ಕಾಲೇಜಿನಲ್ಲಿ ಪೋಷಕರನ್ನು ಅವಮಾನಿಸಿದರೆಂದು ನೇಣುಬಿಗಿದುಕೊಂಡ ಡಿಪ್ಲೊಮಾ ವಿದ್ಯಾರ್ಥಿ Suicide ಮಾಡಿಕೊಂಡಿರುವ ಘಟನೆ ನಡೆದಿದೆ.

ಬಳ್ಳಾರಿಯ ಸಂಜಯ್ ಗಾಂಧಿ ಪಾಲಿಟೆಕ್ನಿಕ್ ಕಾಲೇಜಿನ ಡಿಪ್ಲೋಮಾ ವಿದ್ಯಾರ್ಥಿ ಅರವಿಂದ್ ಎಂಬಾತ Suicide ಮಾಡಿಕೊಂಡಿದ್ದಾನೆ. ಕಾಲೇಜಿನಲ್ಲಿ ನಡೆದ ಜಗಳದ ನಂತರ ಪ್ರಿನ್ಸಿಪಾಲ್ ಮತ್ತು ಹೆಚ್ಓಡಿ ಪೋಷಕರಿಗೆ ಅವಮಾನಿಸಿದ್ದೇ ಸಾವಿಗೆ ಕಾರಣವೆಂದು ಆರೋಪಿಸಿ ಸಹಪಾಠಿಗಳು ಪ್ರತಿಭಟನೆ ನಡೆಸಿದ್ದಾರೆ.
ಕಾಲೇಜಿನಲ್ಲಿ ಆಗಿದ್ದೇನು?
ಕಾಲೇಜಿನಲ್ಲಿ ವಿದ್ಯಾರ್ಥಿಗಳ ನಡುವೆ ಜಗಳವಾಗಿತ್ತು. ಈ ಸಂಬಂಧ ಅರವಿಂದ್ ಪೋಷಕರನ್ನು ಕಾಲೇಜಿಗೆ ಕರೆಸಲಾಗಿತ್ತು. ಈ ರೀತಿ ಗಲಾಟೆ ಮಾಡುವ ಹುಡುಗರನ್ನು ನಮ್ಮ ಕಾಲೇಜಿನಲ್ಲಿಟ್ಟುಕೊಳ್ಳಲು ಸಾಧ್ಯವಿಲ್ಲ. ನಿಮ್ಮ ಮಗನಿಗೆ ಇದು ಕೊನೆಯ ಎಚ್ಚರಿಕೆ ಎಂದು ಅರವಿಂದ್ ಪೋಷಕರಿಗೆ ಕಾಲೇಜಿನ ಪ್ರಿನ್ಸಿಪಾಲ್ ಮತ್ತು ಹೆಚ್ಓಡಿ ಹೇಳಿದ್ದರು.
READ THIS : ರಕ್ಷಿತ್ನ ಹೀರೋ ಮಾಡಿರೋ ಸಿನಿಮಾಗೆ 13 ವರ್ಷ
ಈ ಘಟನೆಯಿಂದಾದ ಅವಮಾನದಿಂದಲೇ ಅರವಿಂದ್ ಪ್ರಾಣ ಕಳೆದುಕೊಂಡಿದ್ದಾನೆ. ಎಂದು ಕಾಲೇಜಿನ ವಿದ್ಯಾರ್ಥಿಗಳು ಆರೋಪಿಸುತ್ತಿದ್ದಾರೆ.

ಅರವಿಂದ್ Suicide ಗೆ ಪ್ರಿನ್ಸಿಪಾಲ್ ಮತ್ತು ಹೆಚ್ಓಡಿ ಕಾರಣ?
ಇನ್ನು ಅರವಿಂದ್ ಆತ್ಮಹತ್ಯೆಗೆ ಪ್ರಿನ್ಸಿಪಾಲ್ ಮತ್ತು ಹೆಚ್ಓಡಿ ಕಾರಣ ಎಂದು ಡಿಪ್ಲೋಮಾ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಶ್ರದ್ದಾಂಜಲಿ ಸಭೆ ಬಳಿಕ ಟೇಬಲ್, ಗ್ಲಾಸ್ ಒಡೆದು ಹಾಕಿ ಆಡಿಳಿತ ಮಂಡಳಿ ವಿರುದ್ದ ವಿದ್ಯಾರ್ಥಿಗಳು ಆಕ್ರೋಶ ಹೊರ ಹಾಕಿದ್ದಾರೆ.
ಆಡಳಿತ ಮಂಡಳಿಯಿಂದ ಇಲ್ಲಿವರೆಗೆ ಯಾವುದೇ ಹೇಳಿಕೆ ಬಂದಿಲ್ಲ
ಇನ್ನು ಸ್ಥಳಕ್ಕಾಗಮಿಸಿದ ಬ್ರೂಸ್ ಪೇಟ್ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಪ್ರತಿಭಟನಾನಿರತ ವಿದ್ಯಾರ್ಥಿಗಳಿಂದ ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಆದ್ರೆ ಘಟನೆ ಸಂಬಂಧ ಕಾಲೇಜು ಆಡಳಿತ ಮಂಡಳಿಯಿಂದ ಇಲ್ಲಿವರೆಗೆ ಯಾವುದೇ ಹೇಳಿಕೆ ಬಂದಿಲ್ಲ.

MUST WATCH : ಜಮೀನು ವಿಚಾರಕ್ಕೆ ಮಾರಾಮಾರಿ – ಒಬ್ಬನ ಮೇಲೆ ಐವರಿಂದ ಮನಬಂದಂತೆ ಹಲ್ಲೆ




