Sandalwood ನಟಿ ಉದ್ಯಮಿ ನಂಟಿನ ಕೇಸ್ಗೆ ಟ್ವಿಸ್ಟ್ ಸಿಕ್ಕಿದೆ.

Sandalwood ನಟಿ ಮತ್ತು ಉದ್ಯಮಿ ಅರವಿಂದ್ ರೆಡ್ಡಿ ನಂಟಿನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಈ ಹಿಂದೆ ಭಾರೀ ಚರ್ಚೆಗೆ ಕಾರಣವಾಗಿದ್ದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ನಟಿಗೆ ಉದ್ಯಮಿ ಅರವಿಂದ್ ರೆಡ್ಡಿ ಕೇವಲ ಕಾರು ಮಾತ್ರವಲ್ಲದೆ ಲಕ್ಷಾಂತರ ರೂಪಾಯಿ ಮೌಲ್ಯದ ದುಬಾರಿ ಉಡುಗೊರೆಗಳನ್ನು ನೀಡಿದ್ದಾರೆ ಎಂಬುದಕ್ಕೆ ಸ್ಪಷ್ಟ ಸಾಕ್ಷ್ಯಗಳು ಲಭ್ಯವಾಗಿವೆ.

ಅರವಿಂದ್ ರೆಡ್ಡಿ ನಟಿಯೊಂದಿಗೆ ಲಿವ್-ಇನ್ ರಿಲೇಶನ್ಶಿಪ್
ಮಾಹಿತಿಗಳ ಪ್ರಕಾರ, ಅರವಿಂದ್ ರೆಡ್ಡಿ ನಟಿಯೊಂದಿಗೆ ಲಿವ್-ಇನ್ ರಿಲೇಶನ್ಶಿಪ್ನಲ್ಲಿ ಇದ್ದ ಸಂದರ್ಭದಲ್ಲೇ ಆಕೆಗೆ ಹಲವು ಬೆಲೆಬಾಳುವ ವಸ್ತುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ ಎನ್ನಲಾಗಿದೆ. ಈ ಪೈಕಿ ಸುಮಾರು 7 ಲಕ್ಷ ರೂಪಾಯಿ ಮೌಲ್ಯದ ಟಿವಿ, 1 ಲಕ್ಷ ರೂಪಾಯಿ ಮೌಲ್ಯದ ಹಾಸಿಗೆ, 10 ಲಕ್ಷ ರೂಪಾಯಿ ಮೌಲ್ಯದ ಫರ್ನಿಚರ್, 33 ಸಾವಿರ ರೂಪಾಯಿ ಮೌಲ್ಯದ ಡೈನಿಂಗ್ ಸೆಟ್, 1.30 ಲಕ್ಷ ರೂಪಾಯಿ ಮೌಲ್ಯದ ಬೆಡ್, ಹಾಗೂ ಸುಮಾರು 15 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನು ಓದಿ : Haveri|ಸಾಲ ಬಾಧೆಯಿಂದ ರೈತ ಆತ್ಮಹತ್ಯೆಗೆ ಶರಣು.!

Sandalwood ವಲಯದಲ್ಲೂ ಸಾಕಷ್ಟು ಚರ್ಚೆ
ಈ ಎಲ್ಲಾ ಉಡುಗೊರೆಗಳಿಗೆ ಸಂಬಂಧಿಸಿದ ದಾಖಲೆಗಳು ಮತ್ತು ಸಾಕ್ಷ್ಯಗಳು ಇದೀಗ ತನಿಖಾ ಸಂಸ್ಥೆಗಳ ಕೈಗೆ ಸಿಕ್ಕಿದ್ದು, ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಈ ಬೆಳವಣಿಗೆಯಿಂದಾಗಿ ಸ್ಯಾಂಡಲ್ವುಡ್ ವಲಯದಲ್ಲೂ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈ ಪ್ರಕರಣದಲ್ಲಿ ಮುಂದಿನ ದಿನಗಳಲ್ಲಿ ಇನ್ನೇನು ಸತ್ಯಾಂಶಗಳು ಬಹಿರಂಗವಾಗಲಿವೆ.

ಇದನ್ನು ನೋಡಿ : 2 ತಿಂಗಳ ಗರ್ಭಿಣಿ ಆತ್ಮಹ*ತ್ಯೆಯ ಸುತ್ತ ಹಲವು ಅನುಮಾನಗಳ ಹುತ್ತ..!?




