Accident : KSRTC ಬಸ್ಗೆ ಗುದ್ದಿದ ಕಾರು, ಐವರು ಸ್ಥಳದಲ್ಲಿಯೇ ಸಾವು.

ಮಹಾ ಶಿವರಾತ್ರಿಯಂದೇ ಘೋರ ಘಟನೆ ನಡೆದಿದ್ದು, ನೆಲಮಂಗಲ ಜಿಂದಾಲ್ ಬಳಿ KSRTC ಬಸ್ ಮತ್ತು ಕಾರಿನ ನಡುವೆ ಭೀಕರ Accident ಸಂಭವಿಸಿದೆ. ಅಪಘಾತದಲ್ಲಿ ಐವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇಂಡಿಕಾ ಕಾರಿನಲ್ಲಿದ್ದ ಐವರು ದುರ್ಮರಣ ಹೊಂದಿದ್ದು, ದೊಡ್ಡಬಳ್ಳಾಪುರದ ಹರ್ಷಿತ್, ನಿಖಿತ್ ಸೇರಿ ಇತರರು ಮೃತ ದುರ್ದೈವಿಗಳಾಗಿದ್ದಾರೆ.
ನೆಲಮಂಗಲ ಬಳಿ ಭೀಕರ Accident
ತುಮಕೂರು ರಸ್ತೆಯಿಂದ ಬೆಂಗಳೂರು ನಗರದ ಕಡೆ ಟಾಟಾ ಇಂಡಿಕಾ ಕಾರಿನಲ್ಲಿ ಯುವಕರು ತೆರಳುತ್ತಿದ್ದರು. ಜಿಂದಾಲ್ ಆಸ್ಪತ್ರೆ ಸಮೀಪ ಓವರ್ ಸ್ಪೀಡ್ನಲ್ಲಿ ಬಂದ ಕಾರು, ಎದುರುಗಡೆಯ ರಸ್ತೆಯಲ್ಲಿ ಬರ್ತಿದ್ದ KSRTC ಬಸ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಸ್ ಮುಂಭಾಗದ ಗ್ಲಾಸ್ ಪೀಸ್ ಪೀಸ್ ಆಗಿದ್ದು, ಮುಂಭಾಗ ಕೂತಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬಸ್ನಲ್ಲಿದ್ದ 42 ಪ್ರಯಾಣಿಕರು ಅಪಾಯದಿಂದ ಬಚಾವ್ ಆಗಿದ್ದಾರೆ.
ಇದನ್ನು ಓದಿ : BPL ಕಾರ್ಡ್ ದಾರರಿಗೆ ಗುಡ್ ನ್ಯೂಸ್ – ಶೀಘ್ರವೇ ಹೊಸ ಕಾರ್ಡ್ ಬರಲಿದ್ಯಂತೆ..?!

ಐವರು ದಾರುಣ ಸಾವು
ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಮೃತ ಹರ್ಷಿತ್ ರಾಜನಕುಂಟೆ ಸಾಯಿ ವಿದ್ಯಾ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ದ್ವಿತೀಯ ವರ್ಷದ ಡಿಗ್ರಿ ಓದುತ್ತಿದ್ದ ಎಂಬ ಮಾಹಿತಿ ಸಿಕ್ಕಿದೆ.
ಅಪಘಾತದ ರಭಸಕ್ಕೆ ಸ್ಥಳದಲ್ಲೇ ನಾಲ್ವರು ಮೃತಪಟ್ಟಿದ್ದರೆ, ಗಂಭೀರ ಗಾಯಗೊಂಡಿದ್ದ ಕಾರು ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಆತನೂ ಪ್ರಾಣ ಬಿಟ್ಟಿದ್ದಾನೆ. ಮೃತರಲ್ಲಿ ಮೂವರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.

ಇದನ್ನು ನೋಡಿ : ಅಪ್ರಾಪ್ತ ಬಾಲಕಿ ಅನುಮಾನಸ್ಪದವಾಗಿ ಸಾ ಬಾಲಕಿಯ ಸಾವಿನ ಸತ್ಯ ಮುಚ್ಚಿಡಲು ಡ್ರಾಮಾ




