BPL ಕಾರ್ಡ್ ದಾರರಿಗೆ ಗುಡ್ ನ್ಯೂಸ್.

ಅಂತ್ಯೋದಯ, ಅನ್ನಭಾಗ್ಯ ಯೋಜನೆ ಜಾರಿ ಆದ ಬಳಿಕ ರಾಜ್ಯದಲ್ಲಿ ಅನರ್ಹ BPL ಕಾರ್ಡ್ಗಳು ಹೆಚ್ಚಾಗಿದ್ದವು. ಒಂದೇ ಮನೆಯಲ್ಲಿ ಎರಡೆರಡು ಬಿಪಿಎಲ್ ಕಾರ್ಡ್ ಇದ್ರೆ, ಇನ್ನು ಕೆಲವರು ಟ್ಯಾಕ್ಸ್ ಪೇ ಮಾಡ್ತಾ ಇದ್ರು ಕೂಡ ಬಿಪಿಎಲ್ ಕಾರ್ಡ್ ಹೊಂದಿದ್ರು. ಇದ್ರಿಂದ ಸರ್ಕಾರದ ಬೊಕ್ಕಸಕ್ಕೆ ಹೆಚ್ಚು ಹೊರೆ ಆಗ್ತಾ ಇತ್ತು .
ಇದ್ರಿಂದ ಸರ್ಕಾರ ಪರಿಷ್ಕರಣೆಗೆ ಇಳಿದಿದ್ದು ಅನರ್ಹ ಬಿಪಿಎಲ್ ಕಾರ್ಡ್ಗಳನ್ನು ಪತ್ತೆ ಹಚ್ಚಿ, ಎಪಿಎಲ್ ಕಾರ್ಡ್ಗಳಾಗಿ ಪರಿವರ್ತನೆ ಮಾಡಲಾಗಿತ್ತು.
ಆದ್ರೆ ಈ ಒಂದು ಪರಿಷ್ಕರಣೆಯಲ್ಲಿ ಗೊಂದಲ ಉಂಟಾಗಿ ಕೆಲವೊಂದು ಅರ್ಹ ಬಿಪಿಎಲ್ ಕಾರ್ಡ್ದಾರ ಕಾರ್ಡ್ ಕೂಡ ಎಪಿಎಲ್ ಆಗಿ ಬದಲಾಗ್ತಾ ಇದ್ದು, ಜನರು ಸಂಕಷ್ಟ ಪಡುವಂತಾಗಿತ್ತು.
ಸಚಿವ ಕೆ.ಎಚ್ ಮುನಿಯಪ್ಪ ಗುಡ್ನ್ಯೂಸ್
ಇದೀಗ ಅನರ್ಹ ಬಿಪಿಎಲ್ ಕಾರ್ಡ್ದಾರರಿಗೆ ಸಚಿವ ಕೆ.ಎಚ್ ಮುನಿಯಪ್ಪ ಗುಡ್ನ್ಯೂಸ್ವೊಂದನ್ನು ನೀಡಿದ್ದು, ಪರಿಷ್ಕರಣೆಯ ವೇಗವನ್ನು ಹೆಚ್ಚಿಸಿ, ಆದಷ್ಟು ಬೇಗ ಹೊಸ ಬಿಪಿಎಲ್ ಕಾರ್ಡ್ಗಳನ್ನು ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಹೌದು, ಹಾಸನದಲ್ಲಿ ಮಾತನಾಡಿದ ಸಚಿವ ಕೆ.ಎಚ್ ಮುನಿಯಪ್ಪ, ಹೊಸ ಬಿಪಿಎಲ್ ಕಾರ್ಡ್ಗಳ ವಿತರಣೆ ಮತ್ತು ಎಪಿಎಲ್–ಬಿಪಿಎಲ್ ಕಾರ್ಡ್ಗಳ ಪರಿಷ್ಕರಣೆ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸಲಾಗುವುದು ಎಂದು ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಹೆಚ್. ಮುನಿಯಪ್ಪ ಭರವಸೆ ನೀಡಿದ್ದಾರೆ. ರಾಜ್ಯಾದ್ಯಂತ ಈಗಾಗಲೇ 3ರಿಂದ 4 ಲಕ್ಷ ಹೊಸ ರೇಷನ್ ಕಾರ್ಡ್ಗಳನ್ನು ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.

22,392 ಕಾರ್ಡ್ಗಳ ಪರಿಶೀಲನೆ
ಇನ್ನು ಈಗಾಗಲೇ ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್ಗಳ ಪರಿಷ್ಕರಣೆ ಆರಂಭವಾಗಿದ್ದು, ತಪ್ಪು ದಾಖಲೆಗಳು, ಡುಪ್ಲಿಕೇಟ್ ನೋಂದಣಿ ಮತ್ತು ಅರ್ಹತೆ ಇಲ್ಲದವರ ಹೆಸರನ್ನು ವಿಲೇವಾರಿ ಮಾಡುವ ಕಾರ್ಯ ನಡೆಯುತ್ತಿದೆ.
ಕೇಂದ್ರ ಸರ್ಕಾರದ ಮಾಹಿತಿಯಂತೆ ಸುಮಾರು 7 ಲಕ್ಷ ಮಂದಿ ಎಪಿಎಲ್ ಕಾರ್ಡ್ ಹೊಂದಬೇಕಾದವರು ಬಿಪಿಎಲ್ ಕಾರ್ಡ್ ಪಡೆದಿದ್ದಾರೆ ಎಂಬ ಸೂಚನೆ ಹಿನ್ನೆಲೆ ರಾಜ್ಯವು ಸಮಗ್ರ ಪರಿಶೀಲನೆ ಕೈಗೊಂಡಿದೆ.
ಹಾಸನ ಜಿಲ್ಲೆಯಲ್ಲಿ 22,392 ಕಾರ್ಡ್ಗಳ ಪರಿಶೀಲನೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ಶೀಘ್ರವೇ ಹೊಸ ಕಾರ್ಡ್ ಬರಲಿದ್ಯಂತೆ..?!
ಇನ್ನು ಒಂದೇ ಕುಟುಂಬದ ತಾಯಿ–ತಂದೆ ಹಾಗೂ ಮಗ–ಸೊಸೆ ಬೇರೆಬೇರೆ ವಾಸಿಸುವಂತಹ ಸಂದರ್ಭಗಳಲ್ಲಿ ಪ್ರತ್ಯೇಕ ಕಾರ್ಡ್ಗಳಿಗೆ ಹೆಚ್ಚಿನ ಅರ್ಜಿಗಳು ಬರುತ್ತಿವೆ. ಪ್ರ
ತ್ಯೇಕವಾಗಿ ವಾಸಿಸುವುದಕ್ಕೆ ಸಂಬಂಧಿಸಿದ ದೃಢೀಕರಣ, ಸ್ವಂತ ಮನೆ ಅಥವಾ ಬಾಡಿಗೆ ಮನೆ ದಾಖಲೆಗಳಿದ್ದಲ್ಲಿ ತಹಶೀಲ್ದಾರ್ ಕಚೇರಿಗೆ ಸಲ್ಲಿಸಿದ ಅರ್ಜಿಯನ್ನು 15 ದಿನಗಳೊಳಗೆ ಪರಿಗಣಿಸಿ ಕಾರ್ಡ್ ನೀಡುವ ವ್ಯವಸ್ಥೆ ಮಾಡಲಾಗಿದೆ.
ಬಿಪಿಎಲ್ ಕಾರ್ಡ್ಗಾಗಿ ಕಾಯುತ್ತಿರುವ ಅರ್ಹ ಕುಟುಂಬಗಳಿಗೆ ಶೀಘ್ರದಲ್ಲೇ ಸಕಾರಾತ್ಮಕ ಸುದ್ದಿ ಸಿಗಲಿದೆ ಎಂಬ ವಿಶ್ವಾಸ ಸಿಕ್ಕಿದೆ.
ಒಟ್ನಲ್ಲಿ ರಾಜ್ಯದಲ್ಲಿ ಉಂಟಾಗಿದ್ದ ಬಿಪಿಎಲ್ ಕಾರ್ಡ್ ಗೊಂದಲಗಳಿಗೆ ಸಚಿವರು ಸ್ಪಷ್ಟನೆ ನೀಡಿದ್ದು, ಬಿಪಿಎಲ್ ಕಾರ್ಡ್ದಾರರು ನಿಟ್ಟುಸಿರು ಬಿಡುವಂತಾಗಿದೆ.





