Turuvekere : ವಿದಾಯದ ಸ್ಟೇಟಸ್ ಬಳಿಕ ದುರಂತ: ನೀರಿಗೆ ಹಾರಿ ವಿದ್ಯಾರ್ಥಿ Suicide!

ಪ್ರೀತಿ, ಪ್ರೇಮ ವಿಚಾರಕ್ಕೆ ಈಗಿನ ಕಾಲದ ಚಿಕ್ಕ ಚಿಕ್ಕ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ಹೆಚ್ಚಾಗ್ತಿವೆ. ಇದೇ ರೀತಿ ಇಲ್ಲೊಬ್ಬ ವಿದ್ಯಾರ್ಥಿ “ನೀನೇ ಖುಷಿಯಾಗಿರು ನಾನು ಪ್ರಪಂಚನೇ ಬಿಟ್ಟು ಹೋಗ್ತಿದಿನಿ” ಎಂದು ಸ್ಟೇಟಸ್ ಹಾಕಿ Suicide ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ಪಟ್ಟಣದ ಡಿಪ್ಲೋಮಾ ಕಾಲೇಜಿನ ಹಿಂಬಾಗದಲ್ಲಿರುವ ಕಟ್ಟೆ ಬಳಿ ಘಟನೆ ನಡೆದಿದೆ.
ಧನುಷ್ ದಾರುಣ ಸಾವು
ಇನ್ನು ತುರುವೇಕೆರೆ ತಾಲ್ಲೂಕಿನ ಕೊಂಡಜ್ಜಿ ಬಳಿಯ ಗೋಪೆನಹಳ್ಳಿ ಗ್ರಾಮದ 19 ವರ್ಷದ ಧನುಷ್ ಮೃತ ದುರ್ದೈವಿಯಾಗಿದ್ದಾನೆ. ಧನುಷ್ ಎರಡನೇ ವರ್ಷದ ಡಿಪ್ಲೋಮಾ ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಇದನ್ನು ಓದಿ : Bengaluru| ನಟಿ ರನ್ಯಾ ರಾವ್ಗೆ ಬಿಗ್ ಶಾಕ್!
ಕಾಲೇಜಿಗೆ ಹೋಗುತ್ತೆನೆಂದು ಹೇಳಿ ಹೋಗಿ Suicide!
ನೆನ್ನೆ ಬೆಳಗ್ಗೆ ಕಾಲೇಜಿನ ಹೋಗುತ್ತೇನೆಂದು ಹೇಳಿ ಮನೆಯಿಂದ ಧನುಷ್ ಹೊರಟಿದ್ದ. ಆದರೆ ಸಂಜೆಯಾದರೂ ಕೂಡ ಮನೆಗೆ ಮರಳಿರಲಿಲ್ಲ. ಜೊತೆಗೆ ಪೋಷಕರ ಕಾಲ್ ಅನ್ನು ಕೂಡ ರಿಸೀವ್ ಮಾಡಿರಲಿಲ್ಲ. ಇದರಿಂದ ಆತಂಕಗೊಂಡ ಪೋಷಕರು ಎಲ್ಲಾ ಕಡೆ ಹುಡುಕಾಟ ನಡೆಸಿದ್ರು. ಈ ವೇಳೆ ಡಿಪ್ಲೋಮಾ ಕಾಲೇಜಿನ ಹಿಂಬಾಗ ಇರುವ ಕಟ್ಟೆಯೊಂದರ ಬಳಿ ಧನುಷ್ ಬ್ಯಾಗ್, ಚಪ್ಪಲಿ, ಮೊಬೈಲ್, ಪತ್ತಯಾಗಿದೆ. ಜೊತೆಗೆ ಆತ್ಮಹತ್ಯೆಗೂ ಮುನ್ನ ಮೊಬೈಲ್ನಲ್ಲಿ ಸ್ಟೇಟಸ್ ಹಾಕಿದ್ದನ್ನು ಗಮನಿಸಿದ್ದರು. ಕೂಡಲೇ ಪೋಷಕರು ತುರುವೇಕೆರೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪ್ರಕರಣ ದಾಖಲು
ಇನ್ನು ಘಟನಾ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ ನಡೆಸಿದಾಗ ನೀರಿನ ಕಟ್ಟೆಯಲ್ಲಿ ವಿದ್ಯಾರ್ಥಿ ಧನುಷ್ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ಕಟ್ಟೆಯಿಂದ ಹೊರತೆಗೆದು ತುರುವೇಕೆರೆ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ. ಘಟನೆ ಸಂಬಂಧ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ನೋಡಿ : ಕಸದ ವಿಚಾರಕ್ಕೆ ಇದೆಂಥಾ ರೌಡಿಸಂ..?! – ಕಲ್ಲಿನಿಂದ ಹಲ್ಲೆ ನಡೆಸಿ ರಕ್ತಪಾತ ಮಾಡಿದ್ರು


