Haveri : ಪಡಿತರ ಚೀಟಿಗೆ 5 ಸಾವಿರ ಲಂಚ – ಆಹಾರ ನಿರೀಕ್ಷಕ ಬಂಧನ.

ಕರ್ನಾಟಕದಾದ್ಯಂತ ಭ್ರಷ್ಟಾಚಾರ ಆರೋಪ ಹೊತ್ತಿರುವ ಸರ್ಕಾರಿ ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ನಿರಂತರ ದಾಳಿ ನಡೆಸುತ್ತಿದ್ದಾರೆ. ಬೆಂಗಳೂರು, ದಾವಣಗೆರೆ, ಹಾವೇರಿ ಸೇರಿದಂತೆ ಹಲವು ಸ್ಥಳಗಳಲ್ಲಿ ಲಂಚ ಸ್ವೀಕರಿಸುವಾಗಲೇ ಅಧಿಕಾರಿಗಳು ಲೋಕಾ ಬಲೆಗೆ ಬಿದ್ದಿದ್ದು, ಆರೋಪಿಗಳು ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾರೆ.
40 ಸಾವಿರ ಲಂಚ
ಕಳೆದ ವಾರ Haveri ತಾಲೂಕಿನ ಗುತ್ತಲ ಹೆಸ್ಕಾಂ ಕಚೇರಿಯ ಸಹಾಯಕ ಇಂಜಿನಿಯರ್ ಬಿ. ಮಿಥುನ್ ಗೌಡ ಲೇಔಟ್ ಕಾಮಗಾರಿಗೆ ಇನ್ವೆಂಟರಿ ರಿಪೋರ್ಟ್ ನೀಡಲು 40 ಸಾವಿರ ಲಂಚ ಸ್ವೀಕಾರ ಮಾಡುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ತಗ್ಲಾಕೊಂಡಿದ್ರು.

READ THIS : ಆಕ್ಸಿಡೆಂಟ್ ಜೋನ್ ಆಗ್ತಿದ್ಯಾ ಹೈವೇ ಕ್ರಮ ಕೈಗೊಳ್ಳದ ಅಧಿಕಾರಿಗಳು
ಲೋಕಾ ಬಲೆಗೆ ಬಿದ್ದ ಆಹಾರ ನಿರೀಕ್ಷಕ
ಇನ್ನು ಈ ಘಟನೆ ಮಾಸುವ ಮುನ್ನವೇ ಪಡಿತರ ಚೀಟಿ ಮಾಡಿಸಿಕೊಟ್ಟಿದ್ದಕ್ಕೆ 5 ಸಾವಿರ ಲಂಚ ಪಡೆದ ಆರೋಪದಡಿ ಆಹಾರ ನಿರೀಕ್ಷಕ (ಪ್ರಭಾರ) ವಿಜಯಕುಮಾರ ಗುಡಗೇರಿ ಎಂಬುವವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಪಡಿತರ ಚೀಟಿಗೆ 5 ಸಾವಿರ ಲಂಚ
ಹಾವೇರಿ ತಾಲೂಕಿನ ಪ್ರಭಾರ ಆಹಾರ ನಿರೀಕ್ಷಕ ವಿಜಯಕುಮಾರ, ಕುರುಬಗೊಂಡ ಗ್ರಾಮದ ಶಿವಾನಂದ ಮಾಳಗಿ ಎಂಬುವವರ ಸಂಬಂಧಿಯಾದ ಹಿರೇಲಿಂಗದಹಳ್ಳಿಯ ಬೀರಪ್ಪ ಬಸವಂತಪ್ಪ ಕಾಶಂಬಿ ರವರಿಗೆ ರೇಷನ್ ಕಾರ್ಡನ್ನು ಮಾಡಿಸಿಕೊಟ್ಟಿದ್ದ.
ಇನ್ನು ಪಡಿತರ ಚೀಟಿ ಮಾಡಿಕೊಡಲು ಪ್ರಭಾರ ಆಹಾರ ನಿರೀಕ್ಷಕರಾದ ವಿಜಯಕುಮಾರ ಗುಡಗೇರಿ 5 ಸಾವಿರ ಹಣ್ಣಕ್ಕೆ ಬೇಡಿಕೆ ಇಟ್ಟಿದ್ದರು.

ಆಹಾರ ನಿರೀಕ್ಷಕ ಬಂಧನ
ಇನ್ನು ಬೀರಪ್ಪ ಅವರ ಸಂಬಂಧಿ ನೀಡಿದ ದೂರು ಆಧರಿಸಿ, ಲೋಕಾಯುಕ್ತ ಡಿವೈಎಸ್ಪಿ ಮಧುಸೂದನ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, ಆರೋಪಿ ವಿಜಯಕುಮಾರ ಅವರನ್ನು ಬಂಧಿಸಲಾಗಿದೆ.
ಭ್ರಷ್ಟರಿಗೆ ನಡುಕ
ಒಟ್ಟಿನಲ್ಲಿ ರಾಜ್ಯಾದ್ಯಂತ ಲೋಕಾಯುಕ್ತ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ, ಭ್ರಷ್ಟರಿಗೆ ನಡುಕ ಹುಟ್ಟಿಸುವ ಕೆಲಸ ಮಾಡ್ತಾ ಇದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ದಾಳಿಗಳು ನಡೆಯುವ ಸಾಧ್ಯತೆ ಇದೆ.

MUST WATCH : ILLEGAL ALCOHOL SALE | ಗ್ರಾಮದ ಮನೆಗಳಲ್ಲಿ ಮದ್ಯ ಮಾರಾಟ ಊರಿನ ನಾರಿಯರ ಆಕ್ರೋಶ ಹೇಗಿತ್ತು..?




