿನಿಂದಲೂ ಮಾತುಗಳು ಕೇಳಿ ಬಂದಿದ್ದವು.
ರಿಲೀಸ್ಗೆ ಕೋರ್ಟ್ ತಡೆಯಾಜ್ಞೆ
ಆದರೆ ಚಿತ್ರತಂಡ ಮಾತ್ರ ಅದನ್ನ ಒಪ್ಪಿಕೊಂಡಿರಲಿಲ್ಲ, ಸದ್ಯ ತೆರೆಗೆ ಸಜ್ಜಾಗಿದ್ದ ಈ ಚಿತ್ರಕ್ಕೀಗ ಶಾಕ್ ಎದುರಾಗಿದೆ. Bossಸಿನಿಮಾ ಬಿಡುಗಡೆಗೆ ತಡೆಯಾಜ್ಞೆ ನೀಡಿ ಸಿಟಿ ಸಿವಿಲ್ ಮತ್ತರು ಸೆಷನ್ಸ್ ನ್ಯಾಯಾಲಯ ಮಧ್ಯಂತರ ಆದೇಶ ನೀಡಿದೆ.
READ THIS : ಮಹಿಳೆಗೆ ಆ ಸ್ವಾಮೀಜಿ ಲೈಂಗಿಕ ದೌರ್ಜನ್ಯ ಎಸಗಿದ್ರಾ..?

ಸಿನಿಮಾ ಯಾವಾಗ ರಿಲೀಸ್..?
ತನುಷ್ ಶಿವಣ್ಣ, ಪಾಯಲ್ ಚೆಂಗಪ್ಪ ನಟನೆಯ ಈ ಚಿತ್ರವು ಏ.14 ರಂದು ರಾಜ್ಯಾದ್ಯಂತ ಬಿಡುಗಡೆಗೆ ಸಿದ್ಧವಾಗಿತ್ತು. ಆದ್ರೆ ಬಾಸ್ ಸಿನಿಮಾವನ್ನು ರಿಲೀಸ್ ಮಾಡದಂತೆ ನಟ ದರ್ಶನ್ ಮತ್ತು ಅವರ ಪತ್ನಿ ವಿಜಯಲಕ್ಷ್ಮೀ ದರ್ಶನ್ ಸಲ್ಲಿಸಿದ್ದ ಮೂಲ ದಾವೆ ವಿಚಾರಣೆ ನಡೆಸಿದ ನಗರದ 16ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಈ ಆದೇಶ ಮಾಡಿದೆ.

MUST WATCH : ಮತ್ತೊಮ್ಮೆ ದಾಖಲೆ ಬರೆದ ಕೊಬ್ಬರಿ ಬೆಲೆ..! – ಕ್ವಿಂಟಾಲ್ ಕೊಬ್ಬರಿಗೆ ರೇಟ್ ಎಷ್ಟಿದೆ ಗೊತ್ತಾ?




