Arvind Reddy ಗೆ ಕೋಟ್ಯಂತರ ಹಣಕ್ಕೆ ಬೇಡಿಕೆ ಇಟ್ಟಿರುವ ಆರೋಪ ಕೇಳಿಬಂದಿದೆ.

Bengaluru : ಉದ್ಯಮಿ ಅರವಿಂದ್ ರೆಡ್ಡಿಗೆ ಪತ್ರದ ಮೂಲಕ ಬೆದರಿಕೆ ಮತ್ತು ಕೋಟ್ಯಂತರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿರುವ ಆರೋಪ ಪ್ರಕರಣ ಬೆಳಕಿಗೆ ಬಂದಿದೆ. ಉದ್ಯಮಿ Arvind Reddy ಗೆ ಹೆಸರಿನಲ್ಲಿ ಬೆದರಿಕೆ ಪತ್ರ ಬಂದಿತ್ತು. ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ವೈಶಾಖ ಎಂಬಾತನನ್ನHAL ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
Arvind Reddy ಗೆ ಬೆದರಿಕೆ ಪತ್ರ
ಉದ್ಯಮಿ ಅರವಿಂದ್ ರೆಡ್ಡಿಗೆ ಬ್ಲೂ ಡಾಟ್ ಕೊರಿಯರ್ ಮುಖಾಂತರ ಬೆದರಿಕೆ ಪತ್ರ ಬಂದಿತ್ತು. ಇತ್ತೀಚೆಗೆ ಅರವಿಂದ್ ರೆಡ್ಡಿ ವಿರುದ್ಧ ಒಬ್ಬ ನಟಿ ದೂರು ದಾಖಲಿಸಿದ್ದಳು. ಇದೇ ಪ್ರಕರಣಕ್ಕೆ ಸಂಬಂಧಿಸಿ ಉದ್ಯಮಿಗೆ ಈ ಬೆದರಿಕೆ ಪತ್ರ ಬಂದಿದೆ. ಬೆದರಿಕೆ ಪತ್ರ ನೋಡಿ ಅರವಿಂದ್ ರೆಡ್ಡಿ ಎಚ್ಎಎಲ್ ಠಾಣೆಗೆ ದೂರು ನೀಡಿದ್ದಾರೆ. ತನಿಖೆಯ ವೇಳೆ ನಟಿಯ ಗೆಳೆಯ ಈ ಪತ್ರ ಕಳುಹಿಸುವುದು ಎಂಬುದು ಪತ್ತೆಯಾಗಿದೆ.

ಇದನ್ನು ಓದಿ : ಪಾಕಿಸ್ತಾನದಲ್ಲಿ ಭೀಕರ ಆತ್ಮಾಹುತಿ ಬಾಂಬ್ ದಾಳಿ..!
6ರಿಂದ 7 ಕೋಟಿ ರೂಪಾಯಿ ಕಳುಹಿಸಬೇಕು
ಇನ್ನು ಬೆದರಿಕೆ ಪತ್ರದಲ್ಲಿ ಮಹಿಳೆಯೊಂದಿಗೆ ಇರುವ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಎಂದು ಉಲ್ಲೇಖಿಸಿ, ಕ್ಷಮಾಪಣಾ ಪತ್ರದ ಜೊತೆಗೆ 6ರಿಂದ 7 ಕೋಟಿ ರೂಪಾಯಿ ಹಣ ಕಳುಹಿಸಬೇಕು. ಇಲ್ಲದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಲಾಗಿತ್ತು.
ಆರೋಪಿ ಅರೆಸ್ಟ್
ಈ ಪತ್ರವನ್ನು ಗಮನಿಸಿದ ಉದ್ಯಮಿ ಅರವಿಂದ್ ರೆಡ್ಡಿ ಎಚ್ಎಎಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ಆಧರಿಸಿ ತನಿಖೆ ಕೈಗೊಂಡ ಪೊಲೀಸರು, ನಟಿಯ ಗೆಳೆಯ ವೈಶಾಖ್ ಈ ಬೆದರಿಕೆ ಪತ್ರ ಕಳುಹಿಸಿರುವುದು ಎಂಬುದನ್ನು ಪತ್ತೆಹಚ್ಚಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ಮುಂದಿನ ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನು ನೋಡಿ : ಚಿಕ್ಕಮಗಳೂರಲ್ಲಿ ಘೋರ ದುರಂತ : ನದಿಯ ದಡದಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದು ವ್ಯಕ್ತಿ ಸಾವು!




