Hassan : ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಸಾವು? – ಆಸ್ಪತ್ರೆ ಮುಂದೆ ಬಾಣಂತಿ ಗಂಡನ ಗೋಳಾಟ.

ವೈದ್ಯರ ನಿರ್ಲಕ್ಷ್ಯಕ್ಕೆ ಹೆರಿಗೆ ಆಗಿ ಕೆಲವೇ ಗಂಟೆಗಳಲ್ಲಿ 30 ವರ್ಷದ ಬಾಣಂತಿ ಸಾವನ್ನಪ್ಪಿದ್ದಾರೆ ಎಂದು ಕುಟುಬಸ್ಥರು ಗಂಭೀರ ಆರೋಪ ಮಾಡುತ್ತಿದ್ದಾರೆ. ವೈದ್ಯರ ನಿರ್ಲಕ್ಷ್ಯ ಮತ್ತು ತಡವಾದ ಚಿಕಿತ್ಸೆಯೇ ಸಾವಿಗೆ ಕಾರಣವೆಂದು ಆರೋಪಿಸಿ ಮೃತಳ ಕುಟುಂಬದವರು ಹಾಗೂ ಬಂಧುಗಳು ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿ ನ್ಯಾಯಕ್ಕಾಗಿ ಆಗ್ರಹಿಸಿದರು. ಇನ್ನು ಹೆಂಡತಿ ಸಾವನ್ನಪ್ಪಿರೋ ಸುದ್ದಿ ಕೇಳಿ ಗಂಡನಿಗೆ ಆಘಾತವೇ ಆಗಿದ್ದು, ಆಸ್ಪತ್ರೆ ಮುಂದೆ ಗೋಳಾಡಿದ್ದಾರೆ.
ಆಸ್ಪತ್ರೆ ಮುಂದೆ ಬಾಣಂತಿ ಗಂಡನ ಗೋಳಾಟ
Hassan ತಾಲ್ಲೂಕಿನ ಹನುಮನಹಳ್ಳಿ ಗ್ರಾಮದ ಪುನೀತ್ ಅವರ ಪತ್ನಿ ಶೃತಿ ಹೆರಿಗೆ ಆದ ಬಳಿಕ ಸಾವನ್ನಪ್ಪಿರೋ ಬಾಣಂತಿ ಆಗಿದ್ದಾರೆ. ಇನ್ನು ಮೃತ ಬಾಣಂತಿ ಶೃತಿ ಚಿಕ್ಕಗಾಡೆನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಗೆಸ್ಟ್ ಟೀಚರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಶೃತಿ ಅವರನ್ನು ಹೆರಿಗೆಗಾಗಿ ಹಾಸನದ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಪ್ರಸೂತಿ ತಜ್ಞೆ ಡಾ. ಸುಮಾ ಅವರಿಂದ ನಾರ್ಮಲ್ ಹೆರಿಗೆ ನಡೆದಿದ್ದು, ಆರೋಗ್ಯವಂತ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಕುಟುಂಬದವರು ಆರಂಭದಲ್ಲಿ ಎಲ್ಲವೂ ಸಾಮಾನ್ಯವಾಗಿತ್ತು ಎಂದು ತಿಳಿಸಿದರು.
ಇದನ್ನು ಓದಿ : ಚಿಕ್ಕನಾಯಕನಹಳ್ಳಿ ಗ್ರಾಮಗಳಿಗೆ ತಹಶೀಲ್ದಾರ್ ಭೇಟಿ, ಪರಿಶೀಲನೆ.!
ಆದರೆ ಹೆರಿಗೆ ನಂತರ ದಿಢೀರ್ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಿದೆ ಎಂದು ವೈದ್ಯರು ತಿಳಿಸಿದ್ದರೆಂದು ಕುಟುಂಬದವರು ಆರೋಪಿಸಿದ್ದಾರೆ. ತಕ್ಷಣವೇ ರಕ್ತ ಹೊಂದಾಣಿಕೆ ಮಾಡಿ ಒದಗಿಸಿದ್ದರೂ, ಇನ್ನಷ್ಟು ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ಕರೆದೊಯ್ಯಿರಿ ಎಂದು ಸೂಚಿಸಲಾಗಿದೆ ಎನ್ನಲಾಗಿದೆ. ‘ಭಾನುವಾರವಾದ ಕಾರಣ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಲಿಲ್ಲ. ನಮ್ಮ ಪತ್ನಿಯನ್ನು ಬೇರೆ ಆಸ್ಪತ್ರೆಗೆ ಕರೆದೊಯ್ಯುವ ದಾರಿಯಲ್ಲೇ ಅವರು ಮೃತಪಟ್ಟರು. ವೈದ್ಯರ ನಿರ್ಲಕ್ಷ್ಯದಿಂದಲೇ ಈ ದುರಂತ ಸಂಭವಿಸಿದೆ ಎಂದು ಪತಿಪುನೀತ್ ಕಣ್ಣೀರಿಟ್ಟು ಆರೋಪಿಸಿದರು.

ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣ?
ಇನ್ನು ಬಾಣಂತಿ ಸಾವನ್ನಪ್ಪಿರೋದಕ್ಕೆ ಮೃತಳ ಪತಿ, ಮೊದಲ ಮಗುವಿನೊಂದಿಗೆ ಹಾಗೂ ಸಂಬಂಧಿಕರು ಆಸ್ಪತ್ರೆ ಬಳಿ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. ವೈದ್ಯರ ನಿರ್ಲಕ್ಷ್ಯದಿಂದ ಯುವ ತಾಯಿ ಪ್ರಾಣ ಕಳೆದುಕೊಂಡಿದ್ದಾರೆ. ಸಂಪೂರ್ಣ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಮೃತಳ ಸಂಬಂಧಿಕರ ಪ್ರಕಾರ, ಹೆರಿಗೆ ನಂತರ ತಕ್ಷಣ ಸೂಕ್ತ ಚಿಕಿತ್ಸೆ ನೀಡಿದ್ದರೆ ಈ ದುರ್ಘಟನೆ ತಪ್ಪಿಸಬಹುದಿತ್ತು ಎಂದು ಆರೋಪಿಸಿದ್ರು.
ಇನ್ನು ಜನ್ಮತಾಳಿದ ಹಸುಗೂಸು ಹಾಸನದ ಹಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಗು ಆರೋಗ್ಯದ ಕುರಿತು ವೈದ್ಯರು ನಿಗಾ ವಹಿಸಿರುವುದಾಗಿ ತಿಳಿದುಬಂದಿದೆ.

ಇದನ್ನು ನೋಡಿ : DHARWAD | ಉದ್ಯೋಗಾಕಾಂಕ್ಷಿಗಳ ಬೃಹತ್ ಪ್ರತಿಭಟನೆ ಹೇಗಿತ್ತು ಗೊತ್ತಾ ಪ್ರತಿಭಟನಾ ಜ್ವಾಲೆ




