ನಟಿ Ranya Rao ಹಾಗೂ ಇಬ್ಬರು ಸಹಚರರ ವಿರುದ್ಧ ಚಿನ್ನ ಕಳ್ಳಸಾಗಣೆ ಮತ್ತು ಹಣಕಾಸು ಅಕ್ರಮ ಪ್ರಕರಣದಲ್ಲಿ ಇಡಿ ಚಾರ್ಜ್ಶೀಟ್ ಸಲ್ಲಿಸಿದೆ.

ಗೋಲ್ಡ್ ಸ್ಮಗ್ಲಿಂಗ್ ಕೇಸ್ ನಲ್ಲಿ ಸಿಲುಕಿರುವ ಸ್ಯಾಂಡಲ್ ವುಡ್ ನಟಿರನ್ಯಾರಾವ್ ಹಾಗೂ ಇಬ್ಬರು ಸಹಚರರ ವಿರುದ್ದ ಜಾರಿ ನಿರ್ದೇಶನ ನೆನ್ನೆ ಅಂದರೆ ಬುಧವಾರ ಚಾರ್ಚ್ ಶೀಟ್ ಸಲ್ಲಿಸಿದೆ.
ED ಸಲ್ಲಿಸಿರುವ ಚಾರ್ಚ್ ಶೀಟ್ನಲ್ಲಿ ಸ್ಫೋಟಕ ಮಾಹಿತಿ ಬಯಲಾಗಿದ್ದು, ಹರ್ಷವರರ್ಧನಿ ರನ್ಯಾ ಎಂದು ಕರೆಯಲ್ಪಡುವ ರನ್ಯಾ ರಾವ್ ಒಂದೇ ವರ್ಷದಲ್ಲಿ ನೂರಾರು ಕೆಜಿ ಚಿನ್ನವನ್ನು ಭಾರತಕ್ಕೆ ತಂದಿದ್ದಾರೆ ಎಂದು ED ಆರೋಪಿಸಿದೆ.
ಗೋಲ್ಡ್ ಸ್ಮಗ್ಲಿಂಗ್ ರಾಣಿ ತಂದಿದ್ದು 127 ಕೆಜಿ ಚಿನ್ನ
ಗೋಲ್ಡ್ ಸ್ಮಗ್ಲಿಂಗ್ ರಾಣಿ Ranya Rao ಒಂದೇ ವರ್ಷದಲ್ಲಿ 127.287 ಕೆಜಿಚಿನ್ನವನ್ನ ಅಕ್ರಮವಾಗಿ ಭಾರತಕ್ಕೆ ತಂದಿದ್ದಾರೆ. ಇದರ ಮೌಲ್ಯ 102.55 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ಹ್ಯಾಂಡ್ಲರ್ಗಳು ಮತ್ತು ಆಭರಣ ವ್ಯಾಪಾರಿಗಳು ಜಾಲದ ಮೂಲಕ ಅವರು ದೇಶೀಯ ಮಾರುಕಟ್ಟೆ ಚಿನ್ನವನ್ನು ಮಾರಾಟ ಮಾಡಿದ್ದಾರೆ ಎಂದು ED ಆರೋಪಿಸಲಾಗಿದೆ.
ಇದನ್ನು ಓದಿ : Namma Metro ಪ್ರಯಾಣಿಕರಿಗೆ ಗುಡ್ ನ್ಯೂಸ್ – ಪ್ರಯಾಣ ಇನ್ನೂ ಸುಲಭ!

ಏರ್ಪೋರ್ಟ್ನಲ್ಲಿ ಸಿಕ್ಕಿಬಿದ್ದಿದ್ದ Ranya Rao!
ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಅಧಿಕಾರಿಗಳು ಮಾರ್ಚ್ 3, 2025 ರಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ಯಾ ರಾವ್ ಅವರನ್ನು ಬಂಧಿಸಿದರು.
ಅವರ ಬಳಿ 14.213 ಕೆಜಿ 24 ಕ್ಯಾರೆಟ್ ವಿದೇಶಿ ಚಿನ್ನ ಪತ್ತೆಯಾಗಿತ್ತು. ಇದರ ಮೌಲ್ಯ 12.56 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಅವರು ಅವರ ಮನೆಯನ್ನು ಶೋಧಿಸಿ 2.67 ಕೋಟಿ ರೂ. ನಗದು ಮತ್ತು 2.06 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡರು.
ನಟಿ ರನ್ಯಾರಾವ್ ವಿರುದ್ಧ ED ಚಾರ್ಚ್ಶೀಟ್
ಫೆಬ್ರವರಿ 25 ರಂದು ರನ್ಯಾ ರಾವ್, ತರಣ್ ಕೊಂಡೂರು ಮತ್ತು ಸಾಹಿಲ್ ಸಕಾರಿಯಾ ಜೈನ್ ವಿರುದ್ಧ ಇಡಿ ಅಧಿಕಾರಿಗಳು ಬೆಂಗಳೂರಿನ ಪಿಎಂಎಲ್ಎ ವಿಶೇಷ ನ್ಯಾಯಲಯದಲ್ಲಿ ಆರೋಪ ಪಟ್ಟಿ ಸಲ್ಲಿಸಿದ್ದಾರೆ.ಇನ್ನು ಈ ಪ್ರಕರಣದಲ್ಲಿ ನ್ಯಾಯಲಯವು ಯಾವ ತೀರ್ಪು ನೀಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನು ನೋಡಿ : AUTO ACCIDENT | ಕೋತಿಯನ್ನು ತಪ್ಪಿಸಲು ಹೋಗಿ ಭೀಕರ ಅಪಘಾತ ಓರ್ವ ವ್ಯಕ್ತಿ ಸಾವು




