ಬೇಸಿಗೆಗೂ ಮುನ್ನ Mantralaya ದಲ್ಲಿ ನೀರಿಗೆ ತತ್ವಾರ: ಭಕ್ತರ ಪುಣ್ಯಸ್ನಾನಕ್ಕೂ ಪರದಾಟ .

ಮಂತ್ರಾಲಯದಲ್ಲಿ ಬೇಸಿಗೆ ಆರಂಭಕ್ಕೂ ಮುನ್ನವೇ ತೀವ್ರ ನೀರಿನ ಸಮಸ್ಯೆ ತಲೆದೋರಿದೆ. ಪುಣ್ಯಸ್ನಾನ ಮಾಡಲು ಬರುವ ರಾಯರ ಭಕ್ತರು ತುಂಗಭದ್ರಾ ನದಿಯಲ್ಲಿ ನೀರಿಲ್ಲದೆ ಪರದಾಡುತ್ತಿದ್ದಾರೆ. ತುಂಗಭದ್ರಾ ನದಿಯಲ್ಲಿ ನೀರಿನ ಮಟ್ಟ ಕುಸಿದಿದ್ದು, ಜಲಾಶಯದಲ್ಲಿ ಸ್ವಲ್ಪ ಪ್ರಮಾಣದ ನೀರು ಮಾತ್ರ ಲಭ್ಯವಿದೆ. ನದಿಯ ಗೇಟುಗಳನ್ನು ಈಗಾಗಲೇ ಮುಚ್ಚಲಾಗಿದೆ.

ಇದನ್ನು ಓದಿ : ಶಿವಾಜಿ ಮೆರವಣಿಗೆ ವೇಳೆ ಕಲ್ಲು ತೂರಾಟ – 8 ಆರೋಪಿಗಳು Arrest!
ಮಂತ್ರಾಲಯಕ್ಕೂ ತಟ್ಟಿದ ನೀರಿನ ಸಮಸ್ಯೆ
ಈ ಸಮಸ್ಯೆಯನ್ನು ನಿವಾರಿಸಲು Mantralaya ಮಠವು ತ್ವರಿತವಾಗಿ ಪರ್ಯಾಯ ವ್ಯವಸ್ಥೆಗಳನ್ನು ಕೈಗೊಂಡಿದೆ. ಮಠದ ಬೋರ್ವೆಲ್ ನೀರನ್ನು ಭಕ್ತರಿಗೆ ಸರಬರಾಜು ಮಾಡಲಾಗುತ್ತಿದೆ. ಅಲ್ಲದೆ, ನದಿಯ ಮೇಲ್ಭಾಗದಲ್ಲಿ ಉಳಿದಿರುವ ಅಲ್ಪ ಪ್ರಮಾಣದ ನೀರನ್ನು ಪಂಪ್ ಮಾಡಿ ಶುದ್ಧೀಕರಿಸಿ ಕುಡಿಯಲು ಮತ್ತು ಸ್ನಾನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಭಕ್ತರಿಗೆ ಸೂಕ್ತ ವ್ಯವಸ್ಥೆ
ಭವಿಷ್ಯದಲ್ಲಿ ಭಕ್ತರಿಗೆ ಇನ್ನಷ್ಟು ಸೌಕರ್ಯ ಒದಗಿಸಲು ಮಠವು ಶವರ್ಗಳನ್ನೂ ಅಳವಡಿಸುವ ಯೋಜನೆ ಮಾಡಿಕೊಂಡಿದೆ. ಮಂತ್ರಾಲಯಕ್ಕೆ ಬರುವ ಭಕ್ತರಿಗೆ ಸೂಕ್ತ ವ್ಯವಸ್ಥೆ ಮಾಡಲಾಗಿದ್ದು, ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುವುದಾಗಿ ಸುಭುದೇಂದ್ರ ತೀರ್ಥರು ತಿಳಿಸಿದ್ದಾರೆ.
ಇದನ್ನು ನೋಡಿ : SURESH GOWDA | ಸಿಎಂ ಕಚ್ಚಾಟದ ಬಗ್ಗೆ ಶಾಸಕ ಸುರೇಶ್ ಗೌಡ ಹೀಗ್ಯಾಕಂದ್ರು




