Valentines Day ಹಿನ್ನೆಲೆ ಫೆ.14 ರಂದು ನಂದಿ ಗಿರಿಧಾಮ ಬಂದ್.

ಪ್ರೇಮಿಗಳ ದಿನವನ್ನು ಪ್ರತಿ ವರ್ಷ ಫೆಬ್ರವರಿ 14ರಂದು ಆಚರಿಸಲಾಗುತ್ತದೆ. ಪ್ರಪಂಚದಾದ್ಯಂತದ ಅನೇಕ ಜನರು ಈ ದಿನ ತಮ್ಮ ಪ್ರೀತಿಯ ಸಂದೇಶಗಳೊಂದಿಗೆ ಕಾರ್ಡ್ಗಳು, ಹೂವುಗಳು ಅಥವಾ ಚಾಕೊಲೇಟ್ಗಳನ್ನು ಕಳುಹಿಸುವ ಮೂಲಕ ಇನ್ನೊಬ್ಬರಿಗೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. Valentines Day ಬಹಳ ಜನಪ್ರಿಯವಾದ ದಿನವಾಗಿದೆ. ಪ್ರೀತಿಪಾತ್ರರ ನಡುವೆ ಈ ದಿನದಂದು ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳಲಾಗುತ್ತದೆ.
ನಂದಿ ಗಿರಿಧಾಮ ಬಂದ್
ಫೆಬ್ರವರಿ 14ರಂದು ಪ್ರೇಮಿಗಳ ದಿನಾಚರಣೆ ಎಲ್ಲೆಡೆ ಆಚರಿಸಲಾಗುತ್ತದೆ. ಆದರೆ ಪ್ರೇಮಿಗಳಿಗೆ ಶಾಕ್ ಎದುರಾಗಿದ್ದು, ಫೆಬ್ರವರಿ 14ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ವಿಶ್ವವಿಖ್ಯಾತ ನಂದಿ ಗಿರಿಧಾಮ ಬಂದ್ ಇರಲಿದೆ.
ಇದನ್ನು ಓದಿ : ಅರವಿಂದ್ ರೆಡ್ಡಿಗೆ ಬೆದರಿಕೆ ಪತ್ರ – Sandalwood ನಟಿಯ ಸ್ನೇಹಿತ ಅರೆಸ್ಟ್!

ಜಿ. ಪ್ರಭು ಅಧಿಕೃತ ಆದೇಶ – Valentines Day
ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ನಂದಿ ಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಈ ಕುರಿತು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಜಿ. ಪ್ರಭು ಅಧಿಕೃತ ಆದೇಶ ಹೊರಡಿಸಿದ್ದಾರೆ.
ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮ
ಪ್ರತಿ ವರ್ಷ ಪ್ರೇಮಿಗಳ ದಿನದಂದು ನಂದಿ ಗಿರಿಧಾಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕ-ಯುವತಿಯರು ಹಾಗೂ ಪ್ರವಾಸಿಗರು ಆಗಮಿಸುವ ಹಿನ್ನೆಲೆ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಜಿಲ್ಲಾಡಳಿತದ ಈ ಆದೇಶದಿಂದ ಪ್ರೇಮಿಗಳ ದಿನದಂದು ನಂದಿ ಗಿರಿಧಾಮಕ್ಕೆ ಹೋಗಲು ಪ್ಲಾನ್ ಮಾಡಿಕೊಂಡಿದ್ದ ಪ್ರವಾಸಿಗರು ನಿರಾಸೆಗೊಂಡಿದ್ದಾರೆ.
ಇದನ್ನು ನೋಡಿ : ಭರ್ಜರಿ ಬೌಲಿಂಗ್ ಮಾಡಿದ ಹೆಬ್ಬಾಳ್ಕರ್ ಕ್ಲೀನ್ ಬೋಲ್ಡ್ ಆದ ಸತೀಶ್ ಜಾರಕಿಹೊಳಿ




