Simple Agi Ondh Love Story ಚಿತ್ರ ಬಂದು 13 ವರ್ಷ ಆಗಿದೆ.

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಅಭಿನಯದ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರ ಬಂದು ಇದೀಗ 13 ವರ್ಷ ಆಗಿದೆ. ಈ ವಿಷಯವನ್ನು ಚಿತ್ರದ ನಿರ್ದೇಶಕ ಸಿಂಪಲ್ ಸುನಿ ತಮ್ಮ ಟ್ವಿಟರ್ನಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ಚಿತ್ರದ ಕೆಲವು ನೆನಪುಗಳನ್ನು ಹಾಗೂ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಪ್ರಮುಖ ಪಾತ್ರಗಳಲ್ಲಿ ರಕ್ಷಿತ್ ಮತ್ತು ಶ್ವೇತ
2013ರ ಮಾರ್ಚ್ 8ರಂದು ಬಿಡುಗಡೆಯಾದ ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಹಾಗೂ ಶ್ವೇತಾ ಶ್ರೀವಾತ್ಸವ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಸರಳ ಕಥೆ, ಮನಸೆಳೆಯುವ ಸಂಭಾಷಣೆಗಳು ಮತ್ತು ಹೊಸ ರೀತಿಯ ನಿರೂಪಣೆಯ ಮೂಲಕ ಈ ಸಿನಿಮಾ ಯುವಕರಲ್ಲಿ ವಿಶೇಷ ಜನಪ್ರಿಯತೆ ಗಳಿಸಿತ್ತು.

ಟ್ರೈಲರ್ ಸೃಷ್ಟಿಸಿದ ಸಂಚಲನ
ಇನ್ನು Simple Agi Ondh Love Story ಟ್ರೈಲರ್ ಭಾರೀ ವೈರಲ್ ಆಗಿತ್ತು. ಬೆಂಗಳೂರಿನ ರೇಣಕಾಂಬಾ ಪ್ರಿವ್ಯೂ ಥಿಯೇಟರ್ನಲ್ಲಿ ಮೊದಲ ಬಾರಿ ಟ್ರೈಲರ್ ಪ್ರದರ್ಶನವಾಗಿದ್ದು, ಪತ್ರಕರ್ತರು ಸೇರಿದಂತೆ ಹಲವರ ಮೆಚ್ಚುಗೆಗೆ ಪಾತ್ರವಾಗಿತ್ತು.
ಯೂಟ್ಯೂಬ್ನಲ್ಲಿ ಬಿಡುಗಡೆಗೊಂಡ ನಂತರ ಕೇವಲ ಮೂರು ದಿನಗಳಲ್ಲಿ ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದು ಆ ಕಾಲದಲ್ಲೇ ದೊಡ್ಡ ಸಂಚಲನ ಮೂಡಿಸಿತ್ತು.
ಡೈಲಾಗ್ಗಳು ಯುವಕರ ಫೇವರಿಟ್
ಚಿತ್ರದ ಡೈಲಾಗ್ಗಳು ಯುವಕರಲ್ಲಿ ತುಂಬಾ ಜನಪ್ರಿಯವಾಗಿದ್ದವು. ಬಹುತೇಕವಾಗಿ ರಕ್ಷಿತ್ ಶೆಟ್ಟಿ ಮತ್ತು ಶ್ವೇತಾ ಶ್ರೀವಾತ್ಸವ್ ಪಾತ್ರಗಳ ಸುತ್ತಲೇ ಕಥೆ ಸಾಗಿದ್ದು, ಅವರ ಅಭಿನಯವೂ ಪ್ರೇಕ್ಷಕರ ಮನಸೆಳೆದಿತ್ತು.
READ THIS : ಹೊತ್ತಿ ಉರಿದ ಹೋಟೆಲ್ – ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಭಸ್ಮ

ಶ್ರೀನಗರ ಕಿಟ್ಟಿ ಗೆಸ್ಟ್ ರೋಲ್
ಇನ್ನು ಈ ಚಿತ್ರದಲ್ಲಿ ನಟ ಶ್ರೀನಗರ ಕಿಟ್ಟಿ ‘ಲವ್ ಗುರು’ ಪಾತ್ರದಲ್ಲಿ ಗೆಸ್ಟ್ ಅಪಿಯರನ್ಸ್ ನೀಡಿದ್ದರು. ಜೊತೆಗೆ ಆರ್ಜೆ ರಚನಾ, ಆರ್ಜೆ ಪ್ರದೀಪ್ ಸೇರಿದಂತೆ ಹಲವರು ಚಿತ್ರದಲ್ಲಿ ಅಭಿನಯಿಸಿದ್ದರು.
ಸಿಂಪಲ್ ಸುನಿ ಖುಷಿ
ಚಿತ್ರದ ಡೈರೆಕ್ಟರ್ ಸುನಿ ಈ ಚಿತ್ರದ ಯಶಸ್ಸಿನ ಬಳಿಕವೇ ಸಿಂಪಲ್ ಸುನಿ ಅಂತಲೆ ಕರೆಸಿಕೊಂಡರು. ರಕ್ಷಿತ್ ಶೆಟ್ಟಿ ಕೂಡ ಈ ಚಿತ್ರದಿಂದಲೇ ಸಿಂಪಲ್ ಸ್ಟಾರ್ ಆದರು.
MUST WATCH : ತುಮಕೂರಿನಲ್ಲಿ ತಲೆ ಎತ್ತಿವೆ SPORTS ACADEMY, ಯಾವಾಗ ಉದ್ಘಾಟನೆ ಆಗಲಿವೆ




