Metro ಪ್ರಯಾಣವನ್ನ ಮತ್ತಷ್ಟು ಸುಲಭಗೊಳಿಸಲು ಬಿಎಂಆರ್ಸಿಎಲ್ ಯೋಜನೆಗಳನ್ನ ರೂಪಿಸಿದೆ.

ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ನಿರ್ವಹಣೆಯ ನಮ್ಮ ಮೆಟ್ರೋ ಬೆಂಗಳೂರಿನ ಜೀವನಾಡಿಯಾಗಿ ಪರಿಣಮಿಸಿದೆ. ಟ್ರಾಫಿಕ್ ಜಾಮ್ನಿಂದ ಮುಕ್ತಿ ಹಾಗೂ ಆರಾಮದಾಯಕ ಪ್ರಯಾಣಕ್ಕೆ ಮೆಟ್ರೋ ಜನಪ್ರಿಯ ಆಯ್ಕೆಯಾಗಿದ್ದು, ಇದೀಗ ಪ್ರಯಾಣಿಕರಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ.
3 ಹೊಸ ರೈಲುಗಳ ಸೇರ್ಪಡೆ
ಜನ ದಟ್ಟಣೆ ಹೆಚ್ಚುತ್ತಿರುವ ಹಿನ್ನೆಲೆ ಮೆಟ್ರೋ ಸೇವೆಯನ್ನು ಇನ್ನಷ್ಟು ಸುಧಾರಿಸಲು ಬಿಎಂಆರ್ಸಿಎಲ್ ಕ್ರಮ ಕೈಗೊಂಡಿದೆ. ಶೀಘ್ರದಲ್ಲೇ ನೇರಳೆ (Purple) ಮತ್ತು ಹಸಿರು (Green) ಮಾರ್ಗಗಳಿಗೆ 3 ಹೊಸ ಮೆಟ್ರೋ ರೈಲುಗಳು ಸೇರ್ಪಡೆಯಾಗಲಿವೆ. ಜೂನ್ ಅಂತ್ಯದೊಳಗೆ ಈ ರೈಲುಗಳು ಸಂಚಾರಿಸುವ ಸಾಧ್ಯತೆ ಇದೆ. ಇದರೊಂದಿಗೆ ಪ್ರಯಾಣಿಕರಿಗೆ ಹೆಚ್ಚು ಸುಗಮ ಮತ್ತು ವೇಗವಾದ ಸೇವೆ ದೊರೆಯಲಿದೆ.
96 ಹೊಸ ರೈಲುಗಳ ಯೋಜನೆ
ಮೆಟ್ರೋ ಸೇವೆಯನ್ನು ವಿಸ್ತರಿಸುವ ಉದ್ದೇಶದಿಂದ ಒಟ್ಟು 96 ಹೊಸ ರೈಲುಗಳನ್ನು ಹಂತ ಹಂತವಾಗಿ ಸೇರ್ಪಡೆ ಮಾಡುವ ಯೋಜನೆ ರೂಪಿಸಲಾಗಿದೆ. ಹೊಸ ರೈಲುಗಳು ಸೇರ್ಪಡೆಯಾದ ನಂತರ ಪ್ರತಿ 4 ನಿಮಿಷಕ್ಕೊಮ್ಮೆ ಮೆಟ್ರೋ ಸಂಚಾರ ನಡೆಸಲು ಬಿಎಂಆರ್ಸಿಎಲ್ ಸಿದ್ಧತೆ ನಡೆಸಿದೆ.
ಇದನ್ನು ಓದಿ : ನೇಣು ಬಿಗಿದು ಎಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ Suicide

ಪ್ರಸ್ತುತ ರೈಲುಗಳ ಸ್ಥಿತಿ
- ಗ್ರೀನ್ ಮತ್ತು ಪರ್ಪಲ್ ಲೈನ್ಗಳಲ್ಲಿ ಈಗ 58 ರೈಲುಗಳು ಸಂಚರಿಸುತ್ತಿವೆ
- ಯೆಲ್ಲೋ ಲೈನ್ನಲ್ಲಿ 6 ರೈಲುಗಳು ಕಾರ್ಯನಿರ್ವಹಿಸುತ್ತಿವೆ
- ಗ್ರೀನ್ ಮತ್ತು ಪರ್ಪಲ್ ಮಾರ್ಗಗಳಿಗೆ 21 ಹೊಸ ರೈಲುಗಳು ಬರಲಿವೆ
- ಯೆಲ್ಲೋ ಲೈನ್ಗೆ 9 ಹೊಸ ರೈಲುಗಳ ಸೇರ್ಪಡೆ ನಿರೀಕ್ಷೆ
- ಹೆಚ್ಚುವರಿಯಾಗಿ 6 ರೈಲುಗಳಿಗೆ ಆರ್ಡರ್ ನೀಡಲಾಗಿದೆ
ಮೆಟ್ರೋ ಮಾರ್ಗಗಳ ವಿವರ
ಪ್ರಸ್ತುತ ನಮ್ಮ ಮೆಟ್ರೋ 97 ಕಿ.ಮೀ. ಉದ್ದದ ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿದೆ:
- ಪೂರ್ವ-ಪಶ್ಚಿಮ ಕಾರಿಡಾರ್ (43.49 ಕಿಮೀ): ವೈಟ್ಫೀಲ್ಡ್ನಿಂದ ಚಲ್ಲಘಟ್ಟವರೆಗೆ
- ಉತ್ತರ-ದಕ್ಷಿಣ ಕಾರಿಡಾರ್ (33.5 ಕಿಮೀ): ಮಾದಾವರದಿಂದ ಸಿಲ್ಕ್ ಇನ್ಸ್ಟಿಟ್ಯೂಟ್ವರೆಗೆ
- ಹಳದಿ ಮಾರ್ಗ (19.75 ಕಿಮೀ): ಆರ್ವಿ ರಸ್ತೆದಿಂದ ಬೊಮ್ಮಸಂದ್ರವರೆಗೆ
ನಗರದ ಅನೇಕರು ದಿನನಿತ್ಯ ಮೆಟ್ರೋ ಸೇವೆಯನ್ನೇ ಅವಲಂಬಿಸಿರುವ ಹಿನ್ನೆಲೆಯಲ್ಲಿ, ಹೊಸ ರೈಲುಗಳ ಸೇರ್ಪಡೆ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವನ್ನು ಕಲ್ಪಿಸಲಿದೆ.

ಇದನ್ನು ನೋಡಿ : GUBBI | ಎರಡು ಕಡೆ ಸೋತಿದ್ರಿಂದ ಇಲ್ಲಿಗೆ ಬಂದೆ- ಹೀಗ್ಯಾಕಂದ್ರು ಕೇಂದ್ರ ಸಚಿವ ವಿ.ಸೋಮಣ್ಣ | V SOMANNA




