Kalburgi : ಗನ್ ಹಿಡಿದುಕೊಂಡು ಡ್ಯಾನ್ಸ್ ಮಾಡಿದ ಕೈ ಮುಖಂಡ – ಡ್ಯಾನ್ಸ್ ಮಾಡಿದ ವಿಡಿಯೋ ವೈರಲ್.

ಪಬ್ಲಿಕ್ ಪ್ಲೇಸ್ನಲ್ಲಿ ಗನ್, ತಲ್ವಾರ್ ಸೇರಿ ಮಾರಕಾಸ್ತ್ರಗಳನ್ನು ಪ್ರದರ್ಶನ ಮಾಡುವಂತಿಲ್ಲ ಅನ್ನೋ ನಿಯಮ ಇದ್ರು ಕೂಡ, ಕೆಲವರು ಗನ್ ಹಿಡಿದು ರೀಲ್ಸ್ ಮಾಡುತ್ತಿದ್ದು, ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಇದೀಗ ಕಾಂಗ್ರೆಸ್ ಮುಖಂಡನೋರ್ವ ಮದುವೆ ಸಮಾರಂಭದಲ್ಲಿ ಗನ್ ಹಿಡಿದು ರೀಲ್ಸ್ ಮಾಡಿ ರೂಲ್ಸ್ ಬ್ರೇಕ್ ಮಾಡಿರೋ ಘಟನೆ ಕಲಬುರಗಿ ಜಿಲ್ಲೆ ಅಫಜಲಪುರದಲ್ಲಿ ನಡೆದಿದೆ.
ಅಫಜಲಪೂರ ಕೈಮುಖಂಡ ಮತಿನ್ ಪಟೇಲ್ ನಿಂದ ಡಾನ್ಸ್
ಹೌದು Kalburgi ಜಿಲ್ಲೆಯ ಅಫಜಲ್ಪುರದಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ಕಾಂಗ್ರೆಸ್ ಮುಖಂಡ ಮತಿನ್ ಅಹ್ಮದ್ ಪಟೇಲ್ ಅವರು ಪಿಸ್ತೂಲ್ ಹಿಡಿದಯ ದುರಂಧರ್ ಸಾಂಗ್ಗೆ ಹೆಜ್ಜೆ ಹಾಕಿ ಗಮನ ಸೆಳೆದಿದ್ರು. ಅಲ್ದೇ ಗನ್ ಹಿಡಿದು ಡ್ಯಾನ್ಸ್ ಮಾಡಿದ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಯಲದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ.
ಇದನ್ನು ಓದಿ : ತುಮಕೂರಿನಲ್ಲಿ ಫೆಬ್ರವರಿ 12ರಂದು ಪವರ್ ಕಟ್.!

ವಿಡಿಯೋವೈರಲ್ – Kalburgi
ಇನ್ನು ಕಾಂಗ್ರೆಸ್ ಮುಖಂಡ ಮತಿನ್ ಅಹ್ಮದ್ ಪಟೇಲ್ ಅವರು ಶಾಸಕ ಎಂ.ವೈ ಪಾಟೀಲ್ ಅವರ ಬಲಗೈ ಬಂಟ ಎಂದೇ ಗುರುತಿಸಿಕೊಂಡಿದ್ದು, ಕಾರ್ ನಲ್ಲಿ ಇಳಿದು ಗನ್ ಹಿಡಿದು ಪೋಸ್ ಕೊಟ್ಟಿ ಡ್ಯಾನ್ಸ್ ಮಾಡಿರೋ ಕೈಮುಖಂಡನ ಶೋ ಆಫ್ ನಡೆ ಕಾನೂನು ಬಾಹಿರ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸ್ತಿದ್ದಾರೆ. ಸಾರ್ವಜನಿಕವಾಗಿ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸುವುದು ಅಪರಾಧ.
ಪಿಸ್ತೂಲ್ ಹಿಡಿದು ಬಿಲ್ಡಪ್ – Kalburgi
ಅದರಲ್ಲೂ ಮದುವೆ ಸಮಾರಂಭದಂತಹ ಜನಸಂದಣಿಯ ಪ್ರದೇಶದಲ್ಲಿ ಪಿಸ್ತೂಲ್ ಹಿಡಿದು ಬಿಲ್ಡಪ್ ನೀಡಿರುವುದು ಗಂಭೀರ ವಿಚಾರ ಎಂದು ಪರಿಗಣಿಸಿ ಈ ಸಂಬಂಧ ಪೊಲೀಸ್ ಇಲಾಖೆ ತನಿಖೆ ಆರಂಭಿಸಿದೆ. ಮತಿನ್ ಪಟೇಲ್ ಬಳಸಿದ ಪಿಸ್ತೂಲ್ ಅಸಲಿಯೇ ಅಥವಾ ನಕಲಿಯೇ ಎಂಬ ಬಗ್ಗೆ ಹಾಗೂ ಅದಕ್ಕೆ ಪರವಾನಿಗೆ ಇದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.

ಇದನ್ನು ನೋಡಿ : TATA COMPANY ವಿರುದ್ಧ ರೊಚ್ಚಿಗೆದ್ದ ಗ್ರಾಹಕ – ಸಿಬ್ಬಂದಿಯನ್ನ ಹೊರ ಹಾಕಿ ಪ್ರತಿಭಟಿಸಿದ




