ವಿವಾಹವಾದ ಮರುದಿವೇ Vijay – Rashmika ಜಂಟಿಯಾಗಿ ದೆಹಲಿಗೆ ತೆರಳಿದ್ದಾರೆ.

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು ನಿನ್ನೆಯಷ್ಟೆ ರಾಜಸ್ಥಾನದ ಉದಯಪುರದಲ್ಲಿ ಐಶಾರಾಮಿ ಐಟಿಸಿ ರೆಸಾರ್ಟ್ನಲ್ಲಿ ಬಲು ಅದ್ಧೂರಿಯಾಗಿ ವಿವಾಹವಾಗಿದ್ದಾರೆ.

ಮೋದಿಯನ್ನು ಭೇಟಿಯಾದ ರಶ್ಮಿಕಾ – ವಿಜಯ್
ಮದುವೆಯ ನಂತರ ದಂಪತಿಗಳು ದೆಹಲಿಗೆ ತೆರಳಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ, ಮಾರ್ಚ್4 ರಂದು ಹೈದರಾಬಾದ್ನಲ್ಲಿ ನಡೆಯಲಿರುವ ಮದುವೆ ಆರತಕ್ಷತೆ ಕಾರ್ಯಕ್ರಮಕ್ಕೆ ಸ್ವತಃ ಆಹ್ವಾನಿಸಿದ್ದಾರೆ.
ಇದನ್ನು ಓದಿ : ಮನಸಾರೆ ಪ್ರೀತಿಸಿದ ಪ್ರೇಮಿಯನ್ನೇ ಚಾಕುವಿನಿಂದ ಇರಿದ ಯುವತಿ.!

ಪತ್ರ ಮುಖೇನ ಶುಭಾಶಯ
ಅಸಲಿಗೆ ಮೋದಿ ಅವರು ವಿಜಯ್ ಹಾಗೂ ರಶ್ಮಿಕಾ ಮಂದಣ್ಣ ಮದುವೆಗೆ ಮುಂಚೆಯೇ ಪತ್ರ ಮುಖೇನ ಶುಭಾಶಯ ತಿಳಿಸಿದ್ದರು. ವಿಜಯ್ ಅವರ ತಂದೆ ಬರೆದಿದ್ದ ಆಹ್ವಾನ ಪತ್ರಕ್ಕೆ ಪ್ರತಿಕ್ರಿಯೆಯಾಗಿ ಮೋದಿ ಅವರು ಪತ್ರ ಬರೆದು ವಧು-ವರರಿಗೆ ಶುಭ ಕೋರಿದ್ದರು.

ಅಮಿತ್ ಶಾ ಅವರನ್ನೂ ಸಹ ಭೇಟಿ
ಇದೇ ದಿನ Rashmika – Vijay ದೇವರಕೊಂಡ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರನ್ನೂ ಸಹ ಭೇಟಿ ಆಗಿದ್ದು, ಅವರನ್ನೂ ಸಹ ಮಾರ್ಚ್ 04 ರಂದು ನಡೆಯಲಿರುವ ಆರತಕ್ಷತೆಗೆ ಆಹ್ವಾನಿಸಿದ್ದಾರೆ. ಇನ್ನು ಆರತಕ್ಷತೆ ಕಾರ್ಯಕ್ರಮಕ್ಕೆ ಚಿತ್ರರಂಗದ ಗಣ್ಯರ ಜೊತೆಗೆ ಕೆಲವು ರಾಜಕೀಯ ಮುಖಂಡರನ್ನು ಸಹ ಆಹ್ವಾನಿಸಲಾಗಿದೆ.

ಇದನ್ನು ನೋಡಿ : ಗಂಡ ಸತ್ತು 16ನೇ ದಿನಕ್ಕೆ ಹೆಂಡ್ತಿ ಮತ್ತೊಂದು ಮದುವೆ- ಸಾವಿನ ಬಗ್ಗೆ ಅನುಮಾನಗೊಂಡ ಶವಹೊರತೆಗೆದ್ರು




