BPL ಕಾರ್ಡ್ ಫಲಾನುಭವಿಗಳಿಗೆ ಶಾಕಿಂಗ್ ನ್ಯೂಸ್ ಇದೆ.

ರಾಜ್ಯದಲ್ಲಿ BPL ಕಾರ್ಡ್ಗಳ ಭಾರೀ ಪರಿಷ್ಕರಣೆ ಕಾರ್ಯಾಚರಣೆ ನಡೆದಿದ್ದು, ಲಕ್ಷಾಂತರ ಕಾರ್ಡ್ಗಳು ರದ್ದಾಗಿರುವ ಶಾಕಿಂಗ್ ಮಾಹಿತಿ ಬಹಿರಂಗವಾಗಿದೆ. ಅರ್ಹ ಕುಟುಂಬಗಳಿಗೆ ಮಾತ್ರ ಪಡಿತರ ಹಾಗೂ ಕಲ್ಯಾಣ ಸೌಲಭ್ಯಗಳು ತಲುಪುವಂತೆ ಮಾಡಲು ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ.
BPL ಫಲಾನುಭವಿಗಳಿಗೆ ಶಾಕಿಂಗ್ ನ್ಯೂಸ್
ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ನೀಡಲಾಗುವ Below Poverty Line (BPL) ಕಾರ್ಡ್ಗಳ ಪರಿಷ್ಕರಣೆ ಕಾರ್ಯಾಚರಣೆಯನ್ನು ಆಹಾರ ಇಲಾಖೆ ಕೈಗೊಂಡಿತ್ತು. ಕೇಂದ್ರ ಸರ್ಕಾರವು 13 ಲಕ್ಷ ಕಾರ್ಡ್ಗಳ ಪರಿಶೀಲನೆ ಪಟ್ಟಿ ಮಾಡಿದ್ದರೆ, ರಾಜ್ಯ ಸರ್ಕಾರ 8 ಲಕ್ಷ ಕಾರ್ಡ್ಗಳನ್ನು ರದ್ದು ಮಾಡಲು ಪ್ರತ್ಯೇಕ ಪಟ್ಟಿ ಸಿದ್ಧಪಡಿಸಿತ್ತು. ಆದರೆ ಈಗ ಹೊರಬಿದ್ದಿರುವ ಅಂಕಿಅಂಶಗಳು ಇನ್ನಷ್ಟು ಅಚ್ಚರಿ ಮೂಡಿಸಿವೆ.
ಇದನ್ನು ಓದಿ : ಅತ್ತೆ – ಸೊಸೆ ಜಗಳ : ಬೆಂಗಳೂರಲ್ಲಿ ಮಾಜಿ IT ಉದ್ಯೋಗಿ ದುರಂತ ಅಂತ್ಯ!

20 ಲಕ್ಷ BPL ಕಾರ್ಡ್ ರದ್ದು
ಕಳೆದ ಎಂಟು ತಿಂಗಳಲ್ಲಿ ಬರೋಬ್ಬರಿ 20 ಲಕ್ಷ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡಲಾಗಿದೆ ಎಂದು ತಿಳಿದುಬಂದಿದೆ. ಇದರೊಂದಿಗೆ 14.5 ಲಕ್ಷ ಕಾರ್ಡ್ಗಳನ್ನು ಬಿಪಿಎಲ್ ನಿಂದ APLಗೆ ವರ್ಗಾವಣೆ ಮಾಡಲಾಗಿದೆ.
ರದ್ದಾದ ಕಾರ್ಡ್ಗಳ ವಿವರ
- 9,826 ಬಿಪಿಎಲ್ ಕಾರ್ಡ್ ಅಮಾನತು
- 34,617 ಬಿಪಿಎಲ್ ಕಾರ್ಡ್ ನೇರ ರದ್ದು
- 4 ಲಕ್ಷ ಕಾರ್ಡ್ ಮರುಪರಿಶೀಲನೆಯಲ್ಲಿ ರದ್ದು
- 4 ಲಕ್ಷ ಕಾರ್ಡ್ ಬಿಪಿಎಲ್ ನಿಂದ APLಗೆ ವರ್ಗಾವಣೆ
ಯಾವ ಜಿಲ್ಲೆಯಲ್ಲಿ ಎಷ್ಟು?
- ಬಳ್ಳಾರಿ ಜಿಲ್ಲೆ – 1.91 ಲಕ್ಷ ಕಾರ್ಡ್ ರದ್ದು/ವರ್ಗಾವಣೆ
- ವಿಜಯಪುರ – 95,037 ಕಾರ್ಡ್ ರದ್ದು
- ಕೊಡಗು – 94,423 ಕಾರ್ಡ್ ರದ್ದು
- ಬೆಂಗಳೂರು – ಸುಮಾರು 2 ಲಕ್ಷ ಕಾರ್ಡ್ ರದ್ದು
ಬಳ್ಳಾರಿ ಜಿಲ್ಲೆ ಪರಿಷ್ಕರಣೆಯಲ್ಲಿ ಮೊದಲ ಸ್ಥಾನದಲ್ಲಿದೆ.

BPL ಕಾರ್ಡ್ ಎಂದರೇನು?
ಕರ್ನಾಟಕದಲ್ಲಿ ಬಿಪಿಎಲ್ ಕಾರ್ಡ್ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ನೀಡುವ ಪಡಿತರ ಚೀಟಿ. ಇದರ ಮೂಲಕ ಕಡಿಮೆ ದರದಲ್ಲಿ ಧಾನ್ಯ, ಪಡಿತರ ಹಾಗೂ ಕೆಲವು ಆರೋಗ್ಯ ಸೇವೆಗಳ ಸೌಲಭ್ಯ ದೊರೆಯುತ್ತದೆ. ಇನ್ನು ಹೊಸ ಸದಸ್ಯರನ್ನು ಸೇರಿಸಲು ಪೋಷಕರ ಆಧಾರ್ ಕಾರ್ಡ್, ಮಕ್ಕಳ ಜನನ ಪ್ರಮಾಣಪತ್ರ ಮತ್ತು ಆದಾಯ ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯವಾಗಿದೆ.
ರಾಜ್ಯ ಸರ್ಕಾರದ ಈ ಕಠಿಣ ಕ್ರಮದಿಂದ ಅನರ್ಹ ಫಲಾನುಭವಿಗಳಿಗೆ ಶಾಕ್ ಉಂಟಾಗಿದ್ದು, ಅರ್ಹರಿಗೆ ಮಾತ್ರ ಸೌಲಭ್ಯ ಸಿಗುವಂತಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ನೋಡಿ : PAVAGADA ಪಟ್ಟಣದಲ್ಲೂ TRAFFIC ಸಮಸ್ಯೆ – ರಸ್ತೆಬದಿ ಪಾರ್ಕಿಂಗ್ ಗೆ ಜನ ಹೈರಾಣು




