Tumakuru : ಕುಚಿಕು ಕುಚಿಕು ಅಂದವನೇ ಚಟ್ಟ ಕಟ್ಟಲು ಮುಂದಾದ್ನ..? – ಕುಡಿದ ಮತ್ತಲ್ಲಿ ಚಿಕ್ಕ ವಿಷಯಕ್ಕೆ ಸ್ನೇಹಿತರ ಮಧ್ಯೆ ಕಿರಿಕ್..!

ಲವ್ವರ್ ಇಲ್ಲ ಅಂದ್ರು ಪರವಾಗಿಲ್ಲ. ಜೀವನದಲ್ಲಿ ಒಬ್ಬ ಸ್ನೇಹಿತ ಇರಬೇಕು ಅಂತಾರೆ. ಸ್ನೇಹದ ಬಗ್ಗೆ ಹೇಳಲು ಎರಡು ಪದಗಳು ಸಾಕಾಗೋದಿಲ್ಲ. ನಾವು ಬಿದ್ದಾಗ ಎತ್ತಿ ಹಿಡಿಯುವ, ಕಣ್ಣೀರನ್ನು ಒರೆಸುವ ಆತ್ಮೀಯರೇ ನಿಜವಾದ ಸ್ನೇಹಿತರು. ಆದ್ರೆ ಸ್ನೇಹಿತರೇ ಕೆಲವೊಮ್ಮೆ ನಮ್ಮ ಬಾಳಿಗೆ ವಿಲನ್ ಆಗಿಬಿಡ್ತಾರೆ. ಒಂದೇ ತಟ್ಟೆಲಿ ಅನ್ನ ಪ್ರಾಣ ಸ್ನೇಹಿತನೇ ಜೀವ ತೆಗೆದಂತಹ ಪ್ರಕರಣಗಳು ಅಲ್ಲಲ್ಲಿ ಬೆಳಕಿಗೆ ಬರ್ತಾವೆ. ಈಗ ಅಂತಹದ್ದೇ ಭಯಾನಕ ಘಟನೆ ತುಮಕೂರಿನಲ್ಲಿ ಬೆಳಕಿಗೆ ಬಂದಿದೆ.
ಪ್ರಾಣ ಸ್ನೇಹಿತನ ಪ್ರಾಣವನ್ನೇ ತೆಗೆಯಲು ಸ್ಕೆಚ್
ಹೌದು ಕುಚಿಕು, ಕುಚಿಕು ಅಂತಾ ಹಿಂದೆ ಹಿಂದೆ ಬರ್ತಾ ಇದ್ದ ಪ್ರಾಣ ಸ್ನೇಹಿತ. ಅವರಿಬ್ಬರು ಚಿಕ್ಕವಯಸ್ಸಿನಿಂದಲೂ ಒಟ್ಟಿಗೆ ಬೆಳೆದವರು. ಜೊತೆಯಲ್ಲೇ ಕೆಲಸ. ಜೊತೆಯಲ್ಲೇ ಸುತ್ತಾಟ. ಸಾಲದಕ್ಕೆ ಅವರಿಬ್ಬರು ಒಂದೇ ಊರಿನವರು. ಆದರೆ ಅಂತಹ ಪ್ರಾಣ ಸ್ನೇಹಿತನ ಪ್ರಾಣವನ್ನೇ ತೆಗೆಯಲು ಮುಂದಾಗಿರೋ ಭಯಾನಕ ಘಟನೆ Tumakuru ತಾಲೂಕು ಉರ್ಡಿಗೆರೆ ಹೋಬಳಿಯ ಪೆಮ್ಮನಹಳ್ಳಿಯಲ್ಲಿ ನಡೆದಿದೆ. ಸ್ನೇಹಿತನ ಕ್ರೌರ್ಯ ಕಂಡ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.

ಮಚ್ಚಿನಿಂದ ಕೊಚ್ಚಿ ಮಾರಣಾಂತಿಕವಾಗಿ ಹಲ್ಲೆ
ಹೀಗೆ ಫೋಟೊದಲ್ಲಿ ಕಾಣಿಸಿಸ್ತಾ ಇರೋ ಸ್ನೇಹಿತರ ಹೆಸರು ಮುನಿರಾಜು ಹಾಗೂನಾಗೇಶ್ ಅಂತಾ. ತುಮಕೂರು ತಾಲೂಕಿನ ಊರ್ಡಿಗೆರೆ ಹೋಬಳಿಯ ಪೆಮ್ಮನಹಳ್ಳಿ ಗ್ರಾಮ ನಿವಾಸಿಗಳು. ಇವರಿಬ್ಬರು ಎಷ್ಟರ ಮಟ್ಟಿಗೆ ಸ್ಬೇಹಿತರು ಅಂದ್ರೆ ಎಂದಿಗೂ ಒಬ್ಬರನ್ನು ಒಬ್ಬರು ಬಿಟ್ಟಿರದವರು.
ಆದರೆ ಇಂತಹ ಸ್ನೇಹಿತರು ಕುಡಿದ ಮತ್ತಲ್ಲಿ ಕಿರಿಕ್ ಮಾಡಿಕೊಂಡಿದ್ದು, ಸ್ನೇಹಿತ ಮುನಿರಾಜು ಮೇಲೆ ನಾಗೇಶ್ ಮಚ್ಚಿನಿಂದ ಕೊಚ್ಚಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ಮಧ್ಯರಾತ್ರಿ ಒಂದು ಗಂಟೆ ಸುಮಾರಿಗೆ ಇಬ್ಬರ ಮಧ್ಯೆ ಗಲಾಟೆಯಾಗಿದ್ದು ಹೊಡೆದಾಡಿಕೊಂಡಿದ್ದಾರೆ.
ಹಲ್ಲೆಯಿಂದ ಗಾಯಗೊಂಡಿದ್ದ ನಾಗೇಶ್ ರಾತ್ರಿಯಿಡಿ ರಕ್ತದ ಮಡುವುನಲ್ಲಿ ಬಿದ್ದು ಒದ್ದಾಡಿದ್ದು, ನರಳಾಡಿದ್ದಾನೆ. ಬಳಿಕ ಬೆಳಗ್ಗೆ ಗ್ರಾಮಸ್ಥರು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
MUST WATCH : YADAGIRI|ಕುಡಿದ ಮತ್ತಲ್ಲಿ ಸ್ನೇಹಿತರ ಮಧ್ಯೆ ಗಲಾಟೆ ಇಬ್ಬರ ಗಲಾಟೆ ಕೊಲೆಯಲ್ಲಿ ಅಂತ್ಯ

ಕುಡಿದ ಮತ್ತಲ್ಲಿ ಚಿಕ್ಕ ವಿಷಯಕ್ಕೆ ಸ್ನೇಹಿತರ ಮಧ್ಯೆ ಕಿರಿಕ್..!
ಮೊನ್ನೆ ರಾತ್ರಿ ಎಂಟುವರೆ ಸುಮಾರಿಗೆ ಮುನಿರಾಜು ಮನೆಗೆ ಬಂದಿದ್ದ ನಾಗೇಶ್, ಮುನಿರಾಜ್ನನ್ನು ತನ್ನೊಟ್ಟಿಗೆ ತನ್ನ ರೂಮಿಗೆ ಕರೆದೊಯ್ದಿದ್ದಾನೆ. ರೂಂಗೆ ಹೋದ ಬಳಿಕ ಗಲಾಟೆ ಮಾಡಿಕೊಂಡಿದ್ದಾರೆ. ರೂಂನಲ್ಲಿ ಎಣ್ಣೆ ಪಾರ್ಟಿ ಮಾಡಿಕೊಂಡು ಬಳಿಕ ಕುಡಿದ ಮತ್ತಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗ್ತಿದೆ.
ಮಧ್ಯರಾತ್ರಿ ಸುಮಾರು ಒಂದು ಗಂಟೆ ಸುಮಾರಿಗೆ ಇಬ್ಬರು ಗಲಾಟೆ ಮಾಡಿಕೊಂಡಿದ್ದು, ರಾತ್ರಿ ನಾಗೇಶ್ ರೂಂನಿಂದ ನರಳಾಡುವ ಶಬ್ದ ಕೇಳಿ ಬಂದಿತ್ತು ಎಂದು ಸ್ಥಳೀಯರು ಹೇಳಿದ್ದಾರೆ. ಅಲ್ದೇ ಬೆಳಗ್ಗೆ ರೂಂಗೆ ಬಂದು ನೋಡಿದಾಗ ರೂಂನಲ್ಲಿ ರಕ್ತದೋಕುಳಿಯೇ ನಡೆದು ಹೋಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹಲ್ಲೆಯ ಭೀಕರತೆಯನ್ನು ವಿವರಿಸಿದರು.

ತನ್ನ ಮಗನನ್ನು ಉಳಿಸಿಕೊಡಿ
ಇನ್ನು ಮಾರಣಾಂತಿಕ ಹಲ್ಲೆ ಮಾಡಿರುವ ಬಗ್ಗೆ ಸ್ನೇಹಿತ ನಾಗೇಶನೇ ಒಪ್ಪಿಕೊಂಡಿದ್ದಾನೆ. ಇತ್ತ ಮಗನ ಸ್ಥಿತಿ ಕಂಡು ಮುನಿರಾಜು ತಾಯಿ ಕಣ್ಣೀರಾಕುತ್ತಿದ್ದು, ತನ್ನ ಮಗನನ್ನು ಉಳಿಸಿಕೊಡಿ ಎಂದು ಅಂಗಲಾಚಿದ್ರು.
ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಸದ್ಯ ಈ ಸಂಬಂಧ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ನಾಗೇಶ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ತನಿಖೆ ಬಳಿಕ ಹಲ್ಲೆಗೆ ನಿಖರ ಕಾರಣ ತಿಳಿದು ಬರಲಿದೆ. ಅದೇನೆ ಆಗಲಿ ಒಂದೇ ತಟ್ಟೆಲಿ ಊಟ ಮಾಡಿ, ಸ್ನೇಹಿತನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದು ಮಾತ್ರ ದುರಂತವೇ ಸರಿ.

READ THIS : ಯಶ್ ಫ್ಯಾನ್ಸ್ಗೆ ನಿರಾಸೆ! ಮಾ.19ಕ್ಕೆ ರಿಲೀಸ್ ಆಗಲ್ಲ ʻToxicʼ – ಮತ್ಯಾವಾಗ?




