Bescom Power Cut : ನಿರ್ವಹಣೆ ಮತ್ತು ಇತರ ಕಾಮಗಾರಿಗಳ ಕಾರಣ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಬೆಸ್ಕಾಂ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಬುಧವಾರ ಹಾಗೂ ಗುರುವಾರ ವಿದ್ಯುತ್ ಕಡಿತ ಇರಲಿದೆ.

Bescom Power Cut : ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ತುರ್ತು ನಿರ್ವಹಣೆ ಮತ್ತು ಇತರ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ, ವಿವಿಧ ಪ್ರದೇಶಗಳಲ್ಲಿ ಫೆಬ್ರವರಿ 11 ಮತ್ತು 12 ರಂದು ವಿದ್ಯುತ್ ವ್ಯತ್ಯಯ ಸಂಭವಿಸಲಿದೆ.
ಇತ್ತ ತುಮಕೂರಿನಲ್ಲಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಹಾಗೂ ಬೆಸ್ಕಾಂ ನಿರ್ವಹಣಾ ಕಾರ್ಯಗಳಿಂದಾಗಿ ಫೆಬ್ರವರಿ 12 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
BESCOM ಈ ಬಗ್ಗೆ ಅಧಿಕೃತ ಪ್ರಕಟಣೆಯನ್ನು ಬಿಡುಗಡೆ ಮಾಡಿದ್ದು, ಬೆಸ್ಕಾಂ ವಾಣಿಜ್ಯ, ಕಾರ್ಯ ಮತ್ತು ಪಾಲನಾ ವಿಭಾಗ ವ್ಯಾಪ್ತಿಯಲ್ಲಿ ತ್ರೈಮಾಸಿಕ ಕಾಮಗಾರಿ ಕೈಗೊಂಡಿರುವುದರಿಂದ 66/11 ಕೆವಿ ಅಂಕಸಂದ್ರ ಉಪಸ್ಥಾವರದಿಂದ ವಿದ್ಯುತ್ ಸರಬರಾಜಾಗುವ ಪ್ರದೇಶಗಳಲ್ಲಿ ಪವರ್ ಕಟ್ ಆಗಲಿದೆ.
ಇದನ್ನೂ ಓದಿ : ಮದ್ಯ ಕುಡಿಯೋದನ್ನ ಬಿಡು ಎಂದಿದ್ದಕ್ಕೆ 11 ವರ್ಷದ ಮಗಳನ್ನ ಕೊಂದ ತಾಯಿ.!
ಬೆಳಗುಂಬ, ಸಿದ್ದರಾಮೇಶ್ವರ ಲೇಔಟ್, ಅಂಕಸಂದ್ರ, ಎಸ್. ಎಸ್ ಲೇಔಟ್, ಸಾಬರಪಾಳ್ಯ, ಮಾರುತಿ ನಗರ, ವಿಜಯನಗರ, ಉಪ್ಪಾರಹಳ್ಳಿ, ಜ್ಯೋತಿಪುರ, ಲಂಬಾಣಿ ತಾಂಡ್ಯ ಸೇರಿದಂತೆ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಅಲ್ಲದೇ, ಬೆಸ್ಕಾಂ ಕಾಮಗಾರಿ ಹಿನ್ನೆಲೆ ತುಮಕೂರು ನಗರದಲ್ಲಿ ಫೆಬ್ರವರಿ ಕೊನೆಯ ವಾರದಲ್ಲಿ 3 ದಿನಗಳು ವಿದ್ಯುತ್ ವ್ಯತ್ಯಯವಾಗಲಿದ್ದು, ಬೆಳಿಗ್ಗೆಯಿಂದ ಸಂಜೆವರೆಗೂ ಕರೆಂಟ್ ಇರುವುದಿಲ್ಲ.
MUST WATCH : ರಾತ್ರೋರಾತ್ರಿ ಚಿನ್ನದ ಅಂಗಡಿಗೆ ಕನ್ನ – ಕಳ್ಳತನಕ್ಕೆ ಬೆಚ್ಚಿಬಿದ್ದ ಅಂಗಡಿ ಮಾಲೀಕ




