ಸಾಲಬಾಧೆ ತಾಳಲಾರದೆ ಆತ್ಮಹತ್ಯೆಗೆ ಶರಣಾದ ರೈತ | Sira

ಸಾಲಬಾಧೆ ಮತ್ತು ಬ್ಯಾಂಕ್ ಒತ್ತಡ ತಾಳಲಾರದೇ ರೈತನೋರ್ವ ವಿಷ ಸೇವಿಸಿ ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ Sira ತಾಲೂಕಿನ ಹುಲಿಕುಂಟೆ ಹೋಬಳಿಯ ಕೆಕೆ ಪಾಳ್ಯ ಗ್ರಾಮದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನಮಹೇಶ್ ಎಂದು ಗುರುತಿಸಲಾಗಿದೆ.

READ THIS : ಕೊಹ್ಲಿ, ಪಡಿಕ್ಕಲ್ ಬ್ಯಾಟಿಂಗ್ಗೆ ಹೈದರಾಬಾದ್ ಬರ್ನ್! RCBಗೆ 6 ವಿಕೆಟ್ಗಳ ಭರ್ಜರಿ ಜಯ
ವಿಷ ಸೇವಿಸಿ ಬಳಿ ನೇಣು ಬಿಗಿದುಕೊಂಡು Suicide!
ಇನ್ನು ಮೃತ ರೈತ ಮಹೇಶ್ ಅವರು ಬ್ಯಾಂಕ್ ಸಾಲ ಸೇರಿದಂತೆ ಖಾಸಗಿ ಸಾಲಗಳನ್ನು ಸೇರಿಸಿ ಸುಮಾರು 5 ಲಕ್ಷ ರೂಪಾಯಿ ಸಾಲ ಮಾಡಿದ್ದರು ಎನ್ನಲಾಗಿದ್ದು, ಬೆಳೆ ಕೈಕೊಟ್ಟ ಪರಿಣಾಮ ಸಾಲದ ಹೊರೆ ದಿನದಿಂದ ದಿನಕ್ಕೆ ಹೆಚ್ಚಾಗಿದ್ದು, ಸಾಲಗಾರರ ಒತ್ತಡದಿಂದ ಮನನೊಂದು ವಿಷ ಸೇವಿಸಿ ಬಳಿಕ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಅವರನ್ನ ಶಿರಾ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

Sira – ಪ್ರಕರಣ ದಾಖಲು
ಸದ್ಯ ಈ ಸಂಬಂಧ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
MUST WATCH : SSLC ಪರೀಕ್ಷೆ ಯಲ್ಲಿ FULL CHANGE – ಸಚಿವರು ಎಷ್ಟು MARKSಗೆ ಇಳಿಸಿದ್ರು ಗೊತ್ತಾ ?




