ಅಭಿಮಾನಿಗಳ ಆರಾಧ್ಯ ದೈವ ದಿವಂಗತ Appu ಅವರ 51ನೇ ಜನ್ಮದಿನದ ಸಂಭ್ರಮ ಜೋರಾಗಿದೆ.

ಕೋಟ್ಯಂತರ ಅಭಿಮಾನಿಗಳ ಆರಾಧ್ಯ ದೈವ ದಿವಂಗತ ಡಾ. ಪುನೀತ್ ರಾಜ್ಕುಮಾರ್ ಅವರ 51ನೇ ಜನ್ಮದಿನದ ಸಂಭ್ರಮ ಜೋರಾಗಿದೆ.
ಭೌತಿಕವಾಗಿ ಅಪ್ಪು ನಮ್ಮೊಂದಿಗಿಲ್ಲದಿದ್ದರೂ ಅವರ ನೆನಪುಗಳು, ಅವರು ಹಾಕಿಕೊಟ್ಟ ಆದರ್ಶಗಳು ಕನ್ನಡಿಗರ ಹೃದಯದಲ್ಲಿ ಅಚ್ಚಳಿಯದೆ ಉಳಿದಿವೆ. ಈ ಹಿನ್ನೆಲೆಯಲ್ಲಿ ಅಪ್ಪು ಹುಟ್ಟುಹಬ್ಬವನ್ನು ರಾಜ್ಯಾದ್ಯಂತ ‘ಸ್ಫೂರ್ತಿಯ ದಿನ’ವನ್ನಾಗಿ ಆಚರಿಸಲಾಗುತ್ತಿದೆ.

ಅಪ್ಪು ನೆನೆದು ಶಿವಣ್ಣ ಭಾವುಕ
ಪ್ರೀತಿಯ ತಮ್ಮನ ಹುಟ್ಟುಹಬ್ಬದ ಪ್ರಯುಕ್ತ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರು ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾದ ಹಾಡಿನ ಸಾಲುಗಳ ಮೂಲಕ ಭಾವುಕ ನುಡಿಗಳನ್ನಾಡಿದ್ದಾರೆ. ‘ಆಕಾಶದಾಚೆ ಎಲ್ಲೋ ದೇವರಿಲ್ಲವೋ, ಇದು ಆಗ ಕೇಳಿದಾಗ ಎಷ್ಟು ನಿಜ ಅನ್ಸಿತ್ತು.. ಈಗಲೂ ಹಾಗೇ ಇದೆ. ನಿನ್ನನ್ನು ಆಕಾಶದಾಚೆ ಹುಡುಕುವ ಅವಶ್ಯಕತೆ ಇಲ್ಲವೇ ಇಲ್ಲ. ಇಡೀ ಕರ್ನಾಟಕದಲ್ಲಿ ಎಲ್ಲೇ ಹೋದರೂ ಜನ ನಿನ್ನನ್ನು ಪ್ರತಿ ದಿನ ಸಂಭ್ರಮಿಸುತ್ತಾರೆ. ನಿನ್ನ ಹುಟ್ಟು ಹಬ್ಬ ನಮ್ಮೆಲ್ಲರಿಗೂ ಹಬ್ಬ. ನಿನ್ನ ಹೆಸರು ಹೇಳಿದೊಡನೆ ಮೂಡುವ ನಗು, ನೀನು ಎಲ್ಲರಿಗೂ ಕೊಟ್ಟಿರುವ ಉಡುಗೊರೆ ಎಂದು ಬರೆದುಕೊಂಡು ಶಿವಣ್ಣ ತಮ್ಮನನ್ನು ಸ್ಮರಿಸಿದ್ದಾರೆ.
READ THIS : ಮುಂದಿನ 48 ಗಂಟೆಗಳಲ್ಲಿ ಬೆಂಗಳೂರು ಸೇರಿ 17 ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ
ಬಾಲ ನಟನಾಗಿ ಬಂದು‘ಪವರ್ಸ್ಟಾರ್’ ಆಗಿ ಮೆರೆದ ಪಯಣ
1975ರಲ್ಲಿ ಡಾ. ರಾಜ್ಕುಮಾರ್ ಮತ್ತು ಪಾರ್ವತಮ್ಮ ರಾಜ್ಕುಮಾರ್ ದಂಪತಿಗಳ ಪುತ್ರನಾಗಿ ಜನಿಸಿದ ಪುನೀತ್ (ಲೋಹಿತ್), ಬಾಲನಟನಾಗಿ ‘ಬೆಟ್ಟದ ಹೂವು’ ಚಿತ್ರದ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. ‘ಅಪ್ಪು’ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪ್ರವೇಶಿಸಿದ ಅವರು, ನಂತರ ‘ಅಭಿ’, ‘ಮಿಲನ’, ‘ಜಾಕಿ’, ‘ರಾಜಕುಮಾರ’ ಸೇರಿದಂತೆ ಹಲವು ಹಿಟ್ ಸಿನಿಮಾಗಳ ಮೂಲಕ ಸ್ಯಾಂಡಲ್ವುಡ್ನಲ್ಲಿ ಒಳ್ಳೆ ನಟನಾಗಿ ಹೊರಹೊಮ್ಮಿದರು.
ಆಕಾಶ್ ಮರು ಬಿಡುಗಡೆ
ಇನ್ನು Appu ಹುಟ್ಟುಹಬ್ಬದ ಅಂಗವಾಗಿ ಅವರ ಜನಪ್ರಿಯ ಸಿನಿಮಾ ‘ಆಕಾಶ್’ ಮರು ಬಿಡುಗಡೆಯಾಗಿ ಅಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿದೆ. ಚಿತ್ರಮಂದಿರಗಳಲ್ಲಿ ಅಭಿಮಾನಿಗಳು ಶಿಳ್ಳೆ-ಚಪ್ಪಾಳೆಗಳಿಂದ ಸ್ವಾಗತಿಸಿ, ಹಾಡುಗಳಿಗೆ ನೃತ್ಯ ಮಾಡಿ ಅಪ್ಪುವನ್ನು ಸ್ಮರಿಸಿದ್ದಾರೆ. ಇದರ ಜೊತೆಗೆ ಅಭಿಮಾನಿಗಳು ರಕ್ತದಾನ ಶಿಬಿರಗಳು, ಅನ್ನದಾನ ಮತ್ತು ನೇತ್ರದಾನ ನೋಂದಣಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ತಮ್ಮ ನೆಚ್ಚಿನ ನಟನಿಗೆ ಅರ್ಥಪೂರ್ಣ ಗೌರವ ಸಲ್ಲಿಸುತ್ತಿದ್ದಾರೆ.

MUST WATCH : ಆಕಸ್ಮಿಕ ಬೆಂಕಿ ತಗುಲಿ ಧಗಧಗನೆ – ಹೊತ್ತಿ ಉರಿದ ಗೋಧಿ ಬಣವೆ.!




