Nelamangala : ಗರ್ಭಿಣಿ ಫೋಟೊ ಶೂಟ್ (Maternity Photoshoot) ವೇಳೆ ಆಟವಾಡುತ್ತಿದ್ದ ಮೊದಲ ಮಗು ನೀರಿನ ತೊಟ್ಟಿಗೆ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.

Nelamangala : ಗರ್ಭಿಣಿ ಮಹಿಳೆಯೊಬ್ಬರ ಫೋಟೋಶೂಟ್ ಮಾಡಿಸುತ್ತಿದ್ದ ವೇಳೆ ಆಟವಾಡುತ್ತಿದ್ದ ಮಗು ನೀರಿನ ತೊಟ್ಟಿಗೆ ಬಿದ್ದು ಸಾವನ್ನಪ್ಪಿದ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗಿಡ್ಡೆನಹಳ್ಳಿಯಲ್ಲಿ ನಡೆದಿದೆ.
ಸಾವನ್ನಪ್ಪಿದ ಮಗುವನ್ನು ಮೂರು ವರ್ಷದ ಲಕ್ಷ್ಮೀರ್ ಎಂದು ಗುರುತಿಸಲಾಗಿದೆ. ಮೃತ ಮಗುವಿನ ತಾಯಿ ಎರಡು ಮಗುವಿನ ನಿರೀಕ್ಷೆಯಲ್ಲಿದ್ದರು. ಹೀಗಾಗಿ ಎಂಟು ತಿಂಗಳ ಗರ್ಭಿಣಿಯಾಗಿದ್ದ ತಾಯಿ ಫೋಟೋಶೂಟ್ ಮಾಡಿಸಲು ಪತಿಯೊಂದಿಗೆ ತೆರಳಿದ್ದರು.
ಇದನ್ನೂ ಓದಿ: ಡಿವೈಡರ್ ಹಾರಿ ಬಸ್ಗೆ ಡಿಕ್ಕಿಯಾದ ಕಾರು – ಐವರು ದುರ್ಮರಣ

ಈ ವೇಳೆ ಆಟವಾಡುತ್ತಿದ್ದ ಮಗು ಅಜಾಗರೂಕತೆಯಿಂದ ಸಮೀಪದಲ್ಲಿದ್ದ ನೀರಿನ ತೊಟ್ಟಿಗೆ ಬಿದ್ದು ಅಸ್ವಸ್ಥಗೊಂಡಿದೆ. ತಕ್ಷಣ ಮಗುವನ್ನು ರಕ್ಷಿಸಲು ಪ್ರಯತ್ನಿಸಿದರೂ ಫಲಕಾರಿಯಾಗದೆ ಮೃತಪಟ್ಟಿದೆ ಎಂದು ತಿಳಿದುಬಂದಿದೆ.
ಸದ್ಯ ಮಾಹಿತಿ ತಿಳಿದ ಕೂಡಲೇ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತ ಮಗುವಿನ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ.

ಸದ್ಯ ಮಗುವಿನ ಸಾವಿನ ಸುದ್ದಿಯಿಂದ ಸಂಭ್ರಮ ತುಂಬಿದ್ದ ಮನೆಯಲ್ಲೀಗ ಶೋಕ ಮರುಗಟ್ಟಿದೆ.
MUST WATCH : ಅಪ್ರಾಪ್ತ ಬಾಲಕಿ ಅನುಮಾನಸ್ಪದವಾಗಿ ಸಾ ಬಾಲಕಿಯ ಸಾವಿನ ಸತ್ಯ ಮುಚ್ಚಿಡಲು ಡ್ರಾಮಾ?




