IPL 2026 : RCB ಅಭಿಮಾನಿಗಳಿಗೆ 3 ಗುಡ್ ನ್ಯೂಸ್ – ಒಂದು ಬ್ಯಾಡ್ ನ್ಯೂಸ್.

ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ಸಿಹಿ ಸುದ್ದಿಯೊಂದು ಸಿಕ್ಕಿದೆ. ಕೆಲವು ತಿಂಗಳುಗಳ ವಿರಾಮದ ಬಳಿಕ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮತ್ತೆ ಕ್ರಿಕೆಟ್ ಕಲರವ ಮೊಳಗಲಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ತನ್ನ ಹೋಮ್ಗ್ರೌಂಡ್ನಲ್ಲಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಇದೊಂದೇ ಅಲ್ಲ, ಆರ್ಸಿಬಿ ಅಭಿಮಾನಿಗಳಿಗೆ ಮೂರು ಗುಡ್ ನ್ಯೂಸ್ ಸಿಕ್ಕಿದ್ದು, ಜೊತೆಗೆ ಒಂದು ಬ್ಯಾಡ್ ನ್ಯೂಸ್ ಕೂಡ ಇದೆ.

ಮೂರು ಗುಡ್ ನ್ಯೂಸ್ ಏನು?
1. ಉದ್ಘಾಟನಾ ಪಂದ್ಯ ಬೆಂಗಳೂರಿನಲ್ಲಿ
ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಉದ್ಘಾಟನಾ ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯವಹಿಸಲಿದೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಕಾರ್ಯದರ್ಶಿ ಸಂತೋಷ್ ಮೆನನ್ ಖಚಿತಪಡಿಸಿದ್ದಾರೆ. ಅಂದರೆ ಐಪಿಎಲ್ 2026ರ ಶುಭಾರಂಭವೇ ಬೆಂಗಳೂರಿನಲ್ಲಿ.
2. ಪ್ಲೇಆಫ್ ಪಂದ್ಯವೂ ಇಲ್ಲಿ
ಇನ್ನು ಉದ್ಘಾಟನಾ ಪಂದ್ಯ ಮಾತ್ರವಲ್ಲದೆ, ಪ್ಲೇಆಫ್ ಹಂತದ ಒಂದು ಪ್ರಮುಖ ಪಂದ್ಯ ಕೂಡ ಬೆಂಗಳೂರಿನಲ್ಲಿ ನಡೆಯಲಿದೆ. ಅದು ಎಲಿಮಿನೇಟರ್ ಅಥವಾ ಮೊದಲ ಕ್ವಾಲಿಫೈಯರ್ ಆಗಿರಬಹುದು ಎಂದು ತಿಳಿದುಬಂದಿದೆ.
3. ಫೈನಲ್ ಪಂದ್ಯಕ್ಕೂ ಆತಿಥ್ಯ
ಇನ್ನೊಂದು ಮಹತ್ವದ ಸುದ್ದಿ ಎಂದರೆ, ಐಪಿಎಲ್ 2026ರ ಫೈನಲ್ ಪಂದ್ಯವೂ ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ಆಯೋಜಿಸಲು ನಿರ್ಧಾರವಾಗಿದೆ. ಹೀಗಾಗಿ ಟೂರ್ನಿಯ ಆರಂಭವೂ ಅಂತ್ಯವೂ ಬೆಂಗಳೂರಿನಲ್ಲೇ ನಡೆಯಲಿದೆ.
READ THIS : ಸ್ನೇಹಿತನಿಗೆ ಚಟ್ಟ ಕಟ್ಟಲು ಮುಂದಾದ್ನ? – ಮಚ್ಚಿನಿಂದ ಕೊಚ್ಚಿ ಕೊಚ್ಚಿ ಹಲ್ಲೆ

RCBಗೆ 5+2 ಪಂದ್ಯಗಳ ಅವಕಾಶ
ಲೀಗ್ ಹಂತದಲ್ಲಿ ಆರ್ಸಿಬಿ ಒಟ್ಟು 7 ಹೋಮ್ ಪಂದ್ಯಗಳನ್ನು ಆಡಲಿದ್ದು, ಅದರಲ್ಲಿ 5 ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿವೆ. ಉಳಿದ ಎರಡು ಪಂದ್ಯಗಳನ್ನು ಛತ್ತೀಸ್ಗಢದ ಶಾಹೀದ್ ವೀರ್ ನಾರಾಯಣ್ ಸಿಂಗ್ ಅಂತರಾಷ್ಟ್ರೀಯ ಕ್ರೀಡಾಂಗಣ (ರಾಯ್ಪುರ) ದಲ್ಲಿ ಆಡಲಿದೆ.
ಆದರೆ ಪ್ಲೇಆಫ್ ಮತ್ತು ಫೈನಲ್ ಪಂದ್ಯಗಳು ಕೂಡ ಬೆಂಗಳೂರಿನಲ್ಲಿ ನಡೆಯುತ್ತಿರುವುದರಿಂದ, ಅಭಿಮಾನಿಗಳಿಗೆ ಒಟ್ಟು 7 ಪ್ರಮುಖ ಪಂದ್ಯಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಸಿಗಲಿದೆ.

ಬ್ಯಾಡ್ ನ್ಯೂಸ್ ಏನು?
ಈ ಬಾರಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪ್ರೇಕ್ಷಕರ ಸಂಖ್ಯೆಗೆ ಮಿತಿ ವಿಧಿಸಲಾಗುತ್ತಿದೆ. ಸುರಕ್ಷತಾ ಕಾರಣಗಳಿಂದಾಗಿ 30,000 ರಿಂದ 35,000 ಪ್ರೇಕ್ಷಕರಿಗೆ ಮಾತ್ರ ಪ್ರವೇಶ ನೀಡಲು ನಿರ್ಧರಿಸಲಾಗಿದೆ. ಅಂದರೆ ಎಲ್ಲಾ ಸೀಟುಗಳಿಗೂ ಟಿಕೆಟ್ ಮಾರಾಟ ಇರುವುದಿಲ್ಲ. ಸೀಮಿತ ಪ್ರೇಕ್ಷಕರಿಗಷ್ಟೇ ಪಂದ್ಯ ವೀಕ್ಷಣೆಗೆ ಅವಕಾಶ ಸಿಗಲಿದೆ.
ಒಟ್ಟಾರೆ, ಐಪಿಎಲ್ 2026ರ ಪ್ರಮುಖ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯುತ್ತಿರುವುದು ಆರ್ಸಿಬಿ ಅಭಿಮಾನಿಗಳಿಗೆ ಖುಷಿಯ ಸಂಗತಿ. ಆದರೆ ಟಿಕೆಟ್ಗಳಿಗಾಗಿ ಭಾರೀ ಸ್ಪರ್ಧೆ ಎದುರಾಗುವ ಸಾಧ್ಯತೆ ಇದೆ.

MUST WATCH : TUMAKURU|ಕುಡಿದ ಮತ್ತಲ್ಲಿ ಸ್ನೇಹಿತನ ಮೇಲೆ ಅಟ್ಯಾಕ್ – ಸ್ಥಳದಿಂದ ಪ್ರಜಾಶಕ್ತಿ ಟಿವಿ ಪ್ರತ್ಯಕ್ಷ




