ನಟ ಯಶ್ ತಾಯಿ ಪುಷ್ಪಾಗೆ ಮೊದಲ ಜಯ – ಜಾಗದ ವ್ಯಾಜ್ಯದಲ್ಲಿ Yash ತಾಯಿಗೆ ಗೆಲುವು.

ಹಾಸನದಲ್ಲಿ ಯಶ್ ತಾಯಿ ಪುಷ್ಪಾ ಅವರ ಸಮೀಪದ ನಿವೇಶನ ಕುರಿತಾಗಿ ದೊಡ್ಡ ಹೈಡ್ರಾಮಾವೇ ನಡೆದಿತ್ತು. Yash ತಾಯಿ ಜಾಗಕ್ಕಾಗಿ ಬೀದಿಗೆ ಇಳಿದು ರಂಪಾಟವನ್ನೇ ಮಾಡಿದ್ದರು.
ರಾಜ್ಯಾದ್ಯಂತ ಭಾರಿ ಸದ್ದು
ಯಶ್ ತಾಯಿ ಪುಷ್ಪಾ ಅವರು ನಮ್ಮ ಜಾವನ್ನು ಒತ್ತುವರಿ ಮಾಡಿಕೊಂಡು ಕೌಂಪೌಂಡ್ ನಿರ್ಮಾಣ ಮಾಡಿದ್ದಾರೆ ಎಂದು ಆರೋಪಿಸಿ ದೇವರಾಜು ಎಂಬುವವರು ಕಾಂಪೌಂಡ್ ಗೋಡೆಯನನ್ನು ಹೊಡೆಸಿದ್ದರು. ಈ ವಿಚಾರವಾಗಿ ದೇವರಾಜು ಹಾಗೂ ಯಶ್ ತಾಯಿ ಪುಷ್ಪಾ ನಡುವೆ ಗಲಾಟೆಯಾಗಿದ್ದು, ಹೈಡ್ರಾಮವನ್ನೇ ಸೃಷ್ಟಿ ಮಾಡಿದ್ರು. ಅಲ್ದೇ ಈ ವಿವಾದ ರಾಜ್ಯಾದ್ಯಂತ ಭಾರಿ ಸದ್ದು ಮಾಡಿತ್ತು.

ಜಾಗದ ವಿವಾದದಲ್ಲಿ ಯಶ್ ತಾಯಿಗೆ ಮೊದಲ ಜಯ
ಇನ್ನು ಈ ಸಂಬಂಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಜಮೀನು ತಕರಾರು ವಿಚಾರವಾಗಿ ಕೋರ್ಟ್ನಲ್ಲಿ ಅರ್ಜಿ ಹಾಕಲಾಗಿದ್ದು, ಯಶ್ ತಾಯಿ ಪುಷ್ಪಾಗೆ ಮೊದಲ ಜಯ ಸಿಕ್ಕಿದೆ. ಹೌದು ಜಮೀನು ವಿವಾದ ಸಂಬಂಧ ಏಕಪಕ್ಷೀಯ ತೀರ್ಪಿನ ಜಾರಿಗೆ ಕೋರ್ಟ್ ತಾತ್ಕಾಲಿಕ ತಡೆ ನೀಡಿದ್ದು, ಈ ಮೂಲಕ ಯಶ್ ತಾಯಿಗೆ ಮೊದಲ ಜಯ ಸಿಕ್ಕಂತಾಗಿದೆ.
ಸದ್ಯ ಪ್ರಕರಣ ಇತ್ಯರ್ಥ ಆಗೋವರೆಗೂ ವಿವಾದಿತ ಆಸ್ತಿಯಲ್ಲಿ ಯಾವುದೇ ಕೆಲಸಕ್ಕೆ ಸಂಪೂರ್ಣ ತಡೆ ನೀಡಲಾಗಿದೆ. ಜೊತೆಗೆ ಶೆಡ್ಯೂಲ್ ಪ್ರಾಪರ್ಟಿಯನ್ನು ಪರಭಾರೆ ಮಾಡುವುದು ಅಥವಾ ಮೂಲ ಸ್ವರೂಪ ಬದಲಾವಣೆ ಮಾಡುವುದಕ್ಕೂ ನಿರ್ಬಂಧ ಹೇರಲಾಗಿದೆ. ಜೊತೆಗೆ ಈ ಜಮೀನು ವಿವಾದದ ವಿಚಾರಣೆಯನ್ನು ಫೆಬ್ರವರಿ 18ಕ್ಕೆ ಮುಂದೂಡಿಕೆ ಮಾಡಿದೆ.
ಇದನ್ನು ಓದಿ : ಹಾಸ್ಟೆಲ್ನ 14ನೇ ಮಹಡಿಯಿಂದ ಬಿದ್ದು ಪ್ರತಿಷ್ಟಿತ ವಿವಿ ವಿದ್ಯಾರ್ಥಿನಿ ಸಾವು!

ಇದು ನನಗೆ ಮೊದಲ ಜಯ ಸಿಕ್ಕಿದೆ ಎಂದ ಪುಷ್ಪಾ
ಇನ್ನು ಕೋರ್ಟ್ನ ತೀರ್ಪಿನ ಸಂಬಂಧ Yash ತಾಯಿ ಪುಷ್ಪಾ ಪ್ರತಿಕ್ರಿಯೆ ನೀಡಿದ್ದು, ನ್ಯಾಯಾಲಯದಲ್ಲಿ ನಮಗೂ ವಾದಿಸಲು ಅವಕಾಶ ನೀಡಿದೆ. ಜಾಗ ನನ್ನದೋ ಅಥವಾ ದೇವರಾಜು ಅವರದ್ದೋ ಎಂಬುದು ಪರಿಶೀಲನೆಯ ಬಳಿಕ ಸ್ಪಷ್ಟವಾಗಲಿದೆ ಎಂಬ ವಿಶ್ವಾಸವಿದೆ ಎಂದರು.
ತಮ್ಮ ಹೆಸರಿನಲ್ಲಿ ಕಾನೂನು ಪ್ರಕಾರ ಸರ್ಕಾರಕ್ಕೆ ಹಣ ಪಾವತಿಸಿ ನಿವೇಶನ ಪಡೆದಿದ್ದೇವೆ ಎಂದು ಅವರು ಪುನರುಚ್ಚರಿಸಿದರು.
ಏಕಾಏಕಿ ಜೆಸಿಬಿ ತಂದು ಕಾಂಪೌಂಡ್ ತೆರವುಗೊಳಿಸಿದ್ದು, ಮನೆಗೂ ಹಾನಿ ಉಂಟಾಗಿದೆ ಎಂದು ಆರೋಪಿಸಿದ ಅವರು, ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಬೀದಿಗಿಳಿದು ರಂಪಾಟ
ಅದೇನೆ ಆಗಲಿ, ಚಿಕ್ಕ ಜಾಗದ ವಿಚಾರಕ್ಕೆ ರಾಕಿಂಗ್ ಸ್ಟಾರ್ ಯಶ್ ತಾಯಿ ಬೀದಿಗಿಳಿದು ರಂಪಾಟ ಮಾಡಿದ್ದು ಸಮಾಜದ ಕಣ್ಣಿಗೆ ಕೆಟ್ಟದಾಗಿ ಕಂಡಿರಬಹುದು.
ಆದ್ರೆ ಈಗಿನ ಕಾಲದಲ್ಲಿ ಇಂಚೂ ಜಾಗ ಕೂಡ ಕೋಟಿಗೆ ಬೆಲೆ ಬಾಳಲಿದ್ದು, ಜಾಗವನ್ನು ಬಿಟ್ಟುಕೊಡಲು ಯಾರು ತಾನೆ ಸುಮ್ಮನೆ ಇರ್ತಾರೆ ಎಂದು ಕೆಲವರು ಹೇಳ್ತಾ ಇದ್ದಾರೆ.
ಒಟ್ನಲ್ಲಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ. ತೀರ್ಪು ಬಂದ ಬಳಿಕ ಜಮೀನು ವಿಚಾರದ ಅಸಲಿಯತ್ತು ಹೊರಬೀಳಲಿದೆ.
ಇದನ್ನು ನೋಡಿ : TUMAKURU | ತುಮಕೂರು ಬೆಸ್ಕಾಂ ಇಲಾಖೆಯಲ್ಲಿ ಭ್ರಷ್ಟಚಾರ ಆಗಿದ್ಯಾ- ಗುತ್ತಿಗೆದಾರರು ಆಕ್ರೋಶ ಹೊರಹಾಕಿದ್ದು ಯಾಕೆ..?




