ವಿರಾಟ್ ಕೊಹ್ಲಿ ಅವರ `ಚಿನ್ನʼದ ಆಟದ ನೆರವಿನಿಂದ SRH ವಿರುದ್ಧ RCB 6 ವಿಕೆಟ್ಗಳ ಜಯ ಸಾಧಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು IPL 2026 ಉದ್ಘಾಟನಾ ಪಂದ್ಯದಲ್ಲಿ ಸನ್ರೈಸರ್ಸ್ ಹೈದಯಾಬಾದ್ ವಿರುದ್ಧ 6 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ. ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಹೈ-ವೋಲ್ಟೇಜ್ ಪಂದ್ಯದಲ್ಲಿ ಹೈದರಾಬಾದ್ ನೀಡಿದ ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಆರ್ಸಿಬಿ, 15.4 ಓವರ್ಗಳಲ್ಲಿ ಗುರಿ ತಲುಪಿತು.

ಚಿನ್ನಸ್ವಾಮಿಯಲ್ಲಿ ‘ಕಿಂಗ್’ ಕೊಹ್ಲಿ ಆರ್ಭಟ
RCB ಪರವಾಗಿ ಆರಂಭಿಕ ಬ್ಯಾಟರ್ ವಿರಾಟ್ ಕೊಹ್ಲಿ ಅಜೇಯ 69 ರನ್ (38 ಎಸೆತ, 5 ಬೌಂಡರಿ, 5 ಸಿಕ್ಸರ್) ಸಿಡಿಸಿ ತಂಡವನ್ನು ಗೆಲುವಿನ ದಡಕ್ಕೆ ತಲುಪಿಸಿದರು. 181.58 ಸ್ಟ್ರೈಕ್ ರೇಟ್ನಲ್ಲಿ ಆಡಿದ ಕೊಹ್ಲಿ, ಕೊನೆಯವರೆಗೂ ಕ್ರೀಸ್ನಲ್ಲಿ ಉಳಿದು ಕ್ಲಾಸಿಕ್ ಬ್ಯಾಟಿಂಗ್ ಪ್ರದರ್ಶನ ನೀಡಿದರು.
ಪಡಿಕ್ಕಲ್ ಸ್ಫೋಟಕ ಬ್ಯಾಟಿಂಗ್
ಯುವ ಬ್ಯಾಟರ್ ದೇವದತ್ ಪಡಿಕ್ಕಲ್ ಕೂಡ ಸ್ಫೋಟಕ ಪ್ರದರ್ಶನ ನೀಡಿದರು. ಕೇವಲ 26 ಎಸೆತಗಳಲ್ಲಿ 61 ರನ್ (7 ಬೌಂಡರಿ, 4 ಸಿಕ್ಸರ್) ಸಿಡಿಸಿ ಆರ್ಸಿಬಿಯ ರನ್ ವೇಗ ಹೆಚ್ಚಿಸಿದರು. ಮಧ್ಯಮ ಓವರ್ಗಳಲ್ಲಿ ಅವರ ಆಕ್ರಮಣಕಾರಿ ಆಟ ಪಂದ್ಯವನ್ನು ಆರ್ಸಿಬಿ ಪರವಾಗಿ ತಿರುಗಿಸಿತು.

READ THIS : Hassan ರಸ್ತೆ ದಾಟುವಾಗ ಕಾರು ಡಿಕ್ಕಿ ವಿದ್ಯಾರ್ಥಿ ಸಾವು..!
ನಾಯಕನ ಬಿರುಸಿನ ಇನಿಂಗ್ಸ್
ತಂಡದ ನಾಯಕ ರಜತ್ ಪಾಟೀದಾರ್ ಕೇವಲ 12 ಎಸೆತಗಳಲ್ಲಿ 31 ರನ್ (2 ಬೌಂಡರಿ, 3 ಸಿಕ್ಸರ್) ಸಿಡಿಸುವ ಮೂಲಕ ಗೆಲುವಿನ ಹಾದಿಯನ್ನು ಸುಲಭಗೊಳಿಸಿದರು. ಆರಂಭಿಕರಾಗಿ ಬಂದ ಫಿಲಿಪ್ ಸಾಲ್ಟ್ (8) ಬೇಗನೆ ಔಟಾದರೂ, ಕೊಹ್ಲಿ ಮತ್ತು ಪಡಿಕ್ಕಲ್ ಅವರ ಜೊತೆಯಾಟ ಪಂದ್ಯವನ್ನು ಆರ್ಸಿಬಿ ಪರವಾಗಿ ತಿರುಗಿಸಿತು. ವಿಕೆಟ್ ಕೀಪರ್ ಜಿತೇಶ್ ಶರ್ಮಾ (0) ಶೂನ್ಯಕ್ಕೆ ಔಟಾದಾಗ ಪಂದ್ಯ ಸ್ವಲ್ಪ ಕುತೂಹಲ ಮೂಡಿಸಿದರೂ, ಕೊನೆಯಲ್ಲಿ ಟಿಮ್ ಡೇವಿಡ್ (16* ರನ್, 10 ಎಸೆತ) ಅಜೇಯರಾಗಿ ಉಳಿದು ತಂಡಕ್ಕೆ 15.4 ಓವರ್ಗಳಲ್ಲಿ ಜಯ ತಂದುಕೊಟ್ಟರು.

ಅಂಕಪಟ್ಟಿಯಲ್ಲಿ ಭದ್ರ ಸ್ಥಾನ
ಈ ಅಮೋಘ ಗೆಲುವಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂಕಪಟ್ಟಿಯಲ್ಲಿ ಭದ್ರ ಸ್ಥಾನ ಪಡೆದಿದ್ದು, ತವರಿನ ಪ್ರೇಕ್ಷಕರ ಎದುರು ವಿಜಯೋತ್ಸವ ಆಚರಿಸಿದೆ.
MUST WATCH : ಬಗೆದಷ್ಟು ಬಯಲಾಗ್ತಿದೆ ನಕಲಿ ಜಾಲದ ರಹಸ್ಯ! – NAMASTE CAFE ಓನರ್ನಿಂದಲೇ ದಂಧೆ ನಡಿದಿದ್ಯಾ..?





