Cinema News : ಚಿತ್ರರಂಗದ ಯಾವುದೇ ಹಿನ್ನೆಲೆ ಇಲ್ಲದೇ, ಹಳ್ಳಿಯಿಂದ ಬಂದು ಯಶಸ್ಸು ಕಂಡವರು ಆರ್. ಚಂದ್ರು. ನಿರ್ದೇಶಕನಾಗಿ, ನಿರ್ಮಾಪಕನಾಗಿ ಯಶಸ್ಸುಗಳಿಸಿರುವ ಚಂದ್ರು ಅವರಿಗೆ ಗೌರವ ಡಾಕ್ಟರೇಟ್ ಲಭಿಸುತ್ತಿದೆ.

Cinema News : ತಾಜ್ ಮಹಲ್’, ‘ಚಾರ್ಮಿನಾರ್’, ‘ಕಬ್ಜ’ ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶಿಸಿರುವ ನಿರ್ದೇಶಕ, ನಿರ್ಮಾಪಕ ಆರ್. ಚಂದ್ರುಗೆ ಮಣಿಪುರ ಇಂಟರ್ನ್ಯಾಷನಲ್ ಯೂನಿವರ್ಸಿಟಿ ಗೌರವ ಡಾಕ್ಟರೇಟ್ ಘೋಷಿಸಿದೆ.
ಸಿನಿಮಾ ಹಾಗೂ ಸಮಾಜ ಸೇವಾ ಕ್ಷೇತ್ರಗಳಲ್ಲಿ ಆರ್. ಚಂದ್ರು ಅವರು ಸಲ್ಲಿಸಿರುವ ಮಹತ್ವದ ಕೊಡುಗೆಯನ್ನು ಗುರುತಿಸಿ ಈ ಗೌರವ ನೀಡಲಾಗುತ್ತಿದೆ ಎಂದು ವಿಶ್ವವಿದ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕಿನ ಕೇಶವವಾರ ಹಳ್ಳಿಯಿಂದ ಬಂದ ಒಬ್ಬ ಸಾಮಾನ್ಯ ರೈತನ ಮಗ ಇಂದು ಯಶಸ್ವಿ ನಿರ್ದೇಶಕ–ನಿರ್ಮಾಪಕರಾಗಿ ಬೆಳೆದಿರುವುದು ಅನೇಕ ಯುವಕರಿಗೆ ಪ್ರೇರಣೆಯಾಗಿದೆ ಎಂದು ಮಣಿಪುರ ಯೂನಿವರ್ಸಿಟಿ ಶ್ಲಾಘಿಸಿದೆ.
ಆರ್. ಚಂದ್ರು ಅವರು ‘ಆರ್ಸಿ ಸ್ಟುಡಿಯೋಸ್’ ಮೂಲಕ ನಿರ್ಮಾಪಕರಾಗಿ ನೂರಾರು ಜನರಿಗೆ ಉದ್ಯೋಗ ಕಲ್ಪಿಸಿರುವ ಅವರು, ಪರಿಸರ ಸಂರಕ್ಷಣೆ ಮತ್ತು ಕೃಷಿ ಸೇವೆಯಲ್ಲಿಯೂ ಸಕ್ರಿಯರಾಗಿದ್ದಾರೆ.

ಇದನ್ನೂ ಓದಿ : Toxic: ತೆಲುಗು ರಾಜ್ಯಗಳ ವಿತರಣೆ ಹಕ್ಕು ಮಾರಾಟ – ಬೃಹತ್ ಮೊತ್ತ ಕೊಟ್ಟ ದಿಲ್ ರಾಜು
ಶಿಡ್ಲಘಟ್ಟದಲ್ಲಿ ಮಳೆನೀರು ಕೊಯ್ಲು ಯೋಜನೆ, ಆಧುನಿಕ ಕೃಷಿ ಪದ್ಧತಿ ಮೂಲಕ ಒಣ ಭೂಮಿಯನ್ನು ಹಸಿರಾಗಿಸಿರುವುದು, ಒಂದು ಲಕ್ಷಕ್ಕೂ ಅಧಿಕ ಗಿಡಗಳನ್ನು ನೆಟ್ಟಿರುವುದು ಹಾಗೂ ಕೋವಿಡ್ ಮಹಾಮಾರಿ ಸಮಯದಲ್ಲಿ ನಡೆಸಿದ ಜನಪರ ಕಾರ್ಯಗಳನ್ನು ವಿಶ್ವವಿದ್ಯಾಲಯ ವಿಶೇಷವಾಗಿ ಗುರುತಿಸಿದೆ.
ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಡಾ. ಹರಿಕುಮಾರ್ ಪಲ್ಲತಡ್ಕ ಅವರು, “ದಕ್ಷಿಣ ಭಾರತದ ಹೆಮ್ಮೆ ಹಾಗೂ ಈಶಾನ್ಯ ಭಾರತದ ಚೈತನ್ಯವನ್ನು ಒಂದುಗೂಡಿಸುವ ಉದ್ದೇಶದಿಂದ ಈ ಗೌರವ ಡಾಕ್ಟರೇಟ್ ಅನ್ನು ಆರ್. ಚಂದ್ರು ಅವರಿಗೆ ನೀಡಲಾಗುತ್ತಿದೆ” ಎಂದಿದ್ದಾರೆ.
ವಿಶ್ವವಿದ್ಯಾಲಯದ ಮುಂದಿನ ಘಟಿಕೋತ್ಸವ ಅಥವಾ ವಿಶೇಷ ಸಮಾರಂಭದಲ್ಲಿ ಈ ಪದವಿಯನ್ನು ಅಧಿಕೃತವಾಗಿ ಪ್ರದಾನ ಮಾಡಲಾಗುವುದು ಎಂದು ತಿಳಿಸಲಾಗಿದೆ.

ಮಣಿಪುರ ಇಂಟರ್ನ್ಯಾಷನಲ್ ಯೂನಿವರ್ಸಿಟಿ ಮಣಿಪುರ ಸರ್ಕಾರದಿಂದ ಸ್ಥಾಪಿಸಲ್ಪಟ್ಟ ಸ್ವಾಯತ್ತ, ಶಾಸನಬದ್ಧ ಅಂತರಾಷ್ಟ್ರೀಯ ವಿಶ್ವವಿದ್ಯಾಲಯವಾಗಿದ್ದು, ಯುಜಿಸಿ (UGC) ಮಾನ್ಯತೆ ಪಡೆದಿದೆ.
ಈಶಾನ್ಯ ಭಾರತದ ಸಂಶೋಧನೆ ಹಾಗೂ ನಾವೀನ್ಯತೆ ಕ್ಷೇತ್ರದಲ್ಲಿ ಪ್ರಮುಖ ಸ್ಥಾನ ಹೊಂದಿದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
MUST WATCH : ಭರ್ಜರಿ ಬೌಲಿಂಗ್ ಮಾಡಿದ ಹೆಬ್ಬಾಳ್ಕರ್ ಕ್ಲೀನ್ ಬೋಲ್ಡ್ ಆದ ಸತೀಶ್ ಜಾರಕಿಹೊಳಿ




