Dharwad : ರೊಚ್ಚಿಗೆದ್ದ ವಿದ್ಯಾರ್ಥಿಗಳ ಪ್ರತಿಭಟನೆ: ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಆಗ್ರಹ.

Dharwad : ಖಾಲಿಯಿರುವ ಸರ್ಕಾರಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಧಾರವಾಡದಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದು, ಧಾರವಾಡದ ಶ್ರೀನಗರ ವೃತ್ತದಲ್ಲಿ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದ ಉದ್ಯೋಗಾಕಾಂಕ್ಷಿಗಳು, ಖಾಲಿ ಇರುವ ಹುದ್ದೆಗಳನ್ನ ಕೂಡಲೇ ಭರ್ತಿ ಮಾಡುವಂತೆ ಘೋಷಣೆ ಕೂಗಿದ್ರು.
ಹೈಕೋರ್ಟ್ ಮೊರೆ
ಧರಣಿ ನಡೆಸಲು ವಿದ್ಯಾರ್ಥಿ ಸಂಘಟನೆ ಅನುಮತಿ ಕೇಳಿತ್ತು, ಆದ್ರೆ ಪೊಲೀಸರು ನಿರಾಕರಿಸಿದ್ದರು. ಈ ಬಗ್ಗೆ ಸಂಘಟನೆ ಹೈಕೋರ್ಟ್ ಮೊರೆ ಹೋಗಿತ್ತು. ಹೈಕೋರ್ಟ್ ಪೊಲೀಸರೊಂದಿಗೆ ಚರ್ಚಿಸಲು ಸೂಚಿಸಿ, ವಿಚಾರಣೆಯನ್ನ ಮಾರ್ಚ್ 3ಕ್ಕೆ ಮುಂದೂಡಿತ್ತು.
ಇದನ್ನು ಓದಿ : ರಾಜ್ಯದ `ಆಶಾ ಕಾರ್ಯಕರ್ತೆ’ಯರಿಗೆ ಗುಡ್ ನ್ಯೂಸ್

ಬೀದಿಗಿಳಿದು ವಿದ್ಯಾರ್ಥಿಗಳು ಧರಣಿ – Dharwad
ಆದ್ರೆ ಪೊಲೀಸರು ನಗರದಲ್ಲಿ ಬಿಜೆಪಿಗೆ ಪ್ರತಿಭಟನೆ ನಡೆಸಲು ಅನುಮತಿ ನೀಡಿದ್ದು, ವಿದ್ಯಾರ್ಥಿ ಸಂಘಟನೆಯನ್ನ ಕೆರಳಿಸಿತ್ತು. ಈ ಹಿನ್ನಲೆ ಅನುಮತಿ ಇಲ್ಲದಿದ್ರೂ ಇಂದು ಬೀದಿಗೆ ಇಳಿದು ವಿದ್ಯಾರ್ಥಿಗಳು ಧರಣಿ ನಡೆಸುತ್ತಿದ್ದಾರೆ.

ಇದನ್ನು ನೋಡಿ : ಶಿರಾದ ಚಿನ್ನದಂಗಡಿಯಲ್ಲಿ ROBBERY CASE ಕಾರ್ಯಾಚರಣೆ ಬಗ್ಗೆ SP ಏನಂದ್ರು




