Chikkanayakanahalli : ಚಿಕ್ಕನಾಯಕನಹಳ್ಳಿ ತಾಲೂಕಿನ ತೀರ್ಥಪುರ, ರಾಮನಹಳ್ಳಿ ಪಂಚಾಯ್ತಿಗೆ ಒಳಪಡುವ ಗ್ರಾಮಗಳ ಕಾಲೋನಿಗಳಿಗೆ ತಹಶೀಲ್ದಾರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Chikkanayakanahalli : ಚಿಕ್ಕನಾಯಕನಹಳ್ಳಿ ತಾಲೂಕಿನ ಕಂದಿಕೆರೆ ಹೋಬಳಿ ವ್ಯಾಪ್ತಿಯ ತೀರ್ಥಪುರ, ರಾಮನಹಳ್ಳಿ ಪಂಚಾಯ್ತಿಗೆ ಒಳಪಡುವ ಕತ್ರಿಕೇಹಾಳ್ ಹಾಗೂ ಆಶ್ರಿಹಾಳ್ ಗ್ರಾಮಗಳ ಕಾಲೋನಿಗಳಿಗೆ ತಹಶೀಲ್ದಾರ್ ಮಮತಾ ಎಂ. ಅವರು ಭೇಟಿ ನೀಡಿ ಸ್ಥಳೀಯರ ಸಮಸ್ಯೆಗಳನ್ನ ಆಲಿಸಿದ್ರು.
ಇನ್ನು ಗ್ರಾಮಸ್ಥರು ಸುಮಾರು ಐವತ್ತು ವರ್ಷಗಳಿಂದ ನಿವೇಶನಕ್ಕಾಗಿ ಹೋರಾಟ ನಡೆಸುತ್ತಿದ್ದೇವೆ. ಆದರೂ ನಮಗೆ ನಿವೇಶನ ಸಿಕ್ಕಿಲ್ಲ. ಇದರಿಂದ ಅವಿಭಕ್ತ ಕುಟುಂಬಗಳಲ್ಲಿ ನೆಮ್ಮದಿ ಇಲ್ಲದಂತಾಗಿದೆ. ಅಲ್ಲದೇ ನಮ್ಮ ಗ್ರಾಮಗಳಲ್ಲಿ ವಸತಿ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯಿಂದ ದಿನನಿತ್ಯ ಪರದಾಡುವಂತಾಗಿದೆ ಎಂದು ನಿವಾಸಿಗಳು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಇದನ್ನೂ ಓದಿ : ಸರ್ಕಾರಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ
ಗ್ರಾಮದಲ್ಲಿ ಪರಿಶೀಲನೆ ನಡೆಸಿದ ತಹಶೀಲ್ದಾರ್ ಮಮತಾ ಅವರು, ಚರಂಡಿ ಅನೈರ್ಮಲ್ಯ ಹಾಗೂ ಮೂಲಸೌಕರ್ಯ ಸಮಸ್ಯೆಗಳನ್ನ ಗಮನಿಸಿ ಪಂಚಾಯ್ತಿ ಪಿಡಿಒಗಳಿಗೆ ಕೂಡಲೇ ಸಮಸ್ಯೆ ಬಗೆಹರಿಸುವಂತೆ ಎಚ್ಚರಿಕೆ ನೀಡಿದರು.
ಅಲ್ಲದೇ ಭೂಮಿ ಸೇರಿದಂತೆ ಯಾವುದೇ ಆಡಳಿತಾತ್ಮಕ ಸಮಸ್ಯೆಗಳಿದ್ದರೆ ತಾಲ್ಲೂಕು ಕಚೇರಿಗೆ ಬಂದು ನೇರವಾಗಿ ನನ್ನನ್ನ ಭೇಟಿ ಮಾಡಿ ಮನವಿ ಸಲ್ಲಿಸಿದರೆ, ಆದಷ್ಟು ಬೇಗ ನಾನು ಸಮಸ್ಯೆಯನ್ನ ಪರಿಹರಿಸಲು ಪ್ರಯತ್ನಿಸುತ್ತೇನೆ ಎಂದು ಗ್ರಾಮಸ್ಥರಿಗೆ ತಿಳಿಸಿದ್ರು.
ಈ ವೇಳೆ ಗ್ರಾಮಸ್ಥರ ಪಡಿತರ ಕಾರ್ಡ್, ಪಿಂಚಣಿ ಸೇರಿದಂತೆ ವಿವಿಧ ಕಲ್ಯಾಣ ಯೋಜನೆಗಳ ಸೌಲಭ್ಯಗಳ ಬಗ್ಗೆ ವಿಚಾರಣೆ ನಡೆಸಿ, ಅರ್ಹರಿಗೆ ಸೌಲಭ್ಯ ತಲುಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ರು. ತಹಶೀಲ್ದಾರ್ ಅವರ ಹಳ್ಳಿಗಳ ಭೇಟಿ ಗ್ರಾಮಸ್ಥರಲ್ಲಿ ನಿರೀಕ್ಷೆ ಮೂಡಿಸಿದ್ದು, ದೀರ್ಘಕಾಲದ ನಿವೇಶನ ಹಾಗೂ ವಸತಿ ಸಮಸ್ಯೆಗೆ ಪರಿಹಾರ ಸಿಗಬೇಕು ಎಂಬುದು ಜನರ ಆಗ್ರಹವಾಗಿದೆ.
MUST WATCH : ಕನ್ನಡ ಸಂಸ್ಕೃತಿ ಇಲಾಖೆಯ ಯಡವಟ್ಟು ತುಮಕೂರಿನಲ್ಲಿ ಕಲಾವಿದರ ಆಕ್ರೋಶದ ಕಿಚ್ಚು




