ದ್ವಿಚಕ್ರ ವಾಹನಕ್ಕೆ ಅಪರಿಚಿತ ವಾಹನ ಡಿಕ್ಕಿಯಾಗಿ ಭೀಕರ Accident – ಬೈಕ್ ಸವಾರ ಸಾವು.

ದ್ವಿಚಕ್ರ ವಾಹನಕ್ಕೆ ಅಪರಿಚಿತ ವಾಹನ ಡಿಕ್ಕಿಯಾಗಿ ಭೀಕರ Accident ಸಂಭವಿಸಿದ್ದು, ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶಿರಾ ತಾಲೂಕಿನ ಬುಕ್ಕಾಪಟ್ಟಣ ಹೋಬಳಿಯ ಬಾಳಾಪುರ ಗೇಟ್ ಬಳಿ ನಡೆದಿದೆ.

ಬೈಕ್ನಲ್ಲಿ ತೆರಳುತ್ತಿದ್ದಾಗ Accident
ಹುಳಿಯಾರು ಗ್ರಾಮದ ನಿವಾಸಿ ಆರ್ ಗುರುಮೂರ್ತಿ ಮೃತ ದುರ್ದೈವಿಯಾಗಿದ್ದು, ಕೆಲಸ ಮುಗಿಸಿಕೊಂಡು ಶಿರಾದಿಂದ ಹುಳಿಯಾರು ಕಡೆಗೆ ಬೈಕಿನಲ್ಲಿ ತೆರಳುತ್ತಿದ್ದಾಗ, ಅಪಘಾತ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ.
ಮೃತ ವ್ಯಕ್ತಿಯು ಶಿರಾ ತಾಲೂಕಿನ ಚಿಕ್ಕನಹಳ್ಳಿ ಗ್ರಾಮದ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಅಧೀಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ರು ಎನ್ನಲಾಗಿದೆ.
ಇದನ್ನು ಓದಿ : ನಟ Yash ತಾಯಿಗೆ ಮೊದಲ ಜಯ – ಜಾಗದ ವಿಚಾರಕ್ಕೆ ಸ್ಟೇ ಕೊಟ್ಟ ಕೋರ್ಟ್

ಪ್ರಕರಣ ದಾಖಲು
ಇನ್ನು ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪರಿಚಿತ ವಾಹನ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ. ಇತ್ತ ಮೃತರ ಸಂಬಂಧಿಗಳು ಶಿರಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.
ಇದನ್ನ ನೋಡಿ : HDK | ದುಡ್ಡು ಬಂದ್ರೆ ತಾಲೂಕಿಗೆ ತಗೊಂಡು ಬರ್ತಾರೆ ಸುರೇಶ್ ಬಾಬು ಅವರನ್ನ ಹೊಗಳಿದ ಹೆಚ್ ಡಿಕೆ




