ರಾಜಾತಿಥ್ಯದ ವಿಡಿಯೋ ವೈರಲ್ ಆಗಿದ್ದೇ ಆಗಿದ್ದು.. ಧರ್ಮಸಂಕಟಕ್ಕೆ ಸಿಲುಕಿದ D GANG..!

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಟ ದರ್ಶನ್ಗೆ ರಾಜಾತಿಥ್ಯ ನೀಡಲಾಗಿದೆ ಎನ್ನಲಾದ ವಿಡಿಯೋ ವೈರಲ್ ಆದ ಬಳಿಕ ಕಾರಾಗೃಹ ಇಲಾಖೆಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಈ ಘಟನೆ ನಂತರ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಜೈಲು ನಿಯಮಗಳಲ್ಲಿ ಹಲವು ಬದಲಾವಣೆಗಳನ್ನು ಜಾರಿಗೆ ತಂದಿದ್ದಾರೆ.
D GANG ಗೆ ಸಂಕಷ್ಟ
ಪ್ರಸ್ತುತ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಮುಖ್ಯಸ್ಥರಾಗಿ ಡಿಜಿ ಆಲೋಕ್ ಕುಮಾರ್ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಜೈಲಿನ ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸಿದ್ದಾರೆ. ಇದರ ಪರಿಣಾಮವಾಗಿ ‘D GANG’ ದಿನದಿಂದ ದಿನಕ್ಕೆ ಸಂಕಷ್ಟಕ್ಕೆ ಸಿಲುಕುತ್ತಿದೆ ಎನ್ನಲಾಗಿದೆ.

ನಿಯಮಗಳಲ್ಲಿ ಏನಿದೆಯೋ ಅದನ್ನೇ ನೀಡಲಾಗುವುದು
ವಿಶೇಷ ಸೌಲಭ್ಯಗಳಿಗಾಗಿ ‘ಡಿಗ್ಯಾಂಗ್’ ಸಲ್ಲಿಸಿದ ಹಲವು ಅರ್ಜಿಗಳು ಜೈಲು ನಿಯಮಗಳ ಅಡ್ಡಿಯಿಂದ ಮುಂದುವರಿಯುತ್ತಿಲ್ಲ ಎಂದು ತಿಳಿದುಬಂದಿದೆ. ಮೊದಲಿಗೆ ಟಿವಿ ಹಾಗೂ ಜೈಲಿನ ಒಳಗೆ ವಾಕಿಂಗ್ಗೆ ಅವಕಾಶ ನೀಡುವಂತೆ ಅರ್ಜಿ ಸಲ್ಲಿಸಲಾಗಿತ್ತು. ಆದರೆ ನಿಯಮಗಳಲ್ಲಿ ಏನಿದೆಯೋ ಅದನ್ನೇ ನೀಡಲಾಗುವುದು ಎಂದು ಜೈಲು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಮನೆಯ ಊಟ ನೀಡಲು ಸಾಧ್ಯವಿಲ್ಲ
ಇದಾದ ಬಳಿಕ ಮನೆಯೂಟಕ್ಕೆ ಅನುಮತಿ ನೀಡುವಂತೆ ಕೂಡ ಅರ್ಜಿ ಹಾಕಲಾಗಿದೆ. ಆದರೆ ಅದಕ್ಕೂ ಜೈಲು ನಿಯಮಗಳು ಅಡ್ಡಿಯಾಗಿದ್ದು, ಮನೆಯ ಊಟ ನೀಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಈಗಾಗಲೇ ಸ್ಪಷ್ಟವಾಗಿ ಹೇಳಿದ್ದಾರೆ.

ಸಂದರ್ಶನಕ್ಕೆ ಅವಕಾಶ ಕೋರಿ ಅರ್ಜಿ
ಇದರ ಜೊತೆಗೆ ಜೈಲಿನೊಳಗೆ ಸಂದರ್ಶನಕ್ಕೆ ಅವಕಾಶ ಕೋರಿ ನಟ ದರ್ಶನ್ ಸ್ವತಃ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ಕೋರ್ಟ್ನಲ್ಲಿ ನಡೆಯುತ್ತಿರುವ ನಡುವೆಯೇ ಹೊಸ ನಿಯಮಗಳನ್ನುಜಾರಿಗೆ ತರಲಾಗಿದೆ.
ಹೊಸ ನಿಯಮಗಳ ಪ್ರಕಾರ ಜೈಲಿನೊಳಗೆ ಸಂದರ್ಶನಕ್ಕೆ ಅವಕಾಶ ನೀಡುವ ಕುರಿತು ನಾಲ್ಕು ಪ್ರಮುಖ ಮಾನದಂಡಗಳನ್ನು ನಿಗದಿಪಡಿಸಲಾಗಿದೆ.
READ THIS : ಪೋಷಕರನ್ನು ಕರೆಸಿ ಬೈದಿದಕ್ಕೆ ನೇಣು ಬಿಗಿದುಕೊಂಡು ವಿದ್ಯಾರ್ಥಿ Suicide!

ಯಾವುದು ಅದು ಹೊಸ ನಿಯಮ..?1
ಕೈದಿಗಳನ್ನ ಭೇಟಿ ಮಾಡುವವರು ವಿಕಲಚೇತನರು ಅಥವಾ ಗರ್ಭಿಣಿಯರಿದ್ದರೆ
ಕೈದಿಗೆ ಗಂಭೀರ ಅನಾರೋಗ್ಯ ಅಥವಾ ಗಾಯದಿಂದ ನಡೆಯಲು ಸಾಧ್ಯವಾಗದ ವೇಳೆ
(ತಿಂಗಳಿಗೆ ಒಮ್ಮೆ)
ಕುಟುಂಬದಲ್ಲಿ ಸಾವು ಅಥವಾ ತುರ್ತು ವೈದ್ಯಕೀಯ ಪರಿಸ್ಥಿತಿ ವೇಳೆ
ಬಿಡುಗಡೆಯ ದಿನಾಂಕದ ಎರಡು ತಿಂಗಳು ಮುಂಚೆ ಉದ್ಯೋಗ, ವಾಸಸ್ಥಳ, ಸಲಹೆ ಇತ್ಯಾದಿ ವ್ಯವಸ್ಥೆಗಾಗಿ ಸಂದರ್ಶನಕ್ಕೆ ಅವಕಾಶ.

ಕಠಿಣ ನಿಯಮಗಳೇ ದೊಡ್ಡ ಚಿಂತೆ
ಈ ಎಲ್ಲಾ ನಿಯಮಗಳ ಹಿನ್ನೆಲೆ ದರ್ಶನ್ ಅವರಿಗೆ ಜೈಲಿನೊಳಗಿನ ಸಂದರ್ಶನಕ್ಕೆ ಅವಕಾಶ ಸಿಗುವುದು ಕಷ್ಟ ಎಂದು ಹೇಳಲಾಗುತ್ತಿದೆ. ಯಾವುದೇ ಅರ್ಜಿ ಸಲ್ಲಿಸಿದರೂ ಹೊಸ ನಿಯಮಗಳೇ ಅಡ್ಡಿಯಾಗುತ್ತಿರುವುದರಿಂದ ದರ್ಶನ್ಗೆ ಜೈಲು ಅಧಿಕಾರಿಗಳ ಕಠಿಣ ನಿಯಮಗಳೇ ದೊಡ್ಡ ಚಿಂತೆಯಾಗಿದೆ.
MUST WATCH : ಅರೆಬರೆ ಆರ್ಕೆಸ್ಟ್ರಾಗಳ ಕಡಿವಾಣಕ್ಕೆ ಮುಂದಾದ ಇಲಾಖೆ ̲ ಆಯಾ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಿಗೆ ಸುತ್ತೊಲೆ




