Ramanagara : ಪ್ರಿಯಕರ (Lover) ಬೇರೆ ಹುಡುಗಿ ಜೊತೆ ಸಂಪರ್ಕದಲ್ಲಿದ್ದಾನೆ ಎಂದು ಜಿಮ್ ಟ್ರೈನರ್ ಪ್ರಿಯಕರನಿಗೆ ಪ್ರೇಯಸಿಯೇ ಚಾಕು ಇರಿದಿರೋ ಘಟನೆ ನಡೆದಿದೆ

Ramanagara : ಪ್ರಿಯಕರನು ಬೇರೆ ಯುವತಿಯ ಜೊತೆ ಸಂಪರ್ಕದಲ್ಲಿದ್ದಾನೆ ಎಂಬ ಅನುಮಾನದಿಂದ ಪ್ರೇಯಸಿಯೇ ಚಾಕು ಇರಿದ ಘಟನೆ ರಾಮನಗರ ಜಿಲ್ಲೆಯ ಬಿಡದಿಯ ಸಿಲ್ಕ್ ಫಾರ್ಮ್ ಕ್ವಾಟರ್ಸ್ ಸಮೀಪ ಗುರುವಾರ ರಾತ್ರಿ ನಡೆದಿದೆ.
ಪ್ರಿಯಕರನಿಗೆ ಚಾಕು ಇರಿದ ಯುವತಿ
ಚಾಕು ಇರಿತಕ್ಕೊಳಗಾದ ಯುವಕನನ್ನು ವೇಣುಗೋಪಾಲ್ (27) ಎಂದು ಗುರುತಿಸಲಾಗಿದ್ದು, ಆರೋಪಿ ಸುಧಾ (30) ಎಂದು ತಿಳಿದುಬಂದಿದೆ. ಕಳೆದ 5–6 ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ.
ಇದನ್ನೂ ಓದಿ : ವಾಟ್ಸಾಪ್ ಸ್ಟೇಟಸ್ ಹಾಕಿ ನೀರಿಗೆ ಬಿದ್ದು ವಿದ್ಯಾರ್ಥಿ Suicide

ಇತ್ತೀಚೆಗೆ ವೇಣುಗೋಪಾಲ್ ಸುಧಾಳಿಂದ ಅಂತರ ಕಾಯ್ದುಕೊಂಡಿದ್ದಾನೆ. ಅಲ್ಲದೆ ಮತ್ತೊಬ್ಬ ಯುವತಿಯ ಜೊತೆ ಸಂಪರ್ಕದಲ್ಲಿದ್ದಾನೆ ಎಂಬ ಅನುಮಾನದಿಂದ ಕೋಪಗೊಂಡ ಸುಧಾ, ಮಾತನಾಡಬೇಕೆಂದು ಮನೆ ಬಳಿ ಕರೆಸಿಕೊಂಡು ಚಾಕು ಇರಿದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಘಟನೆಯ ಬಳಿಕ ಸುಧಾ ಸ್ವಯಂ ಪ್ರೇರಿತವಾಗಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾಳೆ. ಗಾಯಗೊಂಡ ವೇಣುಗೋಪಾಲ್ಗೆ ಬಿಡದಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಸದ್ಯ ಈ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರೆಸಿದ್ದಾರೆ.
MUST WATCH : ಗಂಡ ಸತ್ತು 16ನೇ ದಿನಕ್ಕೆ ಹೆಂಡ್ತಿ ಮತ್ತೊಂದು ಮದುವೆ- ಸಾವಿನ ಬಗ್ಗೆ ಅನುಮಾನಗೊಂಡ ಶವಹೊರತೆಗೆದ್ರು




