ನಿರ್ಮಾಪಕ ಕನಕಪುರ ಶ್ರೀನಿವಾಸ್ ವಿರುದ್ಧ ನಿರ್ದೇಶಕ Prem ಪೊಲೀಸರಿಗೆ ದೂರು ನೀಡಿದ್ದಾರೆ.

ನಿರ್ಮಾಪಕ ಕನಕಪುರ ಶ್ರೀನಿವಾಸ್ ವಿರುದ್ಧ ನಟ ಮತ್ತು ನಿರ್ದೇಶಕ ಪ್ರೇಮ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಕೆ.ಪಿ.ಅಗ್ರಹಾರ ಠಾಣೆಗೆPrem ದೂರು ನೀಡಿದ್ದು, ಶ್ರೀನಿವಾಸ್ ಅವರು ತಮ್ಮ ವಿರುದ್ಧ ನಿಂದನೆ ಹಾಗೂ ಅವಾಚ್ಯವಾಗಿ ಮಾತನಾಡಿದ್ದು, ನನ್ನ ಗೌರವಯುತ ಸಾರ್ವಜನಿಕ ಜೀವನಕ್ಕೆ ಧಕ್ಕೆಯಾಗಿದೆ ಎಂದು ಆರೋಪಿಸಿದ್ದಾರೆ.
FIR ದಾಖಲು
ಪ್ರೇಮ್ ಅವರ ದೂರಿನನ್ವಯ ಶ್ರೀನಿವಾಸ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಕಾಯ್ದೆಯ ಕಲಂ 352 (ಸಾರ್ವಜನಿಕ ಶಾಂತಿಭಂಗ, ಉದ್ದೇಶಪೂರ್ವಕ ಅವಮಾನ) ಆರೋಪದಡಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನು ಓದಿ : USA ವಿರುದ್ದ ಭರ್ಜರಿ ಜಯ ಸಾಧಿಸಿದ ಭಾರತ ತಂಡ.!
ಪ್ರೇಮ್ ಅವರ ದೂರಿನ ವಿವರ
“ನಾನು ನಿರ್ದೇಶಕನಾಗಿದ್ದು, ಕುಟುಂಬದೊಂದಿಗೆ ವಾಸಿಸುತ್ತಿದ್ದೇನೆ. ಸಣ್ಣ ಚಲನಚಿತ್ರಗಳಲ್ಲಿ ನಟಿಸಿ, ಹಲವಾರು ಚಿತ್ರಗಳನ್ನು ನಿರ್ದೇಶಿಸಿ ಹಂತ ಹಂತವಾಗಿ ಹೆಸರು ನಿರ್ಮಿಸಿಕೊಂಡಿದ್ದೇನೆ. ದೇಶಾದ್ಯಾಂತ ಬಿಡುಗಡೆಯಾದ ಚಿತ್ರಗಳ ಮೂಲಕ ನನಗೆ ಗೌರವ ಹಾಗೂ ಜನಪ್ರಿಯತೆ ಬಂದಿದೆ” ಎಂದಿದ್ದಾರೆ.
ದಿನಾಂಕ 5-2-2026ರಂದು “ಕಾಟನ್ ಪೇಟೆ” ಚಲನಚಿತ್ರ ಬಿಡುಗಡೆ ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರು ಪ್ರೇಮ್ ಅವರನ್ನು ವೈಯಕ್ತಿಕವಾಗಿ ಗುರಿಯಾಗಿಸಿ ಸಾರ್ವಜನಿಕ ವೇದಿಕೆಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಸಂಬಂಧ ಸಾರ್ವಜನಿಕ ವೇದಿಕೆಗಳಾದ ಯೂಟ್ಯೂಬ್ ಮತ್ತು ಕೆಲವು ಮಾಧ್ಯಮಗಳಲ್ಲಿ ನನ್ನ ಬಗ್ಗೆ ಪ್ರಚಾರವಾಗುತ್ತಿದ್ದು, ತುಂಬಾ ಅವಮಾನವಾಗುತ್ತಿದೆ.
ಸಾರ್ವಜನಿಕವಾಗಿ ನನಗೆ ವೈಯಕ್ತಿಕವಾಗಿ ನಿಂದಿಸಿ ನನ್ನ ಗೌರವಾಯುತವಾದ ವೃತ್ತಿ ಜೀವನಕ್ಕೆ ಧಕ್ಕೆ ಉಂಟುಮಾಡಿ ಮಾನಹಾನಿ ಮಾಡಿರುವ ಕನಕಪುರ ಶ್ರೀನಿವಾಸ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರೇಮ್ ದೂರಿನಲ್ಲಿ ಕೋರಿದ್ದಾರೆ.

ಫಿಲ್ಮ್ ಚೇಂಬರ್ಗೆ ದೂರು
ಇನ್ನು ಜೋಗಿ ಪ್ರೇಮ್ ಹಾಗೂ ಎ.ಪಿ. ಅರ್ಜುನ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆ ಜಯಮಾಲಾ ಅವರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ.
ಇದನ್ನು ನೋಡಿ : BREAKING|`ನಮ್ಮ ಮೆಟ್ರೋ’ ಪ್ರಯಾಣಿಕರಿಗೆ ಬಿಗ್ ಶಾಕ್: ನಿರ್ಧಾರದಂತೆ ನಾಳೆಯಿಂದಲೇ `ದರ ಏರಿಕೆ’ ಫಿಕ್ಸ್.!




