HUBBALLI : ಮತ್ತೊಂದು ಲವ್ ಜಿಹಾದ್ ಪ್ರಕರಣ ಬೆಳಕಿಗೆ – ಹಿಂದೂ ಯುವತಿ ಮೇಲೆ ಅತ್ಯಾಚಾರ, ಬ್ಲಾಕ್ಮೇಲ್ ಆರೋಪ.

ಇತ್ತೀಚೆಗಷ್ಟೇ ಭಾರೀ ಸುದ್ದಿ ಮಾಡಿದ್ದ HUBBALLI ಲವ್ ಜಿಹಾದ್ ಪ್ರಕರಣದ ಬಳಿಕ ಅಂತಹುದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಪ್ರೀತಿಸುವ ನಾಟಕವಾಡಿ ಹಿಂದೂ ಯುವತಿಯ ಮೇಲೆ ಮುಫೀಸ್ ಮಿಯಾನ್ನವರ್ ಎಂಬಾತನಿಂದ ಅತ್ಯಾಚಾರ ನಡೆದಿದೆ, ಬ್ಲ್ಯಾಕ್ಮೇಲ್ ಮಾಡಿ ನಿರಂತರ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಕೇಶ್ವಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರೀತಿಸಿದ ಯುವತಿ ಮೇಲೆಯೇ ಅತ್ಯಾಚಾರ ಎಸಗಿದ ಪಾಪಿ
ಕಳೆದ ಐದು ವರ್ಷಗಳ ಹಿಂದೆ ಕಾಲೇಜು ಕಾರ್ಯಕ್ರಮವೊಂದರಲ್ಲಿ ಪರಿಚಯವಾದ ಮುಫೀಸ್ ಮಿಯಾನ್ನವರ್ ಎಂಬಾತ, ಸಂತ್ರಸ್ತ ಯುವತಿಯೊಂದಿಗೆ ಸ್ನೇಹ ಬೆಳೆಸಿ ನಂತರ ಪ್ರೀತಿಯ ನಾಟಕವಾಡಿದ್ದಾನೆ.
ಇಬ್ಬರ ನಡುವೆ ಸಲುಗೆ ಬೆಳೆದ ನಂತರ, ಗದಗ ರಸ್ತೆಯ ಸೇತುವೆ ಬಳಿ ಕರೆದುಕೊಂಡು ಹೋಗಿ, ಯುವತಿಯ ವಿರೋಧದ ನಡುವೆಯೂ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ.
ಈ ಘಟನೆಗೆ ಸಂಬಂಧಿಸಿದ ದೃಶ್ಯಗಳನ್ನು ಆತ ತನ್ನ ಮೊಬೈಲ್ನಲ್ಲಿ ದಾಖಲಿಸಿಕೊಂಡು, ಬಳಿಕ ಅದನ್ನೇ ಆಧಾರ ಮಾಡಿಕೊಂಡು ಯುವತಿಯನ್ನು ನಿರಂತರವಾಗಿ ಬೆದರಿಕೆ ಹಾಕುತ್ತಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಸಂತ್ರಸ್ತೆ ನೀಡಿದ ದೂರಿನಲ್ಲೇನಿದೆ?
“ಯಾರಿಗಾದರೂ ವಿಷಯ ಹೇಳಿದರೆ ನಿನ್ನನ್ನು ಉಳಿಸುವುದಿಲ್ಲ” ಎಂದು ಬೆದರಿಸಿ, ತಾನು ಕರೆದಾಗಲೆಲ್ಲ ಬರುವಂತೆ ಒತ್ತಾಯಿಸಿದ್ದಾನೆ ಎಂದು ಯುವತಿ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

READ THIS : SSLC ತೃತೀಯ ಭಾಷೆಗೆ ಗ್ರೇಡ್ ವಿವಾದ: ರಾಜ್ಯಪಾಲರ ನಿಲುವಿಗೆ ಕರವೇ ಕೆಂಡ..!!
ಯುವತಿಯ ಮನೆಗೆ ಹೋಗಿ ಮತ್ತೆ ಅತ್ಯಾಚಾರ!
ಇದಲ್ಲದೆ, 2025ರಲ್ಲಿ ಯುವತಿಯನ್ನು ಬ್ಲ್ಯಾಕ್ಮೇಲ್ ಮಾಡಿ ಧಾರವಾಡದಲ್ಲಿ ರಿಜಿಸ್ಟರ್ ಮದುವೆಗೆ ಒತ್ತಾಯಿಸಿದ್ದಾನೆ ಎನ್ನಲಾಗಿದ್ದು, ವಿಷಯ ತಿಳಿದ ಕುಟುಂಬಸ್ಥರು ಮದುವೆಯನ್ನು ತಡೆದಿದ್ದಾರೆ.
ನಂತರವೂ ಯುವತಿಯ ಮನೆಗೆ ಹಲವು ಬಾರಿ ಭೇಟಿ ನೀಡಿದ್ದ ಆರೋಪಿ ಮುಫೀಸ್, 2025ರ ನವೆಂಬರ್ನಲ್ಲಿ ಮತ್ತೆ ಯುವತಿಯ ಮನೆಗೆ ಬಂದುಯಾರು ಇಲ್ಲದ ವೇಳೆ ಅತ್ಯಾಚಾರ ಎಸಗಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಈ ವಿಷಯ ಯಾರಿಗಾದರೂ ಹೇಳಿದರೆ ನಿನ್ನ ತಂದೆ-ತಾಯಿಯನ್ನ ಸುಮ್ಮನೆ ಬಿಡುವುದಿಲ್ಲ ಎಂದು ಆರೋಪಿ ಸಂತ್ರಸ್ತ ಯುವತಿಗೆ ಮತ್ತೆ ಬೆದರಿಸಿದ್ದ ಎನ್ನಲಾಗಿದೆ.

ಧೈರ್ಯದಿಂದ ಮುಂದೆ ಬಂದು ದೂರು ಕೊಟ್ಟ ಸಂತ್ರಸ್ತೆ
ಹೀಗಾಗಿ ಹೆದರಿ ಈ ವಿಷಯವನ್ನು ಯುವತಿ ಆರಂಭದಲ್ಲಿ ಯಾರಿಗೂ ತಿಳಿಸಿರಲಿಲ್ಲ. ಆದರೆ ಈಗ ಸಮೀರ್ ಮುಲ್ಲಾನ ಲವ್ ಜಿಹಾದ್ ಪ್ರಕರಣ ಹೊರ ಬಂದ ಬಳಿಕ ದೈರ್ಯದಿಂದ ಯುವತಿ ದೂರು ನೀಡಿದ್ದಾಳೆ ಎನ್ನಲಾಗಿದೆ.
MUST WATCH : FINANCE COMPANYಗೆ ನುಗ್ಗಿ ಕೊಚ್ಚಿ ಕೊಚ್ಚಿ ಕೊ* ಮಾಡಿದ ಹಂತಕರು..!





