ಊರಿನ ನೇಮೋತ್ಸವದಲ್ಲಿ ಭಾಗಿಯಾದ ನಟ Rakshith Shetty.

‘777 ಚಾರ್ಲಿ’ ಹಾಗೂ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾಗಳ ಭರ್ಜರಿ ಯಶಸ್ಸಿನ ಬಳಿಕ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸಿನಿಮಾದಿಂದ ದೂರು ಉಳಿದಿದ್ದಾರೆ. ಇತ್ತ Rakshith Shetty ಯನ್ನು ಮತ್ತೆ ಬೆಳ್ಳಿತೆರೆಯ ಮೇಲೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದು, ವಿಶೇಷವಾಗಿ ‘ರಿಚರ್ಡ್ ಆಂಟನಿ’ ಸಿನಿಮಾಗಾಗಿ ನಿರೀಕ್ಷೆ ಹೆಚ್ಚಾಗಿದೆ. ಈ ನಡುವೆ ರಕ್ಷಿತ್ ಶೆಟ್ಟಿ ಹೊಸ ಸಿನಿಮಾ ಅನೌನ್ಸ್ ಮಾಡಲಿದ್ದಾರಾ ಎನ್ನುವ ಸುದ್ದಿ ಹರಿದಾಡುತ್ತಿದೆ.
ದೈವದ ಮೊರೆ
ಹೊಸ ಸಿನಿಮಾ ಮುನ್ನ ನಟ ರಕ್ಷಿತ್ ಶೆಟ್ಟಿ ದೈವದ ಮೊರೆ ಹೋಗಿರುವುದು ಅಭಿಮಾನಿಗಳ ಗಮನ ಸೆಳೆದಿದೆ. ಕರಾವಳಿಯಲ್ಲಿ ಕಾರ್ಣಿಕ ದೈವವೆಂದು ಪ್ರಸಿದ್ಧಿಯಾದ ದೈವರಾಜ ಬಬ್ಬುಸ್ವಾಮಿ ದೈವದ ಉಡುಪಿ ಅಲೆವೂರಿನಲ್ಲಿ ನಡೆದ ಸಿರಿ ಸಿಂಗಾರ ನೇಮೋತ್ಸವದಲ್ಲಿ ರಕ್ಷಿತ್ ಶೆಟ್ಟಿ ಭಾಗಿಯಾಗಿದ್ದಾರೆ. ನೇಮೋತ್ಸವದಲ್ಲಿ ಭಾಗವಹಿಸಿ ಬಬ್ಬುಸ್ವಾಮಿ ದೈವದ ಅಭಯ ಪಡೆದುಕೊಂಡಿದ್ದಾರೆ.

ಇದನ್ನು ಓದಿ : Sandalwood ನಟಿ, ಉದ್ಯಮಿ ಅರವಿಂದ್ ರೆಡ್ಡಿ ನಂಟಿನ ಕೇಸ್ಗೆ ಬಿಗ್ ಟ್ವಿಸ್ಟ್
ಅಲೆವೂರು ಮನೆತನದ ಕುಡಿ ‘ಸಿಂಪಲ್ ಸ್ಟಾರ್’
ರಕ್ಷಿತ್ ಶೆಟ್ಟಿ ಅಲೆವೂರು ಮನೆತನದ ಕುಡಿ ಎಂಬುದು ವಿಶೇಷ. ಅಲೆವೂರು ದೊಡ್ಡಮನೆ ಕರ್ನಾಟಕ ಕರಾವಳಿಯ ಪ್ರಸಿದ್ಧ ಗುತ್ತು ಮನೆತನವಾಗಿದ್ದು, ಬಂಟ ಸಮುದಾಯಕ್ಕೆ ಸೇರಿದ ಈ ಕುಟುಂಬದ ಸಂತಾನವೇ ರಕ್ಷಿತ್ ಶೆಟ್ಟಿ. ಈ ಕಾರಣದಿಂದಲೇ ಅಲೆವೂರು ಬಬ್ಬುಸ್ವಾಮಿ ದೈವದ ನೇಮೋತ್ಸವದಲ್ಲಿ ಅವರ ಭಾಗವಹಿಸುವಿಕೆ ಇನ್ನಷ್ಟು ಮಹತ್ವ ಪಡೆದುಕೊಂಡಿದೆ.
ಎಲ್ಲಿ ಹೋದ್ರು ರಕ್ಷಿತ್?
ಇತ್ತೀಚಿನ ದಿನಗಳಲ್ಲಿ ರಕ್ಷಿತ್ ಶೆಟ್ಟಿ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳದೆ ಇದ್ದ ಕಾರಣ, “ಸಡನ್ ಆಗಿ ಏನಾಯ್ತು? ಎಲ್ಲಿ ಹೋದ್ರು ರಕ್ಷಿತ್?” ಎಂದು ಅಭಿಮಾನಿಗಳು ಕುತೂಹಲಗೊಂಡಿದ್ದರು.
ಇದೀಗ ನೇಮೋತ್ಸವದಲ್ಲಿ ಅವರ ಹಾಜರಾತಿ ಕಂಡ ಅಭಿಮಾನಿಗಳಿಗೆ ಸಂತಸವಾಗಿದೆ. ಜೊತೆಗೆ ಹೊಸ ಸಿನಿಮಾದ ಬಗ್ಗೆ ಭರವಸೆಯೂ ಮೂಡಿದೆ.

ಹೊಸ ಸಿನಿಮಾ ಅನೌನ್ಸ್ ಮಾಡಲಿದ್ದಾರಾ?
ಇನ್ನೊಂದೆಡೆ, ನಟ ರಕ್ಷಿತ್ ಶೆಟ್ಟಿ ಸ್ಪರ್ಶ್ ಮಸಾಲಾ ಮಾಲೀಕ ಶಿವಕುಮಾರಯ್ಯ ಅವರ ಬಯೋಪಿಕ್ನಲ್ಲಿ ನಟಿಸಲಿದ್ದಾರೆ ಎಂಬ ಮಾತು ಕೂಡ ಕೇಳಿಬರುತ್ತಿದೆ.
ಅಧಿಕೃತ ಘೋಷಣೆ ಇನ್ನಷ್ಟೇ ಬಾಕಿ ಇದ್ದರೂ, ದೈವದ ಆಶೀರ್ವಾದ ಪಡೆದುಕೊಂಡಿರುವ ರಕ್ಷಿತ್ ಶೆಟ್ಟಿ ಶೀಘ್ರದಲ್ಲೇ ಹೊಸ ಸಿನಿಮಾ ಅನೌನ್ಸ್ ಮಾಡಲಿದ್ದಾರೆ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿದೆ.
ಇದನ್ನು ನೋಡಿ : ಬಾಗಲಕೋಟೆಯಲ್ಲಿ ಅಮಾನವೀಯ ಕೃತ್ಯ: ಮಾನಸಿಕ ಅಸ್ವಸ್ಥೆ ಮೇಲೆ ಅತ್ಯಾಚಾರ?




